News

Five states Election ಪಂಚ ರಾಜ್ಯಗಳ ಚುನಾವಣೆ: ಲೋಕಸಭೆಗೆ ಇದು ಸೆಮಿಫೈನಲ್‌!

09 October, 2023 5:37 PM IST By: Hitesh
Date fix for five state elections: This is the semi-final for the Lok Sabha elections!

ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಉಳಿದಿದ್ದು, ಇದೀಗ ಪಂಚರಾಜ್ಯಗಳ ಚುನಾವಣೆ ಘೋಷಣೆಯಾಗಿದ್ದು, ಲೋಕಸಭೆ ಚುನಾವಣೆಯ ದಿಕ್ಸೂಚಿ ಎಂದೇ ಇದನ್ನು ಪರಿಗಣಿಸಲಾಗಿದೆ.

ಮುಂದಿನ ಲೋಕಸಭಾ ಚುನಾವಣೆಗೆ ಈ ಐದು ರಾಜ್ಯಗಳ ಚುನಾವಣೆ ಕೊನೆಯ ಹಂತದ ಆಟ ಎಂದೇ ವ್ಯಾಖ್ಯಾನಿಸಲಾಗಿದೆ.

ಹೀಗಾಗಿ, ಎಲ್ಲ ರಾಜಕೀಯ ಪಕ್ಷಗಳು ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿವೆ.  

2024ರ ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ.

ಈ ಸಂದರ್ಭದಲ್ಲಿ ಪಂಚರಾಜ್ಯಗಳ ಚುನಾವಣಾ ದಿನಾಂಕ ಪ್ರಕಟವಾಗಿದ್ದು, ರಾಷ್ಟ್ರ ರಾಜಕೀಯದಲ್ಲಿ ಹೊಸ ಸಂಚಲವನ್ನೇ ಸೃಷ್ಟಿ ಮಾಡಿದೆ.

ದಕ್ಷಿಣ ಭಾರತದ ತೆಲಂಗಾಣ, ಉತ್ತರ ಭಾರತದ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಘಡ ಹಾಗೂ

ಈಶಾನ್ಯ ಭಾರತದ ಮಿಜೋರಾಂನ ಸಾರ್ವತ್ರಿಕ ವಿಧಾನಸಭೆ ಚುನಾವಣೆ ನಡೆಯಲಿದೆ. 

ಮುಂದಿನ ತಿಂಗಳು ಪೂರ್ತಿ ಚುನಾವಣೆ

ನವೆಂಬರ್‌ 7ನೇ ತಾರೀಕಿನಿಂದ ನವೆಂಬರ್‌ 30ರ ವರೆಗೆ ಚುನಾವಣೆ ನಡೆಯಲಿದೆ.  

ತೆಲಂಗಾಣ, ಮಧ್ಯಪ್ರದೇಶ, ಮಿಜೋರಾಂ, ರಾಜಸ್ಥಾನ ಹಾಗೂ ಛತ್ತೀಸ್‌ಘಡದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ.

ಈ ಐದೂ ರಾಜ್ಯಗಳಲ್ಲಿ ನವೆಂಬರ್‌ 7ನೇ ತಾರೀಕಿನಿಂದ ನವೆಂಬರ್‌ 30ರವರೆಗೆ ಚುನಾವಣೆ ನಡೆಯಲಿದೆ. 

ನಾಲ್ಕು ರಾಜ್ಯಗಳಲ್ಲಿ ಒಂದು ಹಂತದಲ್ಲಿ ಛತ್ತೀಸ್ಗಡದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಎಲ್ಲೆಲ್ಲಿ ಯಾವಾಗ ಚುನಾವಣೆ ?

ರಾಜ್ಯ; ಚುನಾವಣೆ ವರ್ಷ

ನವೆಂಬರ್‌ 7ಕ್ಕೆ ಮಿಜೋರಾಂ

ನವೆಂಬರ್‌ 17ಕ್ಕೆ ಮಧ್ಯಪ್ರದೇಶ

ನವೆಂಬರ್‌ 23ಕ್ಕೆ ರಾಜಸ್ಥಾನ

ನವೆಂಬರ್‌ 30ಕ್ಕೆ ತೆಲಂಗಾಣ

ನವೆಂಬರ್‌ 7 ಮತ್ತು 17ಕ್ಕೆ ಛತ್ತೀಸ್ಗಢದಲ್ಲಿ

ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುವ ದಿನಾಂಕವನ್ನು ಚುನಾವಣಾ ಆಯೋಗ ದಿನಾಂಕವನ್ನು ಪ್ರಕಟಿಸಿದೆ.

ಮೊದಲು ಮಿಜೋರಾಂನಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್‌ 7ಕ್ಕೆ ಮಿಜೋರಾಂನಲ್ಲಿ ಮತದಾನ ನಡೆಯಲಿದೆ.    

ಮಧ್ಯಪ್ರದೇಶದಲ್ಲಿ ನವೆಂಬರ್‌ 17ಕ್ಕೆ ಮತದಾನ ನಡೆಯಲಿದ್ದು, ರಾಜಸ್ಥಾನದಲ್ಲಿ ನವೆಂಬರ್‌ 23ಕ್ಕೆ ಮತದಾನ ನಡೆಯಲಿದೆ.

ಇನ್ನು ತೆಲಂಗಾಣದಲ್ಲಿ ನವೆಂಬರ್‌ 30ಕ್ಕೆ ಚುನಾವಣೆ ಜರುಗಲಿದೆ.

ಛತ್ತೀಸ್ಗಢದಲ್ಲಿ ನವೆಂಬರ್‌ 7 ಹಾಗೂ ನವೆಂಬರ್‌  17ಕ್ಕೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.    

ಲೋಕಸಭೆ ಚುನಾವಣೆ ದೃಷ್ಟಿಯಿಂದ ಪ್ರಮುಖ

ಲೋಕಸಭೆ ಚುನಾವಣೆ ದೃಷ್ಟಿಯಿಂದ ಪಂಚರಾಜ್ಯಗಳ ಚುನಾಚಣೆಯು ಪ್ರಮುಖವಾಗಿದೆ.

ಈಗಾಗಲೇ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ಸೇರಿದಂತೆ ರಾಷ್ಟ್ರೀಯ

ಹಾಗೂ ಪ್ರಾದೇಶಿಕ ಪಕ್ಷಗಳು ಚುನಾವಣೆಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿವೆ.

ಈ ಸಂದರ್ಭದಲ್ಲಿ ಘೋಷಣೆಯಾಗಿರುವ ಪಂಚರಾಜ್ಯಗಳ ಚುನಾವಣೆ ಕುತೂಹಲ ಹಾಗೂ ಜಿದ್ದಾಜಿದ್ದನ್ನು ಮೂಡಿಸಿದೆ.

ಎಲ್ಲ ಪಕ್ಷಗಳಿಗೂ ಸವಾಲೂ ಹೌದು

ದೇಶದ ಐದು ಪ್ರಮುಖ ರಾಜ್ಯಗಳಲ್ಲಿ ಚುನಾವಣೆ ನಡೆಯಲಿರುವುದು ಎಲ್ಲ ಪಕ್ಷಗಳಿಗೂ ಸವಾಲು ಸಹ ಹೌದು ಎಂದೇ ವ್ಯಾಖ್ಯಾನಿಸಲಾಗಿದೆ.

ಮುಖ್ಯವಾಗಿ ಜನ ನಮ್ಮ ಪರವಾಗಿದ್ದಾರೆ ಎಂದು ತೋರಿಸಲು ವಿರೋಧ ಪಕ್ಷಗಳಿಗೆ ಹಾಗೂ ಇಲ್ಲ ನಮ್ಮ ಪರವಾಗಿಯೇ ಇದ್ದಾರೆ

ಮುಂದಿನ ಲೋಕಸಭೆಯಲ್ಲೂ ನಾವೇ ಜಯಿಸಲಿದ್ದೇವೆ ಎಂದು ಹೇಳಲಿಕ್ಕೆ ಬಿಜೆಪಿಗೂ ಈ ಚುನಾವಣೆಯಲ್ಲಿ ಗೆಲವು ಸಾಧಿಸಲೇಬೇಕಿದೆ.

ಅಲ್ಲದೇ ಈಗಾಗಲೇ ವಿರೋಧ ಪಕ್ಷಗಳು ಒಕ್ಕೂಟವನ್ನು ರಚಿಸಿಕೊಂಡಿವೆ.

ಬಿಜೆಪಿ ಸಹ ಒಕ್ಕೂಟ ರಚಿಸಿದ್ದು, ಈ ರಾಜ್ಯಗಳಲ್ಲಿ ಹೇಗೆ ಸೀಟು ಹಂಚಿಕೆ ಮಾಡಿಕೊಳ್ಳಲಿವೆ.

ಚುನಾವಣಾ ತಂತ್ರ ರೂಪಿಸಿಕೊಳ್ಳಲಿವೆ ಎನ್ನುವುದು ಅತ್ಯಂತ ಮುಖ್ಯವಾಗಲಿದೆ.