News

ಸಾಗರ ಪರಿಕ್ರಮ - III ಜಾರಿ ಹಾಗೂ ಯೋಜನೆ ರೂಪಿಸುವ ಬಗ್ಗೆ ಸಭೆ ನಡೆಸಿದ ಮೀನುಗಾರಿಕಾ ಇಲಾಖೆ

18 January, 2023 9:09 AM IST By: Maltesh

ಮೀನುಗಾರಿಕೆ ಇಲಾಖೆ [ಡಿಒಎಫ್], ಭಾರತ ಸರ್ಕಾರದ [ಜಿಒಐ] ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ‘ಸಾಗರ್ ಪರಿಕ್ರಮ’ ಯೋಜನೆಯನ್ನು ಜಾರಿಗೊಳಿಸಿದೆ.  ಕರಾವಳಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೂರ್ವಭಾವಿಯಾಗಿ ನಿರ್ಧರಿಸಿರುವ ಸಮುದ್ರ ಮಾರ್ಗಗಳಲ್ಲಿ ಸಾಗರ ಪರಿಕ್ರಮ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ರಿಲಯನ್ಸ್‌ ಫೌಂಡೇಶನ್‌ ಸ್ಕಾಲರ್‌ಶಿಪ್‌..ಪದವಿ ಓದುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ನವದೆಹಲಿಯಲ್ಲಿ ‘ಸಾಗರ ಪರಿಕ್ರಮ’ 3ನೇ ಹಂತ  ಯೋಜನೆಯನ್ನು ಜಾರಿಗೊಳಿಸುವ  ಕುರಿತು ಕೇಂದ್ರ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ [ಎಂಒಎಫ್ಎಎಚ್ ಮತ್ತು ಡಿ] ಸಚಿವ ಶ್ರೀ ಪರಶೋತ್ತಮ್ ರೂಪಾಲ ನೇತೃತ್ವದಲ್ಲಿ ಮೀನುಗಾರಿಕಾ ಇಲಾಖೆಯ ಸಭೆ ನಡೆಯಿತು. ಸಭೆಯಲ್ಲಿ ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆಯ ಜಂಟಿ ಕಾರ್ಯದರ್ಶಿ [ಸಾಗರ ಮೀನುಗಾರಿಕೆ] ಅವರು ಸ್ವಾಗತಿಸಿದರ.

 ಮತ್ತು ಸಭೆಯ ಕಾರ್ಯಸೂಚಿ ಕುರಿತು ಮಾಹಿತಿ ನೀಡಿದರು. ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆಯ ಜಂಟಿ ಕಾರ್ಯದರ್ಶಿಯವರು ಕಳೆದ ಎರಡು ಸಭೆಗಳ ಕುರಿತು ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು. ಬಂದರುಗಳ ಪೂರ್ಣಗೊಳಿಸುವಿಕೆ ಮತ್ತು ಉನ್ನತೀಕರಣ, ಕೃತಕ ಬಂಡೆಗಳ ನಿರ್ಮಾಣಕ್ಕೆ ಉತ್ತೇಜನ ಮುಂತಾದ ಪ್ರಮುಖ ಚಟುವಟಿಕೆಗಳ ಕುರಿತು ಮೀನುಗಾರಿಕೆ ಸಮುದಾಯದಲ್ಲಿ ಉತ್ತೇಜನ ನೀಡಬೇಕು ಎಂದು ಹೇಳಿದರು.

ಕೇಂದ್ರ ಪಿಎಂಎಂಎಸ್ ವೈ ಸಚಿವ ಶ್ರೀ ಪರಶೋತ್ತಮ್ ರೂಪಾಲ ಅವರು “ಸಾಗರ್ ಪರಿಕ್ರಮ ಗೀತೆ”ಯ ಮರಾಠಿ ಆವೃತ್ತಿಯನ್ನು ಬಿಡುಗಡೆ ಮಾಡಿದರು. ಸಭೆಯಲ್ಲಿ ಪಾಲ್ಗೊಂಡವರಿಗೆ ಧನ್ಯವಾದ ತಿಳಿಸಿ, ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ ಮತ್ತು ದೃಢ ನಿಶ್ಚಯದಿಂದ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.  

‘ಸಾಗರ್ ಪರಿಕ್ರಮ’ 3ನೇ ಹಂತದ  ಕಾರ್ಯಕ್ರಮವನ್ನು ಮಹಾರಾಷ್ಟ್ರ ರಾಜ್ಯ ಆಯೋಜಿಸುತ್ತಿದೆ ಮತ್ತು ರಾಜ್ಯದ ಅಧಿಕಾರಿಗಳು ತಾತ್ಕಾಲಿಕ ಯೋಜನೆಯನ್ನು ಪ್ರಸ್ತಾಪಿಸಿದ್ದಾರೆ. ಕಾರ್ಯಕ್ರಮದ ಸ್ಥಳ ಮತ್ತು ದಿನಾಂಕವನ್ನು ಹವಾಮಾನದ ಸೂಕ್ತತೆ ಮತ್ತು ಇತರೆ ಅಂಶಗಳ ಕುರಿತು ಅಧಿಕಾರಿಗಳು ಸಭೆಯಲ್ಲಿ ಚರ್ಚಿಸಿದ್ದಾರೆ. ರ‌್ಯಾಲಿಗಳನ್ನು ನಡೆಸುವ ಸ್ಥಳ, ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ, ಮನೆಗಳಿಗೆ ಭೇಟಿ ಕೊಡುವ ವಿಷಯಗಳ ಕುರಿತು ಸಮಾಲೋಚನೆ ನಡೆಸಿದ್ದಾರೆ.  ಕಾರ್ಯಕ್ರಮವನ್ನು ಯಾರ ನಾಯಕತ್ವದ ಮಾರ್ಗದರ್ಶನದಲ್ಲಿ ನಡೆಸಬೇಕು. ಸಿದ್ಧತೆ ಸಮಯದಲ್ಲಿ ತಳಮಟ್ಟದ ಸವಾಲುಗಳನ್ನು ಎದುರಿಸುವ ಕುರಿತು ರಾಜ್ಯಮಟ್ಟದ ಅಧಿಕಾರಿಗಳು ವಿವರ ಸಂಗ್ರಹಿಸಿದರು.

ಹಿನ್ನೆಲೆ

‘ಸಾಗರ್ ಪರಿಕ್ರಮ’ (i) ಮೀನುಗಾರರೊಂದಿಗೆ ಸಂವಾದ ನಡೆಸಲು ಸೂಕ್ತ ವ್ಯವಸ್ಥೆ ಕಲ್ಪಿಸುವುದು, ಕರಾವಳಿ ಸಮುದಾಯ ಮತ್ತು ಇತರೆ ಪಾಲುದಾರರಿಗೆ  ಮೀನುಗಾರಿಕೆಗೆ ಸಂಬಂಧಿಸಿದ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಕುರಿತ ಮಾಹಿತಿಯನ್ನು ಪಸರಿಸುವುದು.  (ii) ಸ್ವಾವಲಂಬಿ ಭಾರತದ ಸ್ಫೂರ್ತಿಯಂತೆ ಎಲ್ಲ ಮೀನುಗಾರಿಕೆ ವಲಯದವರು.

ಮೀನು ಕೃಷಿಕರು ಮತ್ತು ಸಂಬಂಧಪಟ್ಟ ಪಾಲುದಾರರೊಂದಿಗೆ ಒಗ್ಗಟ್ಟು ಪ್ರದರ್ಶಿಸುವ, (iii) ದೇಶದ ಆಹಾರ ಭದ್ರತೆ ದೃಷ್ಟಿಯಿಂದ ಸಾಗರ ವಲಯದ ಮೀನು ಸಂಪನ್ಮೂಲಗಳ ಬಳಕೆ ಮತ್ತು ಮೀನುಗಾರಿಕೆ ವಲಯದ ಜೀವನೋಪಾಯದಲ್ಲಿ ಸುಸ್ಥಿರ ಸಮತೋಲನ ಕಾಯ್ದುಕೊಳ್ಳುವ ಬಗ್ಗೆ ಜವಾಬ್ದಾರಿತನ ಮೂಡಿಸುವುದು ಮತ್ತು (iv) ಸಾಗರ ವಲಯದ ಪರಿಸರ ವ್ಯವಸ್ಥೆಯ ರಕ್ಷಣೆ ಮಾಡಬೇಕಾಗುತ್ತದೆ. ‘ಸಾಗರ್ ಪರಿಕ್ರಮ’ ಕಾರ್ಯಕ್ರಮವನ್ನು ಕರಾವಳಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ.