News

ಹಾಲು ದರ ಇಳಿಕೆ- ರೈತರಲ್ಲಿ ಆತಂಕ

31 July, 2020 8:53 AM IST By:

ಕೊರೋನಾ ಸೋಂಕು ತಡೆಯಲು ದೇಶದಲ್ಲಿ ಹೇರಲಾದ ಲಾಕ್‌ಡೌನ್‌ ನಂತರ ನಗರ ಪ್ರದೇಶಗಳಿಗೆ ವಲಸೆಹೋಗಿದ್ದ ಹಲವಾರು ಜನ ಹೈನೋದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರು ನಗರ ಸೇರಿದಂತೆ ಹಲವಾರು ಕಡೆಗಳಲ್ಲಿ ಉದ್ಯೋಗ ಕಳೆದುಕೊಂಡು ಗ್ರಾಮಾಂತರ ಪ್ರದೇಶಗಳಿಗೆ ವಾಪಸ್‌ ಬಂದು ತಮ್ಮ ಮೂಲ ಕಸುಬು ಆಗಿರುವ ಹೈನುಗಾರಿಕೆಯತ್ತ ಗಮನಹರಿಸಿದ್ದಾರೆ. ಆದರೆ ಕೋಚಿಮುಲ್ ಹಾಲು ಒಕ್ಕೂಟ (kochimul milk federation) ಹಾಲು ಖರೀದಿ ದರ ಕಡಿತಗೊಳಿಸಿದ್ದರಿಂದ ರೈತರಲ್ಲಿ ಆತಂಕ ಶುರುವಾಗಿದೆ.

ನಗರ ಪ್ರದೇಶಗಳಲ್ಲಿ ಕೆಲಸ ಕಳೆದುಕೊಂಡು ಗ್ರಾಮಾಂತರ ಪ್ರದೇಶದಲ್ಲಿ ನೆಮ್ಮದಿಯ ಜೀವನ ನಡೆಸಬೇಕೆಂದು ಕನಸುಹೊತ್ತವರಿಗೆ ಕೋಚಿಮುಲ್ ಹಾಲು ಒಕ್ಕೂಟ ಬಿಗ್ ಶಾಕ್ ನೀಡಿದೆ.

 

 ಕೊರೋನಾದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ 2 ಬಾರಿ ಹಾಲು ಖರೀದಿ ದರ ಕಡಿಮೆ ಮಾಡಿರುವುದರಿಂದ ರೈತ ಸಮುದಾಯ ಉತ್ಪಾದನೆಯ ವೆಚ್ಚವೂ ಸಿಗದೇ ಪರದಾಡುವಂತಾಗಿದ್ದು, ಇದೇ ತೀರ್ಮಾನವನ್ನೂ ಬೆಂಗಳೂರು ಹಾಲು ಒಕ್ಕೂಟವೂ ಕೈಗೊಂಡರೆ ರೈತರು ಇನ್ನೂ ಸಂಕಷ್ಟದಲ್ಲಿ (in trouble) ಸಿಲುಕುವಂತಾಗುತ್ತದೆ.

 ರೈತರು ನಿರೀಕ್ಷೆಗೂ ಮೀರಿ ಹಾಲು ಉತ್ಪಾದನೆ ಮಾಡಿ ಒಕ್ಕೂಟಕ್ಕೆ ಪೂರೈಸುತ್ತಿದ್ದಾರೆ. ಆದರೆ ಒಕ್ಕೂಟದ ಆಡಳಿತ ಮಂಡಳಿಯು ನಷ್ಟದವಾಗುತ್ತದೆ ಎಂದು ಹೇಳಿ ಹಾಲು ಖರೀದಿ ದರ ಕಡಿತಗೊಳಿಸಿದ್ದರಿಂದ ರೈತರು ತುಂಬಾ ನಷ್ಟ ಅನುಭವಿಸುತ್ತಿದ್ದಾರೆ.

ಒಂದು ಲೀಟರ್ ಹಾಲು (one liter milk) ಉತ್ಪಾದನೆಗೆ ಅಂದಾಜು  35 ರೂಪಾಯಿ ವೆಚ್ಚವಾಗುತ್ತಿದೆ. ಆದರೆ ಒಕ್ಕೂಟವು ಉತ್ಪಾದನಾ ವೆಚ್ಚಕಿಂತಲೂ ಕಡಿಮೆ ದರಕ್ಕೆ ಹಾಲು ಖರೀದಿಸುತ್ತಿದೆ. ಇದರಿಂದ ರೈತರಿಗೆ ತುಂಬಾ ಅನ್ಯಾಯವಾಗುತ್ತಿದೆ. ಒಕ್ಕೂಟಗಳು ರೈತರಿಗೆ ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. ಸರ್ಕಾರ, ರಾಜ್ಯದೆಲ್ಲೆಡೆ ಎಲ್ಲಾ ಒಕ್ಕೂಟಗಳಲ್ಲೂ ಹಾಲಿಗೆ ಏಕ ರೂಪ ಖರೀದಿ ದರ ನಿಗದಿಪಡಿಸಬೇಕು. ಪಶು ಆಹಾರದ ಬೆಲೆ ಕಡಿತಗೊಳಿಸಬೇಕು ಮತ್ತು ಖರೀದಿಗೆ ಸಬ್ಸಿಡಿ ನೀಡಬೇಕು. ಹಾಲು ಉತ್ಪಾದನಾ ವೆಚ್ಚಕ್ಕೆ ತಕ್ಕಂತೆ ಖರೀದಿ ದರ ಹೆಚ್ಚಿಸಬೇಕೆಂಬುದು ರೈತರ ಒತ್ತಾಯವಾಗಿದೆ.