ದೇಶದಲ್ಲಿ ಕೊರೋನಾ ಕಾಲಿಟ್ಟು ಒಂದು ವರ್ಷಗಳಾಗಿವೆ, ಶಾಲೆ ಹಾಗೂ ಇನ್ನಿತರ ಕಚೇರಿಗಳಿಗೆ ಮರಳುವ ಮುನ್ನ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಹೋಗುವುದು ಕಡ್ಡಾಯವಾಗಿದೆ. ಹೀಗಾಗಿ ಎಲ್ಲ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಕೋರೋಣ ಪರೀಕ್ಷೆ ಮಾಡಿಸಲು ಮುಂದಾಗಿದ್ದಾರೆ.
ಕೊರೋನಾ ಪರೀಕ್ಷೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಡಲಾಗುವುದು, ಹಾಗೂ ಕೆಲವೊಮ್ಮೆ ಸ್ಯಾಂಪಲ್ ಗಳನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗುವುದು ಇಲ್ಲದಿದ್ದರೆ ಕೆಲವು ವ್ಯಕ್ತಿಗಳು ನೇರವಾಗಿ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವರು. ಹೀಗಾಗಿ ಸರ್ಕಾರ ಕರೋನಾ ಟೆಸ್ಟ್ನ ಮೇಲೆ ಶೇಕಡ 30ರಷ್ಟು ದರವನ್ನು ಕಡಿತಗೊಳಿಸಿದೆ.
ವ್ಯಕ್ತಿಗಳ ಸ್ಯಾಂಪಲನ್ನು ಖಾಸಗಿ ಆಸ್ಪತ್ರೆಗಳಿಗೆ ಕಳಿಸಿದರೆ rs.500 ಹಾಗೂ ವ್ಯಕ್ತಿಯು ನೇರವಾಗಿ ಖಾಸಗಿ ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡಿಸಿದರೆ ₹800 ಎಂದು ಸರಕಾರ ಆದೇಶ ಹೊರಡಿಸಿದೆ. ಈ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಸರ್ಕಾರ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸನ್ನು ಅನುಸರಿಸಿ ಈ ಆದೇಶ ಹೊರಡಿಸಿದೆ.
ಹಿಂದಿನ ದರವನ್ನು ನಾವು ನೋಡಿದಾಗ ಯಾವುದೇ ವ್ಯಕ್ತಿಯ ಸ್ಯಾಂಪಲನ್ನು ಖಾಸಗಿ ಆಸ್ಪತ್ರೆ ಕಳಿಸಿದರೆ 800 ರೂಪಾಯಿ ಹಾಗೂ ವ್ಯಕ್ತಿಯು ನೇರವಾಗಿ ಖಾಸಗಿ ಆಸ್ಪತ್ರೆಗೆ ಹೋದರೆ rs.1200 ಎಂದು ನಿಗದಿಪಡಿಸಲಾಗಿತ್ತು.
ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ ನಿಂದ ಅನುಮತಿ ಪಡೆದ ಲ್ಯಾಬೋರೇಟರಿ ಗಳಿಗೆ ಮಾತ್ರ ಈ ನಿಯಮ ಅನ್ವಯಿಸುತ್ತದೆ. ಹಾಗೂ ಅವರು ಯಾವುದೇ ಕಾರಣಕ್ಕೂ ಹೆಚ್ಚಿನ ಹಣವನ್ನು ಪಡೆಯ ತಕ್ಕದ್ದಲ್ಲ ಎಂದು ಕೂಡ ಆದೇಶವನ್ನು ಹೊರಡಿಸಿದೆ.