ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಧಾರಾಕಾರ ಮಳೆ ಆಗುತ್ತಿದ್ದು, ಎರಡು ರಾಜ್ಯಗಳ ವಿವಿಧ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ (ಭಾರೀ ಮಳೆ ಆಗುವ ಸಾಧ್ಯತೆ) ಘೋಷಿಸಲಾಗಿದೆ.
ರಾಜ್ಯದ ಏಳು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸಾಧ್ಯತೆ: ಯಲ್ಲೋ ಅಲರ್ಟ್!
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ ಚೆಂಗಲ್ಪಟ್ಟು, ಕಾಂಚೀಪುರಂ, ವಿಲ್ಲುಪುರಂ, ಕಡಲೂರು, ರಾಣಿಪೇಟ್, ವೆಲ್ಲೂರು ಮತ್ತು ತಿರುವಳ್ಳೂರು ಸೇರಿದಂತೆ 27 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಚಂಡಮಾರುತವು ಶನಿವಾರ (ಡಿಸೆಂಬರ್ 10) ಮಧ್ಯರಾತ್ರಿ ಮತ್ತು ಮುಂಜಾನೆ ಮಧ್ಯರಾತ್ರಿ ಮತ್ತು ಮುಂಜಾನೆಯ ನಡುವೆ ಪುದುಚೇರಿ ಮತ್ತು ಶ್ರೀಹರಿಕೋಟಾ ಸಮುದ್ರಭಾಗದಲ್ಲಿ ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಮಾರುತಗಳು ಚಲಿಸುತ್ತದೆ.
ಮಾಂಡೌಸ್ ಚಂಡಮಾರುತ: ರಾಜ್ಯದ ವಿವಿಧ ಜಿಲ್ಲೆಯಲ್ಲಿ ಧಾರಾಕಾರ ಮಳೆ
ಗಂಟೆಗೆ 85 ಕಿಮೀ ವೇಗದಲ್ಲಿ 65 ರಿಂದ 75 ಕಿಮೀ ವೇಗದಲ್ಲಿ ಬೀಸುತ್ತದೆ. ಇದರ ಪ್ರಭಾವದಿಂದಾಗಿ ಚೆನ್ನೈ ಮತ್ತು ತಮಿಳುನಾಡಿನ ಇತರ ಜಿಲ್ಲೆಗಳಲ್ಲಿ
ಮುಂದಿನ 2 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಚಂಡಮಾರುತದ ಪ್ರಭಾವ ಹೆಚ್ಚಾಗಿದ್ದು, ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಕೂಡ ಸಜ್ಜುಗೊಂಡಿದೆ ಮತ್ತು ತಕ್ಷಣದ ಸೇವೆಗಾಗಿ ಸುಮಾರು 169 ಶಿಬಿರಗಳನ್ನು ಸ್ಥಾಪಿಸಲಾಗಿದೆ.
Heavy Rain| ರಾಜ್ಯದ ವಿವಿಧೆಡೆ ಧಾರಾಕಾರ ಮಳೆ!
ಬಂಗಾಳ ಕೊಲ್ಲಿಯ ನೈರುತ್ಯ ಭಾಗದಲ್ಲಿ ವಾಯುಭಾರ ಕುಸಿತದಿಂದಾಗಿ ಸೃಷ್ಟಿಯಾಗಿರುವ ಮಾಂಡೌಸ್ ಚಂಡಮಾರುತದ ಪರಿಣಾಮ ಪುದುಚೇರಿ, ತಮಿಳುನಾಡು, ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಮುಂದಿನ 48 ಗಂಟೆಗಳವರೆಗೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
38.30 ಲಕ್ಷ ಕೋಟಿ ಡಿಜಿಟಲ್ ಪಾವತಿ; ಚಿನ್ನ- ಬೆಳ್ಳಿ ದರ ತುಸು ಹೆಚ್ಚಳ!
ಚೆನ್ನೈ ನಗರ ಸೇರಿದಂತೆ ಕಾಂಚೀಪುರಂ, ಚೆಲ್ಲೂರು, ತಿರುವಳ್ಳೂರು ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಿ ಆಗುವ ಸಾಧ್ಯತೆ ಇದೆ.
ಪುದುಚೆರಿ ಜಿಲ್ಲಾಧಿಕಾರಿ ಇ.ವಲ್ಲವನ್ ಅವರು 24 ಗಂಟೆಗಳ ಕಾಲ ಸೆಕ್ಷನ್ 144 ಜಾರಿಗೆ ಆದೇಶಿಸಿದ್ದಾರೆ. ಚೆನ್ನೈ ಮಹಾನಗರ ಪಾಲಿಕೆಯು ಸಹಾಯವಾಣಿ (1913) ಬಿಡುಗಡೆ ಮಾಡಿದೆ. ಕರಾವಳಿ ಪ್ರದೇಶಗಳಿಗೆ ಹೋಗದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ.
Heavy Rain| ರಾಜ್ಯದ ವಿವಿಧೆಡೆ ಧಾರಾಕಾರ ಮಳೆ!
ಗುರುವಾರ ಸಂಜೆ ಚೆನ್ನೈ ನಗರದ ಬಹುತೇಕ ಕಡೆಗಳಲ್ಲಿ ಮಳೆಯಾಗಿದೆ. ಪುದುಚೆರಿಯ ಹಾಗೂ ಶ್ರೀಹರಿಕೋಟಾ ನಡುವೆ ಚಂಡಮಾರುತವು ಗುರುವಾರ ತಡರಾತ್ರಿ ಅಥವಾ ಶುಕ್ರವಾರ ಮುಂಜಾನೆ ವೇಳೆಗೆ ಅಪ್ಪಳಿಸಲಿದೆ. ಇದರ ಹಿನ್ನೆಲೆಯಲ್ಲಿ ರಾಷ್ಟ್ರೀಯ ನೈಸರ್ಗಿಕ ವಿಪತ್ತು ನಿರ್ವಹಣೆ ಪಡೆ (ಎನ್‌ಡಿಆರ್‌ಎಫ್) ತಂಡಗಳು ಪುದುಚೆರಿ ಹಾಗೂ ತಮಿಳುನಾಡಿನಲ್ಲಿ ಸನ್ನದ್ಧವಾಗಿವೆ. ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳಿಗೂ ಕೂಡ ಎನ್‌ಡಿಆರ್‌ಎಫ್‌ನಿಂದ ಮುನ್ನೆಚ್ಚರಿಕೆ ಕಾಯ್ದುಕೊಳ್ಳಲು ಸೂಚಿಸಲಾಗಿದೆ.
ಮತ್ತೊಂದೆಡೆ, ಆಂಧ್ರಪ್ರದೇಶ ಸಿಎಂ ಜಗನ್‌ಮೋಹನ್ ರೆಡ್ಡಿ ಅವರು ಗುರುವಾರ ಕರಾವಳಿ ತೀರದ ಜಿಲ್ಲೆಗಳ ಅಧಿಕಾರಿಗಳಿಗೆ ಚಂಡಮಾರುತದ ಮೇಲೆ ನಿಗಾ ಇರಿಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
Food crisis| ರಸಗೊಬ್ಬರ ಕೊರತೆಯಿಂದ ಆಹಾರ ಬಿಕ್ಕಟ್ಟು: ಪ್ರಧಾನಿ ಮೋದಿ ಎಚ್ಚರಿಕೆ|
ಚಂಡಮಾರುತದ ಪ್ರಭಾವದಿಂದಾಗಿ ತಮಿಳುನಾಡಿನಲ್ಲಿ ಧಾರಾಕಾರ ಮಳೆಯಿಂದಾಗಿ ಸಂವಹನ ವ್ಯವಸ್ಥೆ (ನೆಟ್‌ವರ್ಕ್ ವ್ಯವಸ್ಥೆ)ಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ, ಈ ನಿಟ್ಟಿನಲ್ಲೂ ಜನರಿಗೆ ಎಚ್ಚರಿಕೆಗಳನ್ನು ನೀಡಲಾಗಿದೆ.
ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಸಂಪ್ರದಾಯದಂತೆ ಚಂಡಮಾರುತಕ್ಕೆ ಈ ಬಾರಿ ಯುಎಇಯಿಂದ ಹೆಸರು ಸೂಚಿಸಿಲಾಗಿದೆ. ಅರೇಬಿಕ್ ಪದವಾಗಿರುವ ಮಾಂಡೌಸ್ ಹೆಸರನ್ನು ಸೂಚಿಸಿದೆ.