News

ಪ್ಯಾನ್‌- ಆಧಾರ್‌ ಲಿಂಕ್‌ ಮಾಡಲು ಮತ್ತೆ ಜೂನ್‌ 30 ಕೊನೇ ದಿನ

01 April, 2021 1:41 PM IST By:
pan Aadhaar link

ಪ್ಯಾನ್‌ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ಕೊನೆಯ ದಿನಾಂಕವನ್ನು ಮತ್ತೆ ಕೇಂದ್ರ ಸರ್ಕಾರವು ವಿಸ್ತರಿಸಿದೆ. ಕೊರೋನಾದಿಂದಾಗಿ ಎದುರಾದ ಸಂಕಷ್ಟದ ಹಿನ್ನೆಯಲ್ಲಿ ಆಧಾರ್ ಹಾಗೂ ಪ್ಯಾನ್ ಸಂಯೋಜನೆಗೆ ಇನ್ನಷ್ಟು ಸಮಯಾವಕಾಶ ನೀಡುವ ನಿಟ್ಟಿನಲ್ಲ ಗಡುವನ್ನು ವಿಸ್ತರಣೆ ಮಾಡಲಾಗಿದೆ.

 ಆದಾಯ ತೆರಿಗೆ ಇಲಾಖೆಯು ಪ್ಯಾನ್‌ - ಆಧಾರ್‌ ಲಿಂಕ್‌ ಮಾಡಲು ಇದ್ದ ಮಾರ್ಚ್‌ 31ರ ಗಡುವನ್ನು 2021ರ ಜೂನ್‌ 30ಕ್ಕೆ ವಿಸ್ತರಿಸಿದೆ.  ಈ ಹಿಂದೆ ಪ್ಯಾನ್‌ ಮತ್ತು ಆಧಾರ್‌ ಕಾರ್ಡ್‌ ಅನ್ನು ಲಿಂಕ್ ಮಾಡಲು ಮಾರ್ಚ್‌ 31ನ್ನು ಕಡೇ ದಿನವಾಗಿ ನಿಗದಿಮಾಡಲಾಗಿತ್ತು. 2021ರ ಮಾರ್ಚ್ 31ರೊಳಗೆ ಲಿಂಕ್ ಮಾಡದಿದ್ದರೆ 1000 ರೂ. ದಂಡವನ್ನೂ ನಿಗದಿಮಾಡಲಾಗಿತ್ತು.

ಒಂದು ವೇಳೆ ನಿಗದಿತ ಅವಧಿಯೊಳಗೆ ನಿಮ್ಮ ಪ್ಯಾನ್ ಕಾರ್ಡ್ ಆಧಾರ್‌ನೊಂದಿಗೆ ಲಿಂಕ್‌ ಆಗದಿದ್ದರೆ ಪ್ಯಾನ್‌ ಕಾರ್ಡ್‌ ನಿಷ್ಕ್ರಿಯವಾಗುತ್ತದೆ. ಅಲ್ಲದೆ, ದಂಡವನ್ನೂ ಕಟ್ಟಬೇಕಾಗುತ್ತದೆ. ಆದಾಯ ತೆರಿಗೆ ಕಾಯಿದೆ 1961ರ ಸೆಕ್ಷನ್‌ 234 ಎಚ್‌ ಪ್ರಕಾರ ಇದು ಅನ್ವಯಿಸುತ್ತದೆ. 2021ರ ಮಾರ್ಚ್ 23ರಂದು ಹಣಕಾಸು ವಿಧೇಯಕದ ಅಂಗೀಕಾರ ವೇಳೆ ಈ ಅಂಶವನ್ನು ಸೇರಿಸಲಾಗಿತ್ತು.

 ಆಧಾರ್‌ 12 ಅಂಕಿಗಳನ್ನು ಹೊಂದಿದ್ದು, ಯುನಿಕ್‌ ಐಡೆಂಟಿಫಿಕೇಷನ್‌ ಅಥಾರಿಟಿ ನೀಡಿತ್ತದೆ. ಪ್ಯಾನ್‌ನಲ್ಲಿ 10 ಆಲ್ಫಾ ನ್ಯೂಮರಿಕ್‌ ಸಂಖ್ಯೆಗಳಿದ್ದು, ಇದನ್ನು ಆದಾತ ತೆರಿಗೆ ಇಲಾಖೆಯೇ ನಿಗದಿಮಾಡುತ್ತದೆ. ಆಧಾರ್‌ ಮತ್ತು ಪ್ಯಾನ್‌ ಕಾರ್ಡ್‌ನ್ನು ಲಿಂಕ್‌ ಮಾಡಲು ಈ ಹಿಂದೆ ಹಲವು ಬಾರಿ ಸರಕಾರ ಕೇಳಿಕೊಂಡಿತ್ತು. ಮತ್ತು ಲಿಂಕ್‌ ಮಾಡಲು ನೀಡಿದ ಗಡುವನ್ನು ಹಲವು ಬಾರಿ ವಿಸ್ತರಿಸಿತ್ತು. ಆದರೆ ಇದೀಗ ಲಿಂಕ್‌ ಮಾಡದೇ ಇರುವವರಿಗೆ ದಂಡ ವಿಧಿಸಲು ನಿರ್ಧರಿಸಿದೆ.

ಆದಾಯ ತೆರಿಗೆ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಒಬ್ಬ ವ್ಯಕ್ತಿಯು ಪ್ಯಾನ್ ನೀಡದಿದ್ದರೆ ಅಥವಾ ನಿಷ್ಕ್ರಿಯವಾದ ಪ್ಯಾನ್ ನೀಡಿದರೆ ಅವನು/ಅವಳು ಹೆಚ್ಚಿನ ಟಿಡಿಎಸ್ (ಮೂಲದಲ್ಲಿ ಕಡಿತಗೊಳಿಸಿದ ತೆರಿಗೆ) ಅಥವಾ ಟಿಸಿಎಸ್ (ಮೂಲದಲ್ಲಿ ಸಂಗ್ರಹಿಸಿದ ತೆರಿಗೆ) ಪಾವತಿಸಬೇಕಾಗಬಹುದು. ಅಲ್ಲದೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಅಸಾಧ್ಯವಾಗುತ್ತದೆ ಮತ್ತು ತೆರಿಗೆ ರಿಟರ್ನ್ ಸಲ್ಲಿಸದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡದಿದ್ದರೆ ಪ್ಯಾನ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ :

ಹಣಕಾಸು ಮಸೂದೆ 2021 ರ ಅಡಿಯಲ್ಲಿ ಆದಾಯ ತೆರಿಗೆ ಕಾಯ್ದೆ 1961ಕ್ಕೆ ಸೇರಿಸಲಾದ ಸೆಕ್ಷನ್ 234 ಹೆಚ್ ಅನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ. ಸೆಕ್ಷನ್ 234 ಹೆಚ್ ಅಡಿಯಲ್ಲಿ, ಸರ್ಕಾರವು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ನಿಮ್ಮ ಆಧಾರ್ ಅನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡದಿದ್ದರೆ, ನಿಮಗೆ ಗರಿಷ್ಠ 1,000 ರೂ. ತಡವಾದ ಶುಲ್ಕವನ್ನು ವಿಧಿಸಲಾಗುತ್ತದೆ. ಅಷ್ಟೇ ಅಲ್ಲದೆ ನಿಗದಿತ ದಿನಾಂಕದೊಳಗೆ ಈ ಎರಡೂ ಮುಖ್ಯ ದಾಖಲೆಗಳನ್ನು ಲಿಂಕ್ ಮಾಡದಿದ್ದರೆ  ನಿಮ್ಮ ಪ್ಯಾನ್ ನಿಷ್ಕ್ರಿಯಗೊಳ್ಳುತ್ತದೆ.

ಆಧಾರ್-ಪ್ಯಾನ್ ಲಿಂಕ್ ಮಾಡುವ ವಿಧಾನ
 

 ಮೊದಲು ಆದಾಯ ತೆರಿಗೆ ವೆಬ್‌ಸೈಟ್‌ಗೆ ಹೋಗಬೇಕು.  ಆಧಾರ್ ಕಾರ್ಡ್‌ನಲ್ಲಿ ನೀಡಿರುವ ಹೆಸರು, ಪ್ಯಾನ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಸಬೇಕು.  ಆಧಾರ್ ಕಾರ್ಡ್‌ನಲ್ಲಿ, ಹುಟ್ಟಿದ ವರ್ಷವನ್ನು ಉಲ್ಲೇಖಿಸಿ ಚೌಕವನ್ನು ಟಿಕ್ ಮಾಡಿ ಈಗ ಕ್ಯಾಪ್ಚಾ ಕೋಡ್ ನಮೂದಿಸಬೇಕು.  ಈಗ ಲಿಂಕ್ ಆಧಾರ್ ಬಟನ್ ಕ್ಲಿಕ್ ಮಾಡಿ  ನಿಮ್ಮ ಪ್ಯಾನ್ ಅನ್ನು ಆಧಾರ್‌ಗೆ ಲಿಂಕ್ ಮಾಡಲಾಗುತ್ತದೆ.