News

ದೆಹಲಿಯಲ್ಲಿ 8.36 ರಷ್ಟು ಡಿಸೆಲ್ ದರ ಇಳಿಕೆ-ನಿಟ್ಟುಸಿರು ಬಿಟ್ಟ ದೆಹಲಿ ಜನತೆ

31 July, 2020 1:33 PM IST By:

ಕೆಲವು ದಿನಗಳಿಂದ ಪೆಟ್ರೋಲ್ ಡೀಸೆಲ್ ದರ ನಾಗಲೋಟದಲ್ಲಿ ಸಾಗಿತ್ತು. ಪೆಟ್ರೋಲ್ ಗಿಂದ ಡೀಸೆಲ್ ದರ ಹೆಚ್ಚಾಗಿ ದೆಹಲಿ ಜನತೆ ಜೇಬಿಗೆ ಕತ್ತರಿ ಬಿದ್ದಿತ್ತು.  ಆದರೆ ದೆಹಲಿ ಸರಕಾರ ಡೀಸೆಲ್‌ನ ಪ್ರತಿ ಲೀಟರ್‌ಗೆ ಎಂಟು ರೂ. ಇಳಿಸಿ ಜನರಿಗೆ ಗುಡ್‌ನ್ಯೂಸ್‌ ನೀಡಿದೆ. ಹೊಸ ದಿಲ್ಲಿಯಲ್ಲಿ ಪೆಟ್ರೋಲ್‌ಗಿಂತ ಡೀಸೆಲ್‌ (diesel)ದರವೇ ಜಾಸ್ತಿ ಇತ್ತು. ಈಗ ಡೀಸೆಲ್ ದರ  8.36 ರಷ್ಟು ಕಡಿಮೆಯಾಗಿದೆ.

ಮೌಲ್ಯವರ್ಧಿತ ತೆರಿಗೆಯಲ್ಲಿನ ಹೆಚ್ಚಳವನ್ನು ಅರವಿಂದ ಕೇಜ್ರಿವಾಲ್ ನೇತೃತ್ವದ ಸರ್ಕಾರ ಹಿಂಪಡೆದ ಕಾರಣ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಡೀಸೆಲ್ ದರ 8.38 ರಷ್ಟು ಇಳಿದಿದೆ. ತೆರಿಗೆಯಲ್ಲಿನ ಕಡಿತವು ಗುರುವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಇದರಿಂದಾಗಿ ದೆಹಲಿಯಲ್ಲಿ ಡಿಸೆಲ್ ದರ ಪ್ರತಿ ಲೀಟರಗೆ 73.64 ಆಗಲಿದೆ. ಆದರೆ ದೇಶದ ಬೇರೆ ಮಹಾನಗರಗಳಲ್ಲಿ ಡೀಸೆಲ್‌ ಹಾಗೂ ಪೆಟ್ರೋಲ್‌ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಹಾಗಾದರೆ ಬೆಲೆ ಪರಿಷ್ಕರಣೆಗೊಂಡ ಬಳಿಕ ದೇಶದ ಮಹಾನಗರಗಳಲ್ಲಿ ಜು.31 ರಂದು ತೈಲ ದರ ಎಷ್ಟಿದೆ? ಇಲ್ಲಿದೆ ಈ ಬಗ್ಗೆ ಮಾಹಿತಿ.

ಬೆಂಗಳೂರು
ಪೆಟ್ರೋಲ್: 83.04 ರೂ. (ಯಾವುದೇ ಏರಿಕೆ ಇಲ್ಲ)
ಡೀಸೆಲ್: 77.88 ರೂ. (ಯಾವುದೇ ಏರಿಕೆ ಇಲ್ಲ)

ನವದೆಹಲಿ
ಪೆಟ್ರೋಲ್: 80.43 ರೂ.
ಡೀಸೆಲ್: 73.56 ರೂ. (8.38 ರೂ. ಇಳಿಕೆ)

ಮುಂಬೈ
ಪೆಟ್ರೋಲ್: 87.19 ರೂ.
ಡೀಸೆಲ್: 80.11 ರೂ.

ಚೆನ್ನೈ
ಪೆಟ್ರೋಲ್: 83.63 ರೂ.
ಡೀಸೆಲ್: 78.86 ರೂ.