News

ಈ ಹಣಕಾಸು ವರ್ಷದಲ್ಲಿ GST ಅಷ್ಟೇ ಅಲ್ಲ ನೇರ ತೆರಿಗೆ ಸಂಗ್ರಹದಲ್ಲೂ ಹೆಚ್ಚಳ

19 June, 2023 1:54 PM IST By: Maltesh
direct tax collection increase in this financial year

023-24ರ ಹಣಕಾಸು ವರ್ಷದಲ್ಲಿ ಒಟ್ಟು ನೇರ ತೆರಿಗೆ ಸಂಗ್ರಹವು 12.73% ಬೆಳವಣಿಗೆಯನ್ನು ದಾಖಲಿಸಿದೆ.

2023-24ರ ಹಣಕಾಸು ವರ್ಷದಲ್ಲಿ ನಿವ್ವಳ ನೇರ ತೆರಿಗೆ ಸಂಗ್ರಹವು 11.18% ಕ್ಕಿಂತ ಹೆಚ್ಚಾಗಿದೆ

2023-24ರ ಹಣಕಾಸು ವರ್ಷದಲ್ಲಿ ಮುಂಗಡ ತೆರಿಗೆ ಸಂಗ್ರಹವು 17.06.2023 ರ ವೇಳೆಗೆ 1,16,776 ಕೋಟಿ ರೂ.ಗಳಷ್ಟಿದ್ದು, ಇದು 13.70% ಬೆಳವಣಿಗೆ ಸಾಧಿಸಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ 39,578 ಕೋಟಿ ರೂ.ಗಳ ಮರುಪಾವತಿ ಮಾಡಲಾಗಿದೆ.

2023-24ರ ಹಣಕಾಸು ವರ್ಷದ ನೇರ ತೆರಿಗೆ ಸಂಗ್ರಹದ ಅಂಕಿಅಂಶಗಳ ಪ್ರಕಾರ, 17.06.2023 ರವರೆಗೆ ನಿವ್ವಳ ಸಂಗ್ರಹವು 3,79,760 ಕೋಟಿ ರೂ.ಗಳಷ್ಟಾಗಿದೆ, ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ (ಅಂದರೆ 2022-23ರ ಹಣಕಾಸು ವರ್ಷದ ಇದೇ ಅವಧಿಯಲ್ಲಿ) ಸಂಗ್ರಹವಾದ 3,41,568 ಕೋಟಿ ರೂ.ಗಳಿಗೆ  ಹೋಲಿಸಿದರೆ, ಇದು 11.1% ಹೆಚ್ಚಳವನ್ನು ಪ್ರತಿನಿಧಿಸುತ್ತದೆ.

Free Smartphones : ಮಹಿಳೆಯರಿಗೆ ಸ್ಮಾರ್ಟ್‌ ಫೋನ್‌ ಖರೀದಿಗೆ ಹಣ

17.06.2023ರ ವರೆಗೆ ನಿವ್ವಳ ನೇರ ತೆರಿಗೆ ಸಂಗ್ರಹ 3,79,760 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಕಾರ್ಪೊರೇಷನ್ ತೆರಿಗೆ (ಸಿಐಟಿ) 1,56,949 ಕೋಟಿ ರೂ.ಗಳು (ಮರುಪಾವತಿಯ ನಿವ್ವಳ) ಮತ್ತು ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (ಎಸ್ಟಿಟಿ) ಸೇರಿದಂತೆ ವೈಯಕ್ತಿಕ ಆದಾಯ ತೆರಿಗೆ (ಪಿಐಟಿ) 2,22,196 ಕೋಟಿ ರೂ.ಸೇರಿವೆ.

2023-24ರ ಹಣಕಾಸು ವರ್ಷದಲ್ಲಿ ನೇರ ತೆರಿಗೆಗಳ ಒಟ್ಟು ಸಂಗ್ರಹವು (ಮರುಪಾವತಿಗೆ ಸರಿಹೊಂದಿಸುವ ಮೊದಲು) ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಸಂಗ್ರಹವಾದ 3,71,982 ಕೋಟಿ ರೂ.ಗೆ ಹೋಲಿಸಿದರೆ 4,19,338 ಕೋಟಿ ರೂ.ಗಳಷ್ಟಿದ್ದು, 2022-23ರ ಹಣಕಾಸು ವರ್ಷದ ಸಂಗ್ರಹಕ್ಕಿಂತ 12.73% ಬೆಳವಣಿಗೆಯನ್ನು ದಾಖಲಿಸಿದೆ.

ಒಟ್ಟು 4,19,338 ಕೋಟಿ ರೂ.ಗಳ ಸಂಗ್ರಹದಲ್ಲಿ ಕಾರ್ಪೊರೇಷನ್ ತೆರಿಗೆ (ಸಿಐಟಿ) 1,87,311 ಕೋಟಿ ರೂ., ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (ಎಸ್ಟಿಟಿ) ಸೇರಿದಂತೆ ವೈಯಕ್ತಿಕ ಆದಾಯ ತೆರಿಗೆ (ಪಿಐಟಿ) 2,31,391 ಕೋಟಿ ರೂ. ಆಗಿದೆ. ಸಣ್ಣ ಶೀರ್ಷಿಕೆವಾರು ಸಂಗ್ರಹವು 1,16,776 ಕೋಟಿ ರೂ.ಗಳ ಮುಂಗಡ ತೆರಿಗೆಯನ್ನು ಒಳಗೊಂಡಿದೆ; ಆದಾಯ ಮೂಲದಲ್ಲಿ 2,71,849 ಕೋಟಿ ರೂ.ಗಳ ತೆರಿಗೆ ಕಡಿತ; ಸ್ವಯಂ ಮೌಲ್ಯಮಾಪನ ತೆರಿಗೆ 18,128 ಕೋಟಿ ರೂ. ನಿಯಮಿತ ಮೌಲ್ಯಮಾಪನ ತೆರಿಗೆ 9,977 ಕೋಟಿ ರೂ. ಮತ್ತು 2,607 ಕೋಟಿ ರೂ.ಗಳಷ್ಟು ತೆರಿಗೆ  ಇತರ ಸಣ್ಣ ಶೀರ್ಷಿಕೆಗಳ ಅಡಿಯಲ್ಲಿ ಸಂಗ್ರಹವಾಗಿದೆ.

ಒಂದು ಎಕರೆ ಭೂಮಿಯಲ್ಲಿ ಕೋಟಿಗಟ್ಟಲೆ ಆದಾಯ ಕೊಡುವ ಕೃಷಿ  ಇದು

2023-24ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಮುಂಗಡ ತೆರಿಗೆ ಸಂಗ್ರಹವು 17.06.2023 ರ ವೇಳೆಗೆ 1,16,776 ಕೋಟಿ ರೂ.ಗಳಷ್ಟಿದ್ದರೆ, ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ 1,02,707 ಕೋಟಿ ರೂ.ಗಳ ಮುಂಗಡ ತೆರಿಗೆ ಸಂಗ್ರಹವಾಗಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದಾಗ ಅಂದರೆ 2022-23ದ ಇದೇ ಅವಧಿಗೆ  ಹೋಲಿಸಿದಾಗ 13.70%. ರಷ್ಟು ಬೆಳವಣಿಗೆಯಾಗಿದೆ.  17.06.2023 ರ ವೇಳೆಗೆ ಆಗಿರುವ 1,16,776 ಕೋಟಿ ರೂ.ಗಳ ಮುಂಗಡ ತೆರಿಗೆ ಸಂಗ್ರಹವು ಕಾರ್ಪೊರೇಷನ್ ತೆರಿಗೆ (ಸಿಐಟಿ) 92,784 ಕೋಟಿ ರೂ.ಗಳು ಮತ್ತು ವೈಯಕ್ತಿಕ ಆದಾಯ ತೆರಿಗೆ (ಪಿಐಟಿ) 23,991 ಕೋಟಿ ರೂ.ಗಳನ್ನು ಒಳಗೊಂಡಿದೆ.

2023-24ರ ಹಣಕಾಸು ವರ್ಷದಲ್ಲಿ 17.06.2023 ರವರೆಗೆ 39,578 ಕೋಟಿ ರೂ.ಗಳ ಮರುಪಾವತಿಯನ್ನು ಸಹ ನೀಡಲಾಗಿದೆ, ಹಿಂದಿನ ಹಣಕಾಸು ವರ್ಷ 2022-23 ರ ಇದೇ ಅವಧಿಯಲ್ಲಿ 30,414 ಕೋಟಿ ರೂ.ಗಳ ಮರುಪಾವತಿಯನ್ನು ನೀಡಲಾಗಿದ್ದು, ಇದು 30.13% ಬೆಳವಣಿಗೆಯನ್ನು ಹೊಂದಿದೆ.

ಭಾರೀ ಮಳೆ ಅಲರ್ಟ್‌: ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ