News

ಸಿಹಿಸುದ್ದಿ; 33 ಲಕ್ಷ ರೈತರಿಗೆ ₹24,000 ಕೋಟಿ ಸಾಲ ನೀಡಲು ತೀರ್ಮಾನ! ಸಚಿವ ಸೋಮಶೇಖರ ಘೋಷಣೆ..

28 June, 2022 3:08 PM IST By: Kalmesh T
Decision to lend 33 lakh farmers ₹ 24,000 crore

ಕರ್ನಾಟಕದ 33 ಲಕ್ಷ ರೈತರಿಗೆ 24,000 ಲಕ್ಷ ರೂಪಾಯಿ ಸಾಲ ನೀಡಲು ತೀರ್ಮಾನ ಮಾಡಲಾಗಿದೆ ಎಂದು ಸಚಿವ ಸೋಮಶೇಖರ ಹೇಳಿದರು.

ಇದನ್ನೂ ಓದಿರಿ: ಗುಡುಗು-ಬಿರುಗಾಳಿ ಸಮೇತ ಭಾರೀ ಮಳೆ ಸಾಧ್ಯತೆ; ಹವಾಮಾನ ಇಲಾಖೆ ಸೂಚನೆ!

ರಾಜ್ಯದಲ್ಲಿ 33 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂ. ಸಾಲ ನೀಡಲು ನಿರ್ಧರಿಸಲಾಗಿದೆ. ಇದರಲ್ಲಿ 3 ಲಕ್ಷ ಹೊಸ ರೈತರಿಗೆ ಸಾಲ ನೀಡಲು ತೀರ್ಮಾನಿಸಲಾಗಿದೆ ಎಂದು ಸಹಕಾರ ಇಲಾಖೆ ಸಚಿವ ಎಸ್ಟಿ ಸೋಮಶೇಖರ್ (ST Somashekar) ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಾಲ ನೀಡುವಲ್ಲಿ ಯಾವುದೇ ರೀತಿ ಗೊಂದಲಕ್ಕೆ ಆಸ್ಪದವಿಲ್ಲ. ಅಕ್ಟೋಬರ್ 2ರಿಂದ ಯಶಸ್ವಿನಿ ಯೋಜನೆ ಜಾರಿಯಾಗುವ ಸಾಧ್ಯತೆಯಿದೆ.

ಮಹತ್ವಾಕಾಂಕ್ಷೆ ಯಶಸ್ವಿನಿ ಯೋಜನೆ ಮತ್ತೆ ಆರಂಭವಾಗಲಿದೆ. ಈಗಾಗಲೇ ಇಲಾಖೆ ಕಡೆಯಿಂದ ಎಲ್ಲ ರೀತಿಯ ತಯಾರಿ ಆಗಿದೆ ಎಂದು ಮಾಹಿತಿ ನೀಡಿದರು. ಈಗಾಗಲೇ ಹಾಲು ಉತ್ಪಾಕರಿಗೆ ಅನುಕೂಲ ಆಗುವಂತೆ ಕ್ಷೀರ ಸಹಕಾರ ಬ್ಯಾಂಕ್ ಆರಂಭಿಸುವ ಯೋಜನೆ ಇದೆ.

9 ಲಕ್ಷ ಮಹಿಳೆಯರಿಗೆ ಸಾಲ ಸೌಲಭ್ಯ ನೀಡುವ ಉದ್ದೇಶವಿದೆ ಎಂದು ಹೇಳಿದರು.

ಗುಡ್‌ನ್ಯೂಸ್‌: 5 ಲಕ್ಷ ರೈತರಿಗೆ ₹749 ಕೋಟಿ ಬೆಳೆ ವಿಮೆ ಇತ್ಯರ್ಥ..!

ಏನಿದು ಯಶಸ್ವಿನಿ ಯೋಜನೆ!

ಕರ್ನಾಟಕದಲ್ಲಿ ಒಂದು ದಶಕದ ಹಿಂದೆ ಆರಂಭಿಸಿದ ಯಶಸ್ವಿನಿ ಯೋಜನೆಯು ಇಡೀ ದೇಶದಲ್ಲಿ ಗಮನಾರ್ಹ ಬದಲಾವಣೆಯನ್ನು ತಂದಿತ್ತು. ದೇಶದಾದ್ಯಂತ ಒಂದು ಹೊಸ ಅಲೆಯನ್ನೇ ಸೃಷ್ಟಿಸಿತ್ತು.

ಇಡೀ ವಿಶ್ವದಲ್ಲೇ ರೈತರ ಏಳಿಗೆಗಾಗಿ ಆರೋಗ್ಯ ರಕ್ಷಣೆಗಾಗಿ ಸ್ಥಾಪಿಸಿದ ಏಕೈಕ ಯೋಜನೆಯಾಗಿದೆ .

ಯಶಸ್ವಿನಿ ಯೋಜನೆಯ ಧ್ಯೇಯ

ಸಹಕಾರಿ ರೈತರಿಗೆ ಆರೋಗ್ಯ ರಕ್ಷಣೆಯನ್ನು ಒದಗಿಸುವುದು ಮತ್ತು ಅದನ್ನು ನಿರಂತರವಾಗಿ ನಡೆಸಿಕೊಂಡು ಹೋಗುವ ಮತ್ತು ಅಂತರಾಷ್ಟ್ರೀಯ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಧ್ಯೇಯವನ್ನು ಹೊಂದಿದೆ .

ಯೋಜನೆಯ ವಿಶೇಷತೆಗಳು

ರೈತರು ಆರೋಗ್ಯ ರಕ್ಷಣೆಗಾಗಿ ದುಬಾರಿ ಚಿಕಿತ್ಸೆಯನ್ನು ಮಾಡಿಸಲು ಲೇವಾದೇವಿಗಾರರ ಮೊರೆ ಹೋಗುವುದು ಅಥವಾ ಚಿನ್ನಾಭರಣಗಳನ್ನು ಒತ್ತೆ ಇಟ್ಟು ಚಿಕಿತ್ಸೆ ಪಡೆಯುವುದು ಮಾಡುತ್ತಿದ್ದರು.

ಇಂತಹ ಕಷ್ಟವನ್ನು ಪರಿಹರಿಸಲು ಕರ್ನಾಟಕ ಸರ್ಕಾರ 2003 ಜೂನ್ ತಿಂಗಳಲ್ಲಿ ಯಶಸ್ವಿನಿ ಯೋಜನೆಯನ್ನು ಆರಂಭಿಸಿತು. ವಾರ್ಷಿಕವಾಗಿ 2003ರಲ್ಲಿ ರೂ 60/- ವಂತಿಗೆಯೊಂದಿಗೆ ಸ್ಥಾಪಿತವಾಗಿ ಈಗ ಪ್ರತಿಯೊಬ್ಬ ವ್ಯಕ್ತಿ ರೂ 250 /- ವಾರ್ಷಿಕ ವಂತಿಗೆ ಪಾವತಿಸಿ ಯಶಸ್ವಿನಿ ಟ್ರಸ್ಟನಿಂದ ಗುರುತಿಸಿದ 823 ಶಸ್ತ್ರಚಿಕಿತ್ಸೆಗಳನ್ನು ಪಡೆಯಬಹುದಾಗಿದೆ.

ರೈತರ ಜೀವನಾಡಿ ಎತ್ತುಗಳನ್ನು ಪೂಜಿಸುವ ಹಬ್ಬ “ಮಣ್ಣೆತ್ತಿನ ಅಮವಾಸೆ”; ಏನಿದರ ವಿಶೇಷತೆ ಗೊತ್ತೆ?

ಈ ಯೋಜನೆಯನ್ನು ಸಹಕಾರಿ ತತ್ವದ ಅಡಿಯಲ್ಲಿ “ಎಲ್ಲಾರು ಒಬ್ಬನಿಗಾಗಿ ಒಬ್ಬ ಎಲ್ಲಾರಿಗಾಗಿಎಂಬ ಸಹಕಾರ ತತ್ವದ ಅಡಿಯಲ್ಲಿ ಯೋಜನೆಯನ್ನು ಆರಂಭಿಸಲಾಗಿದೆ .

ಯೋಜನೆಯಡಿಯಲ್ಲಿ ಯಾವುದೇ ಸಹಕಾರ ಸಂಘದ ಸದಸ್ಯ ಆ ಸಾಲಿನ ಜೂನ್ 1 ರಿಂದ 3 ತಿಂಗಳ ಮೊದಲು ಸದಸ್ಯನಾಗಿರುತ್ತಾರೋ ಅವರು ತಮ್ಮೊಂದಿಗೆ ತಮ್ಮ ಕುಂಟುಬದ ಸದಸ್ಯರನ್ನು ಯಶಸ್ವಿನಿ ಯೋಜನೆಯಲ್ಲಿ ನೋಂದಯಿಸಬಹುದು.

ಕುಟಂಬದ ಸದಸ್ಯರು ಎಂದರೆ ತಂದೆ, ತಾಯಿ, ಹೆಂಡತಿ, ಮಕ್ಕಳು, ಮದುವೆಯಾಗದ ಹೆಣ್ಣು ಮಗಳು ಮತ್ತು ಅವಿಭಕ್ತ ಕುಟುಂಬದ ಸದಸ್ಯರು. ಆದರೆ ಮದುವೆಯಾಗಿ ಗಂಡನ ಮನೆಗೆ ತೆರಳಿದ ಹೆಣ್ಣು ಮಕ್ಕಳನ್ನು ಹೊರತುಪಡಿಸಿ ವಾರ್ಷಿಕ ವಂತಿಗೆ ಪಾವತಿಸಿ ಸದಸ್ಯರಾಗಬಹುದಾಗಿದೆ.