ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ (98) ಇಂದು ಮುಂಬೈನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದಿಲೀಪ್ ಕುಮಾರು ದಿಲೀಪ್ ಕುಮಾರ್ ಕಳೆದ ಜೂನ್ 30ರಂದು ಮುಂಬೈನ ಹಿಂದುಜಾ ಆಸ್ಪತ್ರೆಗೆ ದಾಖಲಾಗಿದ್ದರು. ಲೆಜೆಂಡರಿ ಕಿಂಗ್ , ಟ್ರ್ಯಾಜಿಡಿ ಕಿಂಗ್ ಎಂದೇ ಖ್ಯಾತಿಹೊಂದಿರುವ ದಿಲೀಪ್ ಕುಮಾರ ಮುಂಬೈನಲ್ಲಿರುವ ಪಿಡಿ ಹಿಂದುಜಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಬಾಲಿವುಡ್ ನ ಯುಗವೊಂದು ಅಂತ್ಯವಾಗಿದೆ.
ದಿಲೀಪ್ ಕುಮಾರ ಮೊದಲ ಹೆಸರು ಯೂಸೂಫ್ ಖಾನ್ ಎಂದಾಗಿತ್ತು. ಈಗಿನ ಪಾಕಿಸ್ತಾನದ ಪೇಶಾವರದಲ್ಲಿ ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದ ಇವರ ಬಾಲ್ಯದ ಹೆಸರು ಮೊಹಮ್ಮದ್ ಯೂಸಫ್ ಖಾನ್. ನಂತರ ಚಿತ್ರರಂಗಕ್ಕೆ ಬಂದ ಮೇಲೆ ದಿಲೀಪ್ ಕುಮಾರ್ ಆದರು.
1922ರ ಡಿಸೆಂಬರ್ 11ರಂದು ಜನಿಸಿದ ದಿಲೀಪ್ ಕುಮಾರ್ ಅವರಿಗೆ 12 ಮಂದಿ ಒಡಹುಟ್ಟಿದವರು. ನಾಶಿಕ್ ನ ದಿಯೊಲಾಲಿಯ ಬರ್ನ್ಸ್ ಶಾಲೆಯಲ್ಲಿ ಶಾಲಾ ಹಂತದ ಶಿಕ್ಷಣ ಮುಗಿಸಿದ್ದರು. ಬಾಲಿವುಡ್ ನ ದಂತಕಥೆ ರಾಜ್ ಕಪೂರ್ ದಿಲೀಪ್ ಕುಮಾರ್ ಅವರ ಬಾಲ್ಯದ ಗೆಳೆಯ, ಕೊನೆಗೆ ಚಿತ್ರಗಳಲ್ಲಿಯೂ ಸಹೋದ್ಯೋಗಿಗಳಾದರು.
1943ರಲ್ಲಿ ಪುಣೆಯ ಆರ್ಮಿ ಕ್ಲಬ್ ನ ಸ್ಯಾಡ್ ವಿಚ್ ಸ್ಟಾಲ್ ನಡೆಸುತ್ತಿದ್ದರು. ಅವರ ತಂದೆ ಪೇಶಾವರದಲ್ಲಿ ಭೂಮಿ ಹೊಂದಿದ್ದರು, ಹಣ್ಣಿನ ವ್ಯಾಪಾರ ಕೂಡ ಮಾಡುತ್ತಿದ್ದರು. ತಂದೆ ನಡೆಸುತ್ತಿದ್ದ ಸಣ್ಣಮಟ್ಟದ ಉದ್ಯಮವನ್ನು ಕಂಡು ನಂತರ ದಿಲೀಪ್ ಕುಮಾರ್ ಮುಂಬೈಗೆ ವಲಸೆ ಬಂದು ಅಲ್ಲಿ ಕೂಡ ಉದ್ಯಮ ಆರಂಭಿಸಿ ತಂದೆಗೆ ಆರ್ಥಿಕವಾಗಿ ಸಹಾಯ ಮಾಡುವ ಉದ್ದೇಶ ಹೊಂದಿದ್ದರು.
ಆದರೆ ಅವರ ಹಣೆಯಲ್ಲಿ ಬರೆದಿದ್ದೇ ಬೇರೆ, ಮುಂಬೈಯ ಚರ್ಚ್ ಗೇಟ್ ಸ್ಟೇಷನ್ ನಲ್ಲಿ ಡಾ ಮಸಲಿ ಎಂಬುವವರನ್ನು ಭೇಟಿ ಮಾಡಿದ್ದರು, ಅವರು ದಿಲೀಪ್ ಕುಮಾರ್ ಅವರನ್ನು ನಟಿ ದೇವಿಕಾ ರಾಣಿಗೆ ಪರಿಚಯಸಿದರು. ಆಗ ದೇವಿಕಾ ರಾಣಿಯವರು ಮಲಾಡ್ ನ ಬಾಂಬೆ ಟಾಕೀಸ್ ನಲ್ಲಿ ಫಿಲ್ಮ್ ಸ್ಟುಡಿಯೊ ನಡೆಸುತ್ತಿದ್ದರು. ಅದೀಗ ಮುಚ್ಚಿಹೋಗಿದೆ.
ಬಾಲಿವುಡ್ ಚಿತ್ರರಂಗದಲ್ಲಿ ಇವರ ನಟನೆಯ ಹಲವು ಚಿತ್ರಗಳು ದಾಖಲೆಯನ್ನು ಬರೆದಿದ್ದವು. ನಾಯಾ ದೌರ್, ಮುಗಲ್ ಇ ಅಜಂ, ದೇವದಾಸ್, ರಾಮ್ ಔರ್ ಶ್ಯಾಮ, ಅಂದಾಜ್, ಮಧುಮತಿ, ಗಂಗಾ ಜಮುನಾ ಮುಂತಾದವು. 80 ರ ದಶಕದಲ್ಲಿ ರೋಮ್ಯಾಂಟಿಕ್ –ಟ್ರ್ಯಾಜಿಕ್ ಪಾತ್ರಗಳ ಮೂಲಕವೇ ಜನಪ್ರೀಯರಾಗಿದ್ದರು.
ಪ್ರಧಾನಿ ನರೇಂದ್ರ ಮೋದಿ:
''ಚಲನಚಿತ್ರರಂಗದ ಲೆಜೆಂಡ್ ಅಂತಲೇ ದಿಲೀಪ್ ಕುಮಾರ್ ಅವರನ್ನು ಸ್ಮರಿಸಲಾಗುತ್ತದೆ. ಅವರ ನಿಧನದಿಂದ ಇಡೀ ಸಾಂಸ್ಕೃತಿಕ ಜಗತ್ತಿಗೆ ನಷ್ಟ ಉಂಟಾಗಿದೆ. ಅವರ ಕುಟುಂಬ, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ನನ್ನ ಸಂತಾಪಗಳು'' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.