ತೋಟಗಾರಿಕೆ ಬೆಳೆಗಳಿಗೆ ಬೆಳೆಹಾನಿಯಿಂದಾಗಿ ಸಾಲ ಮರುಪಾವತಿಸಲು ವಿಳಂಬವಾಗಿದ್ದ ರೈತರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ. 90 ರಷ್ಟು ರಿಯಾಯಿತಿ ನೀಡಿದೆ. ಸುಸ್ತಿದಾರರು ಋಣ ಮುಕ್ತರಾಗಲು ಇದೊಂದು ಸುವರ್ಣಾವಕಾಶ.
ಹೌದು ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ದಾಳಿಂಬೆ ಸೇರಿ ಹಲವು ತೋಟಗಾರಿಕೆ ಬೆಳೆ ಬೆಳೆಯಲು ಹಾಗೂ ಕೃಷಿ ಸಾಲ ಪಡೆದ ಸುಸ್ತಿದಾರರಿಗೆ ಸಾಲ ಮರುಪಾವತಿಯಲ್ಲಿ ಆಕರ್ಷಕ ರಿಯಾಯಿತಿ ನೀಡಲಾಗಿದೆ.
20 ಲಕ್ಷದವರೆಗೆ ಸಾಲ ಪಡೆದವರು ಏಕ ಕಾಲದಲ್ಲಿ ಸಾಲ ಇತ್ಯರ್ಥ ಮಾಡಿಕೊಳ್ಳಬಹುದಾಗಿದೆ. ಇತ್ಯರ್ಥವಾದ ಸಾಲದ ಮರುಪಾವತಿಯನ್ನು ಒಂದೇ ಕಂತಿನಲ್ಲಿ ಪಾವತಿಸಿದರೆ ಶೇ. 15 ರಿಂದ ಶೇ. 90 ವರೆಗೆ ಆಕರ್ಷಕ ರಿಯಾಯಿತಿ ಕೊಡಲಾಗುತ್ತಿದೆ. ರೈತರು ಡಿಸೆಂಬರ್ 31ರೊಳಗೆ ಹಣ ಪಾವತಿ ಮಾಡಿ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಣೆ ತಿಳಿಸಿದೆ.