News

ಕಿಮ್ ಜಾಂಗ್ ಸಾವಿನ ಬಗ್ಗೆ ದಟ್ಟ ವದಂತಿ

27 April, 2020 7:08 PM IST By:
ಉತ್ತರ ಕೋರಿಯಾದ ಸರ್ವಾಧಿಕಾರಿ ನಾಯಕ ಕಿಮ್ ಜಾಂಗ್ ಉನ್ ಅವರ ಆರೋಗ್ಯದ ಬಗ್ಗೆ ಜಗತ್ತಿನಾದ್ಯಂತ ನಾನಾ ಊಹಾಪೋಹಗಳು ಎಲ್ಲೆಡೆ ಎದ್ದಿವೆ.
ಕಿಮ್ ಅವರು ಜೀವಂತವಾಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವದಂತಿಗಳು ಹರಿದಾಡುತ್ತಿವೆ.  ಅನೇಕ ದಿನಗಳಿಂದ ದಢೀರ್ ನಾಪತ್ತೆಯಾಗಿರುವ ಕಿಮ್ ಜಾಂಗ್ ಬದುಕಿ ಇರುವುದು ಸಂದೇಹ ಎಂದೇ ಬಿಂಬಿಸಲಾಗುತ್ತಿದೆ.
ಆದರೆ ಉತ್ತರ ಕೋರಿಯಾದ ಭದ್ರತಾ ಸಲಹೆಗಾರ ಮೂನ್ ಜೇ ಇನ್  ಈ ಊಹಾಪೋಹಗಳೆಲ್ಲಾ ಸುಳ್ಳು ಎಂದು ಹೇಳಿಕೆ ನೀಡಿದ್ದಾರೆ. ಕಿಮ್ ಜಾಂಗ್ ಉನ್ ಜೀವಂತವಾಗಿದ್ದು, ಆರೋಗ್ಯವಾಗಿದ್ದಾರೆ ಎಂದಿದ್ದಾರೆ.
ಕಿಮ್ ಜಾಂಗ್ ಆರೋಗ್ಯ ಉತ್ತಮವಾಗಿದ್ದು, ಉತ್ತರ ಕೋರಿಯಾದ ಪೂರ್ವದ ರೆಸಾರ್ಟ್ ಪಟ್ಟಣ ವೋನ್ಸಾನ್‍ನಲ್ಲಿ ಅವರು ಏಪ್ರೀಲ್ 13 ರಿಂದ ತಂಗಿದ್ದಾರೆ. ಮಾಧ್ಯಮಗಳು ವರದಿ ಮಾಡಿದಂತೆ ಯಾವುದೇ ಘಟನೆಗಳು ಸಂಭವಿಸಿಲ್ಲ ಎಂದು ಹೇಳಿದ್ದಾರೆ.
ಈ ಎಲ್ಲ ಸುದ್ದಿಗಳ ನಡುವೆ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಬಿಲ್ಡರ್‍ಗಳಿಗೆ ಕಿಮ್ ಅವರು ಧನ್ಯವಾದ ಹೇಳಿ ಪತ್ರ ಬರೆದಿದ್ದಾರೆ ಎಂದು ಉತ್ತರ ಕೊರೊಯಾ ಮಾಧ್ಯಮಗಳು ವರದಿ ಮಾಡಿವೆ. ಆ ಮೂಲಕ ಉತ್ತರ ಕೊರೊಯಾದ ಸರ್ವಾಧಿಕಾರಿ ನಾಯಕ ಜೀವಂತವಾಗಿದ್ದಾರೆ ಎಂದು ಮಾಧ್ಯಮಗಳು ತಿಳಿಸಿವೆ.  
ಕಿಮ್ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾದ ನಂತರ ಅನಾರೋಗ್ಯಕ್ಕೆ ಈಡಾಗಿ ಸಾವನ್ನಪ್ಪಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಇದನ್ನು ಅಲ್ಲಗಳೆದಿದ್ದ ಉತ್ತರ ಕೊರೊಯಾ ಸರ್ಕಾರ ತಮ್ಮ ನಾಯಕ ಉತ್ತಮವಾಗಿದ್ದಾರೆಂದು ಸ್ಪಷ್ಟನೆ ನೀಡಿತ್ತು. ಶಸ್ತ್ರಚಿಕಿತ್ಸೆ ಒಳಗಾದ ನಂತರ ಸಾರ್ವಜನಿಕವಾಗಿ ಕಿಮ್ ಅವರು ಕಾಣಿಸಿಕೊಳ್ಳದೇ ಇರುವುದು ಈ ಎಲ್ಲ ಊಹಾಪೋಹಗಳಿಗೆ ಕಾರಣವಾಗಿದೆ.