News

ಜುಲೈ ಅಂತ್ಯದೊಳಗೆ ಕೃಷಿ ವಿವಿಯ ಎಲ್ಲಾ ಬಿಎಸ್ಸಿ ಅಂತಿಮ ಪದವಿ ಪರೀಕ್ಷೆಗಳ ಫಲಿತಾಂಶ- ಸಚಿವ ಬಿ.ಸಿ ಪಾಟೀಲ್

12 July, 2020 12:18 PM IST By:

ಬಿಎಸ್ಸಿ ಅಗ್ರಿಕಲ್ಚರ್  (B.Sc Agriculture) ಹಾಗೂ ಬಿಟೆಕ್  ಇಂಜಿನಿಯರಿಂಗ್ ಸೇರಿದಂತೆ ಕೃಷಿ ವಿಶ್ವವಿದ್ಯಾಲಯದ ಎಲ್ಲಾ ಬಿಎಸ್ಸಿ ಅಂತಿಮ ಪದವಿ ಪರೀಕ್ಷೆಗಳು ಇದೇ ಜುಲೈ 8 ರೊಳಗೆ ಮುಕ್ತಾಯಗೊಂಡಿತ್ತು. ಈ ತಿಂಗಳ ಜುಲೈ ಅಂತ್ಯದೊಳಗೆ ಬಿಎಸ್ಸಿ ಅಗ್ರಿ ಪದವಿ ಪ್ರಮಾಣಪತ್ರ ಮತ್ತು ಅಂಕಪಟ್ಟಿ ನೀಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದೇ 15 ರೊಳಗೆ ಗ್ರೇಡ್ ಅಂತಿಮಗೊಳಿಸಿ ಪರೀಕ್ಷಾ ಘಠಕಕ್ಕೆ ಸಲ್ಲಿಸಬೇಕಿದ್ದು, ಸಂಭಾವ್ಯ ಪದವಿ ಪ್ರಮಾಣ ಪತ್ರ ಮತ್ತು ಅಂಕಪಟ್ಟಿ ಸಲ್ಲಿಕೆ 15 ರ ಬಳಿಕ ಆರಂಭವಾಗಲಿದೆ ಎಂದು ಹೇಳಿದರು.

ಕೋವಿಡ್ ಆರಂಭವಾಗುವ ಹೊತ್ತಿಗೆ 90%  ಹೆಚ್‌ಓಟಿ(ಹ್ಯಾಂಡ್ಸ್ ಆನ್ ಟ್ರೈನಿಂಗ್ ಅಥವಾ ರೂರಲ್ ಎಕ್ಸ್ಟೆನ್ಷನ್ ಅಗ್ರಿಕಲ್ಚರ್ ಡೆವಲಪ್ಮೆಂಟ್ ಯೋಜನೆ) ಪ್ರಕಾರ ತರಗತಿಗಳು ಮುಗಿದಿತ್ತು. ಗ್ರೂಪ್ ಡಿಸ್ಕಷನ್, ವರದಿ ಸಲ್ಲಿಕೆ ಬಾಕಿಯಿತ್ತು. ಈಗ ವಿದ್ಯಾರ್ಥಿಗಳನ್ನು ಸಾಮೂಹಿಕ ಚರ್ಚೆ ವರದಿ ಸಲ್ಲಿಕೆಗೆ  ಸೇರಿಸಲು ಕೋವಿಡ್ ನಿಂದ ಸಾಧ್ಯವಾಗದ ಕಾರಣ ಶಿಕ್ಷಕರು ಈಗಾಗಲೇ ಆನ್ಲೈನ್ (Online) ಮೂಲಕ ಪರೀಕ್ಷೆಗಳನ್ನು ಮುಗಿಸಿದ್ದರು. ಬಹುತೇಕ ಜುಲೈ ಅಂತ್ಯದೊಳಗೆ ಎಲ್ಲಾ ವಿದ್ಯಾರ್ಥಿಗಳಿಗೆ ಡಿಗ್ರಿ ಅಂಕಪಟ್ಟಿ ನೀಡಲಾಗುವುದು ಎಂದರು..

ಇನ್ನು ಅಂತಿಮ ವರ್ಷದ ಎಂಎಸ್ಸಿ ಹಾಗೂ ಪಿಹೆಚ್‌ಡಿ ಪದವಿ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಪ್ರಬಂಧಗಳನ್ನು ಆಗಸ್ಟ್ 31ರೊಳಗೆ ಸಲ್ಲಿಸಬೇಕು. ಸೆಪ್ಟೆಂಬರ್ 15 ರಿಂದ  ಫಲಿತಾಂಶ ಮತ್ತು ಪ್ರಮಾಣಪತ್ರ ಸಲ್ಲಿಕೆ ಆರಂಭವಾಗಲಿದ್ದು , ಸೆಪ್ಟೆಂಬರ್ 30ರೊಳಗೆ ಎಲ್ಲಾ ಎಂಎಸ್ಸಿ, ಪಿಹೆಚ್‌ಡಿ  ವಿದ್ಯಾರ್ಥಿಗಳು ತಮ್ಮ ಪದವಿ ಮುಗಿಸಿದ ಬಳಿಕ ಉನ್ನತ ವ್ಯಾಸಂಗ ಕೈಗೆತ್ತಿಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.