ಬೆಂಗಳೂರು ಗ್ರಾಮಾಂತರ: ಜಿಲ್ಲೆಯ 1 ರಿಂದ 3 ವರ್ಷದೊಳಗಿನ ಮಕ್ಕಳಿಗೆ ಚೈಲ್ಡ್ ಹೆಲ್ಪ್ ಫೌಂಡೇಶನ್ ವತಿಯಿಂದ ಹೈಜೀನ್ ಕಿಟ್ ಮತ್ತು ಸ್ಲಿಪ್ -ಸ್ಯಾಕ್‌ಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮವು ಬೆಂಗಳೂರಿನ ಇಂಡ್ಲಬೆಲೆಯ ಅತ್ತಿಬೆಲೆಯಲ್ಲಿರುವ ಖಾಸಗಿ ಕನ್ವೆನ್ಷನ್ ಹಾಲ್‌ನಲ್ಲಿ ಆಯೋಜಿಸಲಾಗಿತ್ತು. ಅತ್ತಿಬೆಲೆ ಪುರಸಭೆ ಅಧ್ಯಕ್ಷ ಅಲ್ಲಾ ಬಕಾಶ್ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಹೈಜೀನ್ ಕಿಟ್ ಮತ್ತು ಸ್ಲಿಪ್ -ಸ್ಯಾಕ್‌ಗಳ ವಿತರಣೆ ನಮ್ಮ ಸೌಭಾಗ್ಯ. ಇವು ಬೆಚ್ಚಗಿರುತ್ತವೆ ಮತ್ತು ಸುರಕ್ಷಿತವಾಗಿರಿಸುತ್ತದೆ. ನಾವು ಇಲ್ಲಿಯವರೆಗೆ ಸುಮಾರು 700 ಹೈಜೀನ್ ಕಿಟ್ ಮತ್ತು ಸ್ಲಿಪ್ -ಸ್ಯಾಕ್‌ಗಳ ವಿತರಿಸಿದ್ದೇವೆ ಎಂದು ನಮಗೆ ನಿಜವಾಗಿಯೂ ಸಂತೋಷದ ವಿಚಾರ ಎಂದು ಚೈಲ್ಡ್ ಹೆಲ್ಪ್ ಫೌಂಡೇಷನ್‌ನ ಕರ್ನಾಟಕದ ವ್ಯವಸ್ಥಾಪಕ ಜಿಮ್ಸನ್. ವಿ.ರಾಜನ್ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಿಡಿಪಿಒ ಶ್ರೀಮತಿ ಕವಿತಾ, ಅತ್ತಿಬೆಲೆ ಪುರಸಭೆ ಉಪಾಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಮ್ಮ ವೆಂಕಟೇಶ್, ಸಂಘದ ಅಧ್ಯಕ್ಷ ಶ್ರೀ ಗಣೇಶ್, ಪುರಸಭೆ ಸದಸ್ಯರಾದ ಶ್ರೀ ಮುನಿರಾಜು, ಶ್ರೀಮತಿ ಮೀನಮ್ಮ, ಶ್ರೀಮತಿ ಕಾಂತ ಲಕ್ಷ್ಮಮ್ಮ, ಶ್ರೀಮತಿ ಸುವರ್ಣಮ್ಮ ಮತ್ತು ಸಿಎಚ್‌ಎಫ್ ಸಿಬ್ಬಂದಿ ಇದ್ದರು.
ಚೈಲ್ಡ್ ಹೆಲ್ಪ್ ಫೌಂಡೇಷನ್ ವತಿಯಿಂದ ಅಂಗನವಾಡಿ ಮಕ್ಕಳಿಗೆ ಹೈಜೀನ್ ಕಿಟ್ ವಿತರಣೆ
ಶ್ರೀ ಜಿಮ್ಸನ್ ವಿ ರಾಜನ್, ಶ್ರೀಮತಿ ಮಂಗಳಾ, ಶ್ರೀಮತಿ ಭುವನಾ, ಶ್ರೀಮತಿ ಗ್ಲಾಡಿ ಮತ್ತು ಶ್ರೀಮತಿ ಸುಶ್ಮಿತಾ ಸಹ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇನ್ನು ಈ ಕಾರ್ಯಕ್ರಮದ ಯಶಸ್ವಿಗೆ ಕಾರಣವಾದ ಅತ್ತಿಬೆಲೆ ಅಂಗನವಾಡಿ ಸಿಬ್ಬಂದಿಗೆ ಈ ಸಮಯದಲ್ಲಿ ಧನ್ಯವಾದ ತಿಳಿಸುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.