News

ಲಾಕ್ಡೌನ್ ನಂತರ ವಿಡಿಯೋ ಮೀಟಿಂಗ್ ಆ್ಯಪ್‌ಗೆ ಮೊರೆ ಹೋದ ಸಿಬ್ಬಂದಿಗಳು

14 July, 2020 1:20 PM IST By:

ಕೊರೋನಾ ಸೋಂಕು ತಡೆಯುವುದಕ್ಕಾಗಿ ಸರ್ಕಾರ ಹೇರಿದ್ದ ಲಾಕ್ಡೌನ್ ನಂತರ ವಿವಿಧ ಕಂಪನಿಗಳು ತಮ್ಮ ಸಿಬ್ಬಂದಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸತೊಡಗಿದವು. ಈ ಬದಲಾವಣೆಗಳಿಂದ ಸಭೆಗಳು ಮತ್ತು ಸಾಮಾಜಿಕ ಸಂವಹನಗಳು ಆನ್‌ಲೈನ್‌ ವೇದಿಕೆಗಳತ್ತ ಮುಖಮಾಡತೊಡಗಿದ ಪರಿಣಾಮವಾಗಿ ಝೂಮ್‌, ಗೂಗಲ್‌ ಡ್ಯೂಓ, ಮೀಟ್, ಸೇ ನಮಸ್ತೆ ನಂತಹ ವಿಡಿಯೋ ಕಾಲ್‌ ಅಪ್ಲಿಕೇಶನ್‌ಗಳಿಗೆ ಬೇಡಿಕೆ ಹೆಚ್ಚಾಗತೊಡಗಿತು. ಕೊರೋನಾ ನಡುವೆ ಬಹು ಬೇಗನೆ  ಈ ವೀಡಿಯೋ ಅಪ್ಲಿಕೇಶನ್‌ಗಳು ಜನಮನ್ನಣೆಗಳಿಸಿದವು.

ಬಹಳ ಕಡಿಮೆ ಸಮಯದಲ್ಲಿ ದಿಢೀರ್ ಎಂದು ಜನಪ್ರಿಯವಾಗಿದ್ದ ಝೂಮ್ ಆ್ಯಪ್ ಸುರಕ್ಷಿತವಲ್ಲ ಎಂದು ಬಳಕೆದಾರರಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದ್ದರೂ ಝೂಮ್ ಆ್ಯಪ್ ಸದ್ದಿಲ್ಲದೆ ಹೆಸರುವಾಸಿಯಾಗುತ್ತಿದೆ.

ಏಕಕಾಲಕ್ಕೆ ನೂರು ಜನರನ್ನು ಸೇರಿಸಿಕೊಳ್ಳಬಹುದಾದ ಉಚಿತ ವಿಡಿಯೋ ಕಾಲ್ ಝೂಮ್ ಆ್ಯಪ್ ನ್ನು ಕಚೇರಿ ಮೀಟಿಂಗ್, ಆಫೀಸ್ ಟ್ರೈನಿಂಗ್ ಶಾಲಾ ಕಾಲೇಜುಗಳ ಆನಲೈನ್ ತರಗತಿಗೂ ಬಳಸಲಾಗುತ್ತಿದೆ.

ಝೂಮ್ ಆ್ಯಪ್:  ದೇಶಾದ್ಯಂತ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಘೋಷಿಸಿದ್ದ ನಂತರ ದೇಶದಲ್ಲಿ ದಿಢೀರನೆ ಝೂಮ್ ಆ್ಯಪ್ ಬಳಕೆದಾರರ ಸಂಖ್ಯೆ ದ್ವಿಗುಣವಾಗಿದೆ. ಕಚೇರಿಗಳಲ್ಲಿ ವಿಡಿಯೋ ಕಾಲ್ ಸೇರಿದಂತೆ ವಿವಿಧ ಉದ್ದೇಶಗಳಿಗೆ ಝೂಮ್ ಆ್ಯಪ್ ಬಳಕೆ ಮಾಡಲಾಗುತ್ತಿದೆ.

ಜಿಯೋ ಮೀಟ್ : ಜಿಯೋ ಕಂಪನಿಯ ಈ ಆ್ಯಪ್ ಝೂಮ್ ಗೆ ಸಡ್ಡು ಹೊಡೆಯುತ್ತಿದೆ. ಇದನ್ನು ಸಹ ಮೊಬೈಲನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.ಇದರಲ್ಲಿಯೂ 100ಜನರು ಒಮ್ಮೆಯೆ ವಿಡೀಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಬಹುದು.

ಗೂಗಲ್ ಮೀಟ್: ಈ ಗೂಗಲ್ ಮೀಟ್ ಆ್ಯಪ್ ನ್ನು ಶಾಲಾ ಕಾಲೇಜುಗಳಲ್ಲಿ ಹೆಚ್ಚು ಬಳಕೆ ಮಾಡಲಾಗುತ್ತಿದೆ.ಪರದೆಯ ಮೇಲೆ ಏಕಕಾಲಕ್ಕೆ ಹತ್ತಾರು ಮಂದಿ ಸಹದ್ಯೋಗಿಗಳನ್ನು ನೋಡಿ ಮಾತನಾಡುವಂತಹ ಸೌಲಭ್ಯ ಹೊಂದಿದೆ.

ಗೋ ಟು ಮೀಟಿಂಗ್: ಇದರಲ್ಲಿ ಸಭೆ, ಸಮಾರಂಭ, ಸಮಾರಂಭಗಳಿಗಾಗಿ ಬಳಸಲಾಗುವುದು. ಇದಕ್ಕೆ ಜನರ ಆಧಾರದ ಮೇಲೆ ಶುಲ್ಕ ವಿಧಿಸಲಾಗುತ್ತದೆ.

ಸೇ ನಮಸ್ತೆ: ಚೀನಾ ಭಾರತದ ನಡುವೆ ನಡೆದ ಸಂಘರ್ಷದ ಬಳಿಕ ಕೇಳೀಬಂದ ದೇಶೀ ಆ್ಯಪ್ ಇದಾಗಿದೆ. ಈ ವೀಡಿಯೋ ಕಾನ್ಫರೆನ್ಸ್  ಆ್ಯಪ್ ನ್ನು ಮುಂಬೈ ಮೂಲದ ಇನ್ ಸ್ಕ್ರೀಪ್ಟ್ ಕಂಪನಿ ರೂಪಿಸಿದೆ. ಅತೀ ಕಡಿಮೆ ಅವಧಿಯಲ್ಲಿ ಈ ಆ್ಯಪ್ ಸಹ ಪ್ರಸಿದ್ಧಿ ಪಡೆದಿದೆ. ಇದರಲ್ಲಿ 50 ಜನರನ್ನು ಸೇರಿಸಬಹುದು.