ನಮ್ಮ ಕನ್ನಡ ಚಿತ್ರರಂಗದ ಖ್ಯಾತ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೃಷಿ ಇಲಾಖೆಯ ರಾಯಭಾರಿಯಾಗಲಿದ್ದಾರೆ. ಕೃಷಿ ಇಲಾಖೆಯ ಚಟುವಟಿಕೆಗಳು ಹಾಗೂ ಕೃಷಿ ಮಂತ್ರಿಯ ಕಾರ್ಯವೈಖರಿಯನ್ನು ಅವರು ಮೆಚ್ಚಿದ್ದಾರೆ.
ಕೃಷಿ ಸಚಿವರಾದಂತಹ ಬಿಸಿ ಪಾಟೀಲ್ ಅವರು ಚಾಮರಾಜನಗರಕ್ಕೆ ಭೇಟಿ ನೀಡಿ ವಾಪಸಾಗುತ್ತಿರುವ ಸಮಯದಲ್ಲಿ ನಟ ದರ್ಶನ್ ಅವರು ತಮ್ಮ ತೋಟಕ್ಕೆ ಅವರನ್ನು ಆಹ್ವಾನಿಸಿದರು. ಹಾಗಾಗಿ ಬಿಸಿ ಪಾಟೀಲ್ ಅವರು ದರ್ಶನ್ ಅವರಿಗೆ ಕೃಷಿ ಇಲಾಖೆಯ ಹೊಸ ಯೋಜನೆಗಳು ಹಾಗೂ ಕಾರ್ಯವೈಖರಿಯನ್ನು ದರ್ಶನ್ ಅವರಿಗೆ ವಿವರಿಸಿದರು.ಇದಕ್ಕೆ ದರ್ಶನ್ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ನಮಗೆ ನಿಮಗೆಲ್ಲ ತಿಳಿದಿರುವಂತೆ ದರ್ಶನ್ ಅವರು ಕೂಡ ಕೃಷಿ ಪ್ರೇಮಿ. ಹಾಗಾಗಿ ಬಿಸಿ ಪಾಟೀಲ್ ಅವರು ದರ್ಶನ್ ಅವರಿಗೆ ನೀವೇಕೆ ನಮ್ಮ ಕೃಷಿ ಇಲಾಖೆಯ ರಾಯಭಾರಿ ಆಗಬಾರದು ಎಂದು ಪ್ರಶ್ನಿಸಿದಾಗ ಇದಕ್ಕೆ ಒಪ್ಪಿಕೊಂಡ ಅಂತಹ ನಟ ದರ್ಶನ್ ಅವರು ಯಾವುದೇ ಸಂಭಾವನೆಯನ್ನು ಪಡೆಯಲಾರದೆ ಈ ಕೆಲಸ ನಿರ್ವಹಿಸುತ್ತೇನೆ ಎಂದು ಒಪ್ಪಿಕೊಂಡಿದ್ದಾರೆ.
ದರ್ಶನ್ ಅವರು ಕೃಷಿ ಇಲಾಖೆಯ ರಾಯಭಾರಿ ಆಗುವ ಮೂಲಕ ಕೃಷಿ ಯೋಜನೆಗಳು ರೈತರಿಗೆ ತಲುಪಲು ಹೆಚ್ಚು ಸಹಾಯವಾಗುತ್ತದೆ ಹಾಗೂ ನಮ್ಮ ಕಾರ್ಯಕ್ರಮಗಳು ರೈತರಿಗೆ ಇನ್ನಷ್ಟು ಸ್ಪೂರ್ತಿ ತುಂಬುತ್ತವೆ ಎಂದು ಹೇಳಿದರು.