News

ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ಯೋಜನೆ ಘೋಷಿಸಿದ ಪ್ರಧಾನಿ ಮೋದಿ- ಯೋಜನೆಯ ಮಾಹಿತಿ ಇಲ್ಲಿದೆ

15 August, 2020 4:01 PM IST By:

ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi)ಯವರು ಹೊಸ ನ್ಯಾಷನಲ್  ಡಿಜಿಟಲ್ ಹೆಲ್ತ್ ಮಿಷನ್ (National Digital Health Mission) ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ಇದು ದೇಶದ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ನಾಂದಿಯಾಗಲಿದೆ ಎಂದರು.

ಈ ಯೋಜನೆಯಡಿ ಪ್ರತಿಯೊಬ್ಬ ಭಾರತಿಯನಿಗೂ ಹೆಲ್ತ್ ಐಡಿ (Health ID) ನೀಡಲಾಗುವುದು. ಯೋಜನೆಯಿಂದ ಬಡವರಿಗೆ ಪ್ರಯೋಜನವಾಗಲಿದೆ. ವೈದ್ಯರು ಯಾವ ಔಷಧ ತೆಗೆದುಕೊಳ್ಳಲು ಸೂಚಿಸಿದ್ದಾರೆ. ಯಾವಾಗ ಅದನ್ನು ಸೂಚಿಸಲಾಗಿದೆ ಎಂಬ ಮಾಹಿತಿ ಜೊತೆಗೆ  ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳೂ ಈ  ಹೆಲ್ತ್ ಐಡಿಗೆ ಲಿಂಕ್ ಆಗರಿಲಿದೆ ಎಂದರು.

ಏನಿದು ಡಿಜಿಟಲ್ ಹೆಲ್ತ್ ಮಿಷನ್ (National Digital Health Mission)?

ಕೇಂದ್ರ ಸರ್ಕಾರದ ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ಯೋಜನೆಯಡಿಯಲ್ಲಿ ಸಮಸ್ತ ಭಾರತೀಯರಿಗೆ ಹೆಲ್ತ್ ಐಡಿ ಕಾರ್ಡ್‌ನ್ನು ನೀಡಲಾಗುವುದು. ಪ್ರತ್ಯೇಕ ವ್ಯಕ್ತಿಯ ಹೆಸರಲ್ಲೂ ಒಂದು ಹೆಲ್ತ್ ಐಡಿ ಕಾರ್ಡ್ ಇರಲಿದ್ದು, ಇದರಲ್ಲಿ ಆ ವ್ಯಕ್ತಿಯ ಆರೋಗ್ಯ (Health) ತಪಾಸಣೆಗೆ ಸಂಬಂಧಿಸಿದ ಮಾಹಿತಿಗಳು ಇರಲಿವೆ.

ವ್ಯಕ್ತಿ ಒಮ್ಮೆ ಆರೋಗ್ಯ ತಪಾಸಣೆಗೆ ಗುರಿಯಾದ ಬಳಿಕ, ಆತನಿಗೆ ನೀಡಲಾದ ಚಿಕಿತ್ಸಾ ವಿಧಾನ, ಔಷಧಿಗಳ ಮಾಹಿತಿ ಹಾಗೂ ಭವಿಷ್ಯದಲ್ಲಿ ನೀಡಬೇಕಾದ ಚಿಕಿತ್ಸೆಗಳ ಸಂಪುರ್ಣ ಮಾಹಿತಿ ಈ ಹೆಲ್ತ್ ಐಡಿ ಕಾರ್ಡ್‌ನಲ್ಲಿ ಸಂಗ್ರಹವಾಗಲಿದೆ. ದೇಶಾದ್ಯತ ಇರುವ ವೈದ್ಯರು ಮತ್ತು ಸರ್ಕಾರದ ಆರೋಗ್ಯ ಸೌಲಭ್ಯಗಳೊಂದಿಗೆ ಲಿಂಕ್ ಆಗಿರಲಿದೆ.

ಯೋಜನೆಯ ಪ್ರಯೋಜನ:

ಆರೋಗ್ಯ ಸೇವೆಗಳ ದಕ್ಷತೆ, ಪರಿಣಾಮ ಮತ್ತು ಪಾರದರ್ಶಕತೆ ಹೆಚ್ಚಿಸುವ ಸಲುವಾಗಿ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಹೆಲ್ತ್ ಐಡಿಯು ಮೊಬೈಲ್ App ರೂಪದಲ್ಲಿ ಇರಲಿದೆ.