News

DA Hike: 1 ಕೋಟಿಗೂ ಹೆಚ್ಚಿನ ನೌಕರರು ಹಾಗೂ ಪಿಂಚಣಿದಾರರಿಗೆ ಸಿಹಿ ಸುದ್ದಿ: ಡಿಎ ಶೇ.4ರಷ್ಟು ಹೆಚ್ಚಳ ಸಾಧ್ಯತೆ!

06 February, 2023 12:38 PM IST By: Kalmesh T
DA Hike: Good news for central government employees: DA hike of 4% likely!

ಕೇಂದ್ರದ ಬಜೆಟ್‌ನಲ್ಲಿ ಸರ್ಕಾರಿ ನೌಕರರು ಸಾಕಷ್ಟು ನಿರೀಕ್ಷೆಗಳೊಂದಿಗೆ ಕಾಯುತ್ತಿದ್ದರು. ಆದರೆ, ಅವರಿಗೆ ಬಜೆಟ್‌ನಲ್ಲಿ ಖುಷಿ ವಿಚಾರ ದೊರೆತಿರಲಿಲ್ಲ. ಆದರೆ, ಇದೀಗ ಕೇಂದ್ರದಿಂದ ಡಿಎ ಹೆಚ್ಚಳ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿವೆ.

ಇದನ್ನೂ ಓದಿರಿ: ಸರ್ಕಾರಿ ನೌಕರರ ಕನಿಷ್ಠ ವೇತನ ಹೆಚ್ಚಳ ಸಾಧ್ಯತೆ! ಎಷ್ಟು? ಏನು? ಇಲ್ಲಿದೆ ವಿವರ

2023ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (Dearness Allowance) ಹೆಚ್ಚಳ ಮಾಡಬಹುದು ಎನ್ನುವ ನಿರೀಕ್ಷೆಯಿತ್ತು.

ಆದರೆ, ಕೇಂದ್ರ ಸರ್ಕಾರ ಅಂತಹ ಯಾವುದೇ ಘೋಷಣೆಯನ್ನು ಮಾಡಲಿಲ್ಲ. ಇದರಿಂದ ತುಸು ನಿರಾಸೆಗೊಂಡಿದ್ದ ಕೇಂದ್ರ ಸರ್ಕಾರದ 1 ಕೋಟಿಗೂ ಹೆಚ್ಚಿನ ನೌಕರರು ಹಾಗೂ ಪಿಂಚಣಿದಾರರಿಗೆ ಸಿಹಿ ಸುದ್ದಿಯೊಂದು ನೀಡಿದೆ.

ಕೇಂದ್ರ ಸರ್ಕಾರ ತುಟ್ಟಿ ಭತ್ಯೆಯನ್ನು (Dearness Allowance) ಶೇ.4ರಷ್ಟು ಅಂದರೆ ಶೇಕಡ 38 ರಿಂದ ಶೇಕಡ 42ಕ್ಕೆ  ಹೆಚ್ಚು ಮಾಡುವ ನಿರೀಕ್ಷೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಪಿಂಚಣಿದಾರರೇ ಗಮನಿಸಿ : ಫೆಬ್ರವರಿ 20ರೊಳಗೆ ಈ ಕೆಲಸ ಮಾಡುವಂತೆ ಸರ್ಕಾರದ ಸೂಚನೆ!

ಈ ಹೆಚ್ಚಳವನ್ನು ಪ್ರತಿ ತಿಂಗಳು ಕಾರ್ಮಿಕರ ಇಲಾಖೆ ಬಿಡುಗಡೆ ಮಾಡುವ ಕೈಗಾರಿಕ ಕಾರ್ಮಿಕರ (CPI-IW) ಗ್ರಾಹಕರ ಬೆಲೆ ಸೂಚ್ಯಂಕ ಆಧರಿಸಿ ಮಾಡಲಾಗುವುದು.

ಒಂದು ವೇಳೆ ಕೇಂದ್ರ ಸರ್ಕಾರ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿದರೆ 2023ರ ಜನವರಿ 1ರಿಂದಲೇ Dearness Allowance ಹೆಚ್ಚಳ ಜಾರಿಗೆ ಬರಲಿದೆ.

ಕೊನೆಯದಾಗಿ ಈ ಹಿಂದೆ ಸೆಪ್ಟೆಂಬರ್  28, 2022ರಂದು ಡಿಎ ಪರಿಷ್ಕರಣೆ ಮಾಡಲಾಗಿತ್ತು. ಈ ಭತ್ಯೆಯನ್ನು ವರ್ಷದಲ್ಲಿ ಎರಡು ಬಾರಿ ಅಂದರೆ, ಜನೆವರಿ ಹಾಗೂ ಜುಲೈನಲ್ಲಿ ಪರಿಷ್ಕರಿಸಲಾಗುತ್ತದೆ.

ಆದ್ದರಿಂದ ಈ ತಿಂಗಳು ಡಿಎ (Dearness Allowance) ಪರಿಷ್ಕರಣೆ ಮಾಡುವ ಸಾಧ್ಯತೆ ಹೆಚ್ಚಿದೆ.

2022ರ ಮಾರ್ಚ್ ನಲ್ಲಿ ಕೇಂದ್ರ ಸಚಿವ ಸಂಪುಟ ಡಿಎಯನ್ನು (DA) ಶೇ.3ಕ್ಕೆ ಏರಿಕೆ ಮಾಡಲು ಒಪ್ಪಿಗೆ ನೀಡಿತ್ತು. ಇದರಿಂದಾಗಿ ಡಿಎ ಮೂಲವೇತನದ ಶೇ.34ಕ್ಕೆ ಹೆಚ್ಚಳವಾಗಿತ್ತು.

ಇನ್ನು ಸೆಪ್ಟೆಂಬರ್ ನಲ್ಲಿ ಕೂಡ ಕೇಂದ್ರ ಸರ್ಕಾರ ನೌಕರರ ಡಿಎ ಶೇ.4ರಷ್ಟು ಏರಿಕೆ ಮಾಡಲು ಒಪ್ಪಿಗೆ ನೀಡಿತ್ತು. ಪರಿಣಾಮ ಕೇಂದ್ರ ಸರ್ಕಾರಿ ನೌಕರರ ಡಿಎ ಮೂಲವೇತನದ ಶೇ.38ಕ್ಕೆ ಏರಿಕೆಯಾಗಿದೆ.

ಜುಲೈ 1ರಿಂದ ಈ ಹೆಚ್ಚಳ (Hike) ಮಾಡಲಾಗಿದೆ. ಇದರಿಂದ ಸುಮಾರು 47.68 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಿದೆ.