ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ 108 ದಿನಗಳ ಬಿಸಿಯೂಟದ ಬದಲು ಆಹಾರ ಭದ್ರತೆ ಭತ್ಯೆಯಂತೆ ಆಹಾರ ಧಾನ್ಯವಿತರಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಆಹಾರ ಧಾನ್ಯಗಳನ್ನು ಈಗಾಗಲೇ ಸರಬರಾಜು ಮಾಡಿರುವ ತಾಲೂಕು, ಜಿಲ್ಲೆಗಳು ಕೂಡಲೇ ಮಕ್ಕಳಿಗೆ ವಿತರಣೆ ಕಾರ್ಯ ಆರಂಭಿಸಬೇಕು. ಆಹಾರ ಸಾಮಗ್ರಿ ಸರಬರಾಜಾಗದೆ ಇರುವ ತಾಲೂಕು, ಜಿಲ್ಲೆಗಳು ಕೂಡಲೇ ಕೆಎಫ್ಸಿಎಸ್ಸಿ ಸಂಸ್ಥೆಯನ್ನು ಸಂಪರ್ಕಿಸಿ ಆಹಾರ ಧಾನ್ಯ ಪಡೆದುಕೊಂಡ ಕೂಡಲೇ ವಿತರಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಕ್ಷಣ ಇಲಾಖೆ ಆದೇಶ ಮಾಡಿದೆ.
ಸಾರ್ವತ್ರಿಕ ರಜೆ ಹೊರತುಪಡಿಸಿ ಐದು ತಿಂಗಳಲ್ಲಿ 108 ದಿನಗಳ ಆಹಾರ ಸಾಮಗ್ರಿಗಳನ್ನು 1ರಿಂದ 10ನೇ ತರಗತಿ ಮಕ್ಕಳಿಗೆ ನೀಡಲಾಗುತ್ತದೆ. ಮೊದಲ ಹಂತದಲ್ಲಿ ಜೂನ್ ಹಾಗೂ ಜುಲೈ ತಿಂಗಳ 55 ದಿನಗಳ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತದೆ. ಎರಡನೇ ಹಂತದಲ್ಲಿ ಆಗಸ್ಟ್, ಸೆಪ್ಟೆಂಬರ್ ಹಾಗೂ ಆಕ್ಟೋಬರ್ ತಿಂಗಳ 55 ದಿನಗಳ ಆಹಾರ ಧಾನ್ಯ ನೀಡಲಾಗುತ್ತದೆ. ಮೊದಲ ಹಂತದಲ್ಲಿ ಮಕ್ಕಳಿಗೆ ಆಹಾರ ಧಾನ್ಯ (ಅಕ್ಕಿ ಹಾಗೂ ಗೋಧಿ) ಹಾಗೂ ಪರಿವರ್ತನಾ ವೆಚ್ಚದ ಬದಲಿಗೆ ತೊಗರಿಬೇಳೆಯನ್ನು ನೀಡಲಾಗುತ್ತದೆ.
ಈಗಾಗಲೇ ಕೆಎಫ್ಸಿಎಸ್ಸಿ ಸಂಸ್ಥೆಗೆ ಜೂನ್ ಮತ್ತು ಜುಲೈ ತಿಂಗಳ 53 ದಿನಗಳಿಗೆ ಆಹಾರ ಧಾನ್ಯಗಳ ಪಟ್ಟಿಯನ್ನು ಸಲ್ಲಿಸಲಾಗಿದ್ದು, ಖರೀದಿ ಪ್ರಕ್ರಿಯೆ ಮುಗಿದು ಸರಬರಾಜು ಪ್ರಗತಿಯಲ್ಲಿದೆ. ಸಂಸ್ಥೆಯು ಆಹಾರ ಧಾನ್ಯಗಳನ್ನು ಈಗಾಗಲೇ ಸರಬರಾಜು ಮಾಡಿರುವ ತಾಲೂಕು ಜಿಲ್ಲೆಗಳು ಕೂಡಲೇ ಮಕ್ಕಳಿಗೆ ವಿತರಣೆ ಕಾರ್ಯ ಆರಂಭಿಸಬೇಕು. ಆಹಾರ ಸಾಮಗ್ರಿ ಸರಬರಾಜಾಗದೆ ಇರುವ ತಾಲೂಕು, ಜಿಲ್ಲೆಗಳು ಕೂಡಲೇ ಕೆಎಫ್ಸಿಎಸ್ಸಿ ಸಂಸ್ಥೆಯನ್ನು ಸಂಪರ್ಕಿಸಿ ಆಹಾರ ಧಾನ್ಯ ಪಡೆದುಕೊಂಡ ಕೂಡಲೇ ವಿತರಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಕ್ಷಣ ಇಲಾಖೆ ಆದೇಶ ಮಾಡಿದೆ.
ಎಷ್ಟು ಆಹಾರ ಧಾನ್ಯ ವಿತರಣೆ:
ಪ್ರತಿ ವಿದ್ಯಾರ್ಥಿಗೆ ಪ್ರತಿದಿನಕ್ಕೆ 100 ಗ್ರಾಂ ಅಕ್ಕಿ, 100 ಗ್ರಾಂ ಗೋದಿ, (1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ)
ಪ್ರತಿ ವಿದ್ಯಾರ್ಥಿಗೆ ಪ್ರತಿದಿನಕ್ಕೆ 150 ಗ್ರಾಂ ಅಕ್ಕಿ, 150 ಗ್ರಾಂ ಗೋದಿ (6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ)
ಪ್ರತಿ ವಿದ್ಯಾರ್ಥಿಗೆ ಪ್ರತಿದಿನಕ್ಕೆ 150 ಗ್ರಾಂ ಅಕ್ಕಿ, 150 ಗ್ರಾಂ ಗೋದಿ (9ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ)