News

ಸಿ.ಟಿ ಸ್ಕ್ಯಾನ್‌ಗೆ 1,500 ಮಾತ್ರ! ಖಾಸಗಿ ಆಸ್ಪತ್ರೆಗಳು ಹೆಚ್ಚು ಶುಲ್ಕ ಪಡೆಯುವಂತಿಲ್ಲ: ಡಾ. ಕೆ. ಸುಧಾಕರ್‌

07 May, 2021 9:03 PM IST By:
Health Minister Sudhakar

ಕೋವಿಡ್ ಸೋಂಕಿತರಿಗೆ ಸಿ.ಟಿ ಸ್ಕ್ಯಾನ್ ಮಾಡಲು ಖಾಸಗಿ ಆಸ್ಪತ್ರೆಗಳಿಗೆ ದರ ನಿಗದಿ ಮಾಡಲಾಗಿದ್ದು 1500 ಕ್ಕಿಂತ ಹೆಚ್ಚುವರಿ ವಸೂಲಿ ಮಾಡಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಆರೋಗ್ಯ ಸಚಿವ ಡಾ.ಕೆ ಸುಧಾಕರ್‌ ನೀಡಿದ್ದಾರೆ.

ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಹಬ್ಬುತ್ತಿದೆ. ಸೋಂಕಿನ ತೀವ್ರತೆಯನ್ನು ಊಹಿಸಲು ಸಾಧ್ಯವಾಗುತ್ತಿಲ್ಲ. ಕೊವಿಡ್ ಸೋಂಕಿತರ ಸಾವಿನ ಸಂಖ್ಯೆ ಅಧಿಕವಾಗುತ್ತಿದೆ. ವೆಂಟಿಲೇಟರ್,ಆಕ್ಸಿಜನ್ ಸಿಲಿಂಡರ್, ಬೆಡ್ ಸಿಗದೇ  ರೋಗಿಗಳು ಪರದಾಡಿ ಜೀವಕಳೆದುಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಸೋಂಕಿನ ತೀವ್ರತೆಯ ಪರಿಣಾಮದಿಂದ ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗುತ್ತಿದ್ದಾರೆ.

ಕೆಲ ದಿನಗಳಿಂದ ಅನೇಕ ಪ್ರಕರಣಗಳಲ್ಲಿ ಕೊರೊನ್ ಸೋಂಕು ಖಚಿತಪಡಿಸಲು ಸಿಟಿ ಸ್ಕ್ಯಾನ್ ಹಾಗೂ ಡಿಜಿಟಲ್ ಎಕ್ಸ್ -ರೇ ಅವಶ್ಯಕತೆ ಇದಿದ್ದು ತಿಳಿದು ಬಂದಿದ್ದರಿಂದ ಖಾಸಗಿ ಆಸ್ಪತ್ರೆಗಳು ಸ್ಕ್ಯಾನ್ ಮಾಡಿಸಿಕೊಳ್ಳು ದರವನ್ನು ಏರಿಕೆ ಮಾಡಿತ್ತು, ಈ ಘಟನೆಯನ್ನು ತೀವ್ರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಈಗ ಸ್ಕ್ಯಾನ್ ಗಳ ಬೆಲೆಗೆ ಮೂಗು ದಾರ ಹಾಕಲು  ಮೂಂದಾಗಿದೆ.

ಇದನ್ನು ಗಮನಿಸಿದ ಆರೋಗ್ಯ ಸಚಿವರಾದ ಡಾ.ಸುಧಾಕರ ಅವರು - ''ಇತ್ತೀಚೆಗೆ ಅನೇಕ ಪ್ರಕರಣಗಳಲ್ಲಿ ಕೊರೊನ್ ಸೋಂಕು ದೃಢಪಡಿಸಲು ಸಿಟಿ ಸ್ಕ್ಯಾನ್ ಹಾಗೂ ಡಿಜಿಟಲ್ ಎಕ್ಸ್ -ರೇ ಅವಶ್ಯಕತೆ ಇತ್ತು, ಇದರ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆ/ಲ್ಯಾಬ್ ಗಳಲ್ಲಿ ಸಿಟಿ ಸ್ಕ್ಯಾನ್ ಗೆ ಗರಿಷ್ಠ 1,500 ಹಾಗೂ ಡಿಜಿಟಲ್ ಎಕ್ಸ್ - ರೇಗೆ ಗರಿಷ್ಠ  250 ದರ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ.'' ಎಂದು ಅಧಿಕೃತವಾಗಿ ಟ್ವೀಟ್ ಮಾಡುವ ಮುಖಾಂತರ ದರದ ಬಗ್ಗೆ ಖಚಿತಪಡಿಸಿದ್ದಾರೆ‌.

ಕೋವಿಡ್‌ ಲಸಿಕೆ ಕೊರತೆ ಕುರಿತಾಗಿ ಪ್ರತಿಕ್ರಿಯೆ ನೀಡಿದ ಅವರು, 70 ಲಕ್ಷ ಜನರು ಮೊದಲ ಡೋಸ್ ತೆಗೆದುಕೊಂಡವರಿಗೆ ಒಂದು ವಾರದಲ್ಲಿ ಎರಡನೇ ಡೋಸ್ ತೆಗೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಸರ್ಕಾರ ಲಸಿಕೆ ಕೊಡುವುದಲ್ಲ. ಎರಡು ಸಂಸ್ಥೆಗಳಿಂದ ನಾವು ಖರೀದಿ ಮಾಡುತ್ತಿದ್ದೇವೆ. ಎಲ್ಲಾ ರಾಜ್ಯ ಸರ್ಕಾರಗಳು ಈ ಸಂಸ್ಥೆಗಳಿಗೆ ಲಸಿಕೆ ನೀಡಲು ಮನವಿ ಮಾಡಿದೆ. ಸೀರಂ ಇನ್ಟಿಟ್ಯೂಟ್ ಇರುವುದು ಮಹಾರಾಷ್ಟ್ರದಲ್ಲಿ. ಈ ಕಾರಣಕ್ಕಾಗಿ ಸ್ಥಳೀಯ ಸರ್ಕಾರ ಅಲ್ಲಿ ಮೊದಲು ಪಡೆದುಕೊಂಡಿದೆ. ನಾವು ಕೂಡಾ ಆದಷ್ಟು ಶೀಘ್ರದಲ್ಲಿ ಲಸಿಕೆ ಪಡೆದುಕೊಳ್ಳುತ್ತೇವೆ ಎಂಬ ಭರವಸೆ ನೀಡಿದ್ದಾರೆ.