News

Post office Scheme: ಭಾರಿ ಮೊತ್ತದ ಅಪಘಾತ ವಿಮೆ ಪರಿಚಯಿಸಿದ ಅಂಚೆ ಇಲಾಖೆ

11 January, 2023 4:13 PM IST By: Kalmesh T
Department of Posts introduced huge accident insurance

ಜನಸಾಮಾನ್ಯರಿಗೆ ನೆರವಾಗಲೆಂದು ಭಾರತೀಯ ಅಂಚೆ ಇಲಾಖೆಯು ಅತ್ಯಂತ ಕಡಿಮೆ ಹಣದಲ್ಲಿ ಭಾರಿ ಮೊತ್ತದ ಅಪಘಾತ ವಿಮೆಯನ್ನು ಪರಿಚಯಿಸಿದೆ. ಇಲ್ಲಿದೆ ಈ ಕುರಿತಾದ ಮಾಹಿತಿ

ಇದನ್ನೂ ಓದಿರಿ:ಕೃಷಿ ಯಂತ್ರೋಪಕರಣಗಳನ್ನು ಖರೀದಿಸುವ ಮುನ್ನ ಪರಿಗಣಿಸಬೇಕಾದ ಪ್ರಮುಖ ಅಂಶಗಳು

ಒಂದು ವೇಳೆ ಆಕಸ್ಮಿಕ ಅವಘಡಗಳಿಗೆ ತುತ್ತಾದಾಗ ಅಂಚೆ ಕಚೇರಿಯ ಈ ಅಲ್ಪ ಮೊತ್ತದ ಅಪಘಾತ ವಿಮೆ ಆರ್ಥಿಕವಾಗಿ ಸಹಾಯಕ್ಕೆ ಬರಲಿದೆ. ಕನಿಷ್ಠ 18ರಿಂದ ಗರಿಷ್ಟ 65ವರ್ಷದ ಒಳಗಿನವರು ಕೂಡಲೇ ಖಾತೆ ತೆರೆದು ಈ ವಿಮೆಯ ಅನುಕೂಲ ಪಡೆಯಬಹುದಾಗಿದೆ.

ಹತ್ತಾರು ಆಕಸ್ಮಿಕ ಅಪಘಾತಗಳಿಗೆ ಪರಿಹಾರ ಪಡೆಯಲು ಕೂಡಲೇ ಈ ವಿಮೆಯ ಪ್ರಯೋಜನ ಪಡೆಯಬಹುದಾಗಿದೆ. ನಿಮ್ಮ ಹತ್ತಿರದ ಅಂಚೆ ಕಚೇರಿಗೆ ತೆರಳಿ ವಾರ್ಷಿಕವಾಗಿ 399 ರೂ. ಹಣ ಕಟ್ಟಿದರೆ ಈ 10ಲಕ್ಷ ರೂ. ಅಪಘಾತ ವಿಮೆಗೆ ಅರ್ಹರಾಗುತ್ತೀರಿ.

ಸ್ವಯಂ ಉದ್ಯೋಗಕ್ಕೆ ನೇರ ಸಾಲ ಯೋಜನೆ: ಪ್ರತಿ ಫಲಾನುಭವಿಗೆ ಸಿಗಲಿದೆ ರೂ.1,00,000 ಧನ ಸಹಾಯ

ಈ ವಿಮೆಯ ಫಲಾನುಭವಿಗಳು ಆಕಸ್ಮಿಕವಾಗಿ ಅಪಘಾತಕ್ಕೆ ಒಳಗಾದರೆ ಅಥವಾ ಅಂಚೆ ಇಲಾಖೆ ಸೂಚಿಸಿರುವ ಇನ್ನಿತರ ಅವಘಡದ ಸನ್ನಿವೇಶಗಳಿಗೆ ಒಳಗಾದರೆ, ಅಂತವರು ವಿವಿಧ ರೀತಿಯ ಆರ್ಥಿಕ ಸಹಾಯ ಪಡೆಯಬಹುದು.

ಈಗಾಗಲೇ ನೀವು ಅಂಚೆ ಇಲಾಖೆಯಲ್ಲಿ 'ಇಂಡಿಯಾ ಪೋಸ್ಟ್ ಪೇಮೆಂಟ್ ಆಕೌಂಟ್' (India Post Payment Account) ಖಾತೆ ಹೊಂದಿದ್ದರೆ ನೀವು ಈ ಅಪಘಾತ ವಿಮೆ ಮಾಡಿಸಲು ಅರ್ಹರಾಗುತ್ತೀರಿ.

ಒಂದು ವೇಳೆ ಈ ಖಾತೆ ಹೊಂದಿರದಿದ್ದರೆ ಕೂಡಲೇ 100 ರೂಪಾಯಿ ಕಟ್ಟಿ ಹತ್ತಿರದ ಅಂಚೆ ಕಚೇರಿಯಲ್ಲಿ ಒಂದೇ ದಿನದಲ್ಲಿ 'ಇಂಡಿಯಾ ಪೋಸ್ಟ್ ಪೇಮೆಂಟ್ ಆಕೌಂಟ್' ಖಾತೆ ತೆರೆಯಬಹುದು.

ಫಸಲ್‌ ಬಿಮಾ ಯೋಜನೆಯಡಿ ಸಣ್ಣ ಮೊತ್ತದ ಕ್ಲೈಮ್‌ ಕುರಿತು ಶೀಘ್ರದಲ್ಲೆ ಹೊಸ ನೀತಿ! ಏನಿದು?

ವಿಮಾ ಯೋಜನೆ ಫಲಾನುಭವಿಯು ಆಕಸ್ಮಿಕ ಸಾವನ್ನಪ್ಪಿದರೆ ಅವರು ಕುಟುಂಬಸ್ಥರಿಗೆ 10 ಲಕ್ಷ ರೂಪಾಯಿ ನೀಡಲಾಗುತ್ತದೆ.

ಅಂದರೆ, ಬಸ್, ಕಾರು ಇನ್ನಿತರ ಅಪಘಾತಗಳು, ಹಾವು ಕಡಿತ, ವಿದ್ಯುತ್ ಆಘಾತ, ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಸಾವು ಸೇರಿದಂತೆ ವಿವಿಧ ಆಕಸ್ಮಿಕವಾಗಿ ಸಾವು ಸಂಭವಿಸಿದರೆ ಪರಿಹಾರ ಪಡೆಯಬಹುದು.

ಇದರ ಪೂರ್ತಿ ಮಾಹಿತಿ ಹೀಗಿದೆ

* ಯಾವುದೇ ವ್ಯಕ್ತಿ ಅಪಘಾತದಿಂದ ಮರಣ ಹೊಂದಿದರೆ 10ಲಕ್ಷ ರೂಪಾಯಿ ಆರ್ಥಿಕ ಸಹಾಯ

* ಶಾಸ್ವತವಾಗಿ ಅಂಗವೈಕಲ್ಯಕ್ಕೆ ಒಳಗಾದರೆ 10ಲಕ್ಷ ರೂಪಾಯಿ ಆರ್ಥಿಕ ಸಹಾಯ

* ಆಸ್ಪತ್ರೆ ವೆಚ್ಚಕ್ಕಾಗಿ 60,000 ರೂಪಾಯಿ ಹಣಕ್ಕೆ ಅರ್ಹ

* ಮೃತರ ಮಕ್ಕಳ ಶಿಕ್ಷಣಕ್ಕಾಗಿ ಪ್ರತಿ ಮಗುವಿಗೆ ರೂ.1 ಲಕ್ಷ ವರೆಗೆ ಸಹಾಯ (ಸಂಪೂರ್ಣ ಶಿಕ್ಷಣಕ್ಕೆ ಗರಿಷ್ಠ 2ಲಕ್ಷ ರೂ.).

* ಓಪಿಡಿ ವೆಚ್ಚಕ್ಕೆಂದು 30,000 ಸಾವಿರ ರೂಪಾಯಿ ಹಣ

* ಅಪಘಾತದಲ್ಲಿ ಪಾರ್ಶ್ವವಾಯು ಉಂಟಾದರೆ 10ಲಕ್ಷ ರೂಪಾಯಿ

* ಕುಟುಂಬದ ಆಸ್ಪತ್ರೆ ಪ್ರಯಾಣ ವೆಚ್ಚಕ್ಕೆ 25,000 ರೂಪಾಯಿ ಸಹಾಯ

ಆಸಕ್ತರು ಇಂಡಿಯಾ ಪೋಸ್ಟ್ ಪೇಮೆಂಟ್ ಅಕೌಂಟ್ ಖಾತೆ ತೆರೆಯಲು ಅಥವಾ  ಈ ವಿಮಾ ಯೋಜನೆಯ ಲಾಭ ಪಡೆಯಲು ಬಯಸಿದರೆ ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಬಹುದು.