News

ವಲಸೆ ಕಾರ್ಮಿಕರಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಮೇ ಜೂನ್ ತಿಂಗಳಲ್ಲಿ ತಲಾ ಐದು ಕೆಜಿ ಅಕ್ಕಿ ವಿತರಣೆ

19 May, 2020 2:30 PM IST By:

ಇಡೀ ಜಗತ್ತನ್ನೇ ತಲ್ಲಣಿಸಿದ ಕೋವಿಡ್ ಸೋಂಕಿನಿಂದಾಗಿ ಜನಜೀವನ ತತ್ತರಿಸಿ ಹೋಗಿದೆ. ಒಂದು ಕಡೆ ವಲಸೆ ಕಾರ್ಮಿಕರು ತಮ್ಮ ಕುಟುಂಬದವರೊಂದಿಗೆ ಊರಿನತ್ತ ತೆರಳುತಿದ್ದರೆ ಇನ್ನು ಕೆಲವು ಪ್ರದೇಶದಲ್ಲಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಆದರೆ ಭಾರತದಲ್ಲಿ ಕೊರೋನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಕೊರೋನಾ ಲಾಕ್ ಡೌನ್ ಕಾರಣದಿಂದ ರಾಜ್ಯದಲ್ಲಿರುವ ವಲಸೆ ಕಾರ್ಮಿಕರಿಗೆ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಮೇ ತಿಂಗಳಲ್ಲಿ ತಲಾ ಐದು ಕೆಜಿ ಅಕ್ಕಿ, ಜೂನ್ ತಿಂಗಳಲ್ಲಿ ತಲಾ ಐದು ಕೆಜಿ ಅಕ್ಕಿ ಜೊತೆಗೆ ಒಂದು ಕುಟುಂಬಕ್ಕೆ ಎರಡು‌ ಕೆಜಿ‌ ಕಡಲೇ ಕಾಳು ವಿತರಣೆ ಮಾಡಲಾಗುವುದು ಎಂದು ಆಹಾರ ಸಚಿವ ಗೋಪಾಲಯ್ಯ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಪಡಿತರ ಕಾರ್ಡ್ ಹೊಂದಿರದ 40.19 ಲಕ್ಷ ಜನರಿಗೆ ಅನುಕೂಲವಾಗಲಿದ್ದು, ಬಿಬಿಎಂಪಿ ‌ಕಾರ್ಮಿಕ ಇಲಾಖೆ ಸಹಯೋಗದಲ್ಲಿ ವಿತರಣೆಗೆ ಕ್ರಮ ಕೈಗೊಂಡಿದ್ದೇವೆ ಎಂದರು.
1.27  ಕೋಟಿ ಅಂತ್ಯೋದಯ, ಬಿಪಿಎಲ್ ಕಾರ್ಡುದಾರರಿಗೆ ಪಡಿತರ ನೀಡಲಾಗುವುದು. ರಾಜ್ಯದಲ್ಲಿ ಲಾಕ್ ಡೌನ್ ಮುಂದುವರಿದಿದ್ದು, ಮೇ ಅಂತ್ಯದವರೆಗೆ ನಾಲ್ಕನೇ ಹಂತದಲ್ಲಿ ಮುಂದುವರಿಯಲಿದೆ. ಸರಕಾರಿ- ಖಾಸಗಿ ಬಸ್ ಸಂಚಾರಕ್ಕೆ ಅವಕಾಶ ನೀಡಿದ್ದು, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡಲಾಗಿದೆ.