News

ಆರ್ಸಿಬಿ ವಿರುದ್ಧ 69 ರನ್ಗಳ ಭರ್ಜರಿ ಜಯ ಸಾಧಿಸಿ ಅಗ್ರಸ್ಥಾನಕ್ಕೇರಿದ ಚೆನ್ನೈ ಸೂಪರ್ ಕಿಂಗ್ಸ್

25 April, 2021 9:12 PM IST By:
Ravindra Jadeja

ರವೀಂದ್ರ ಜಡೇಜಾ ಆಲ್​ರೌಂಡ್​ ಆಟದ ನೆರವಿನಿಂದ 3 ಬಾರಿಯ ಐಪಿಎಲ್ ಚಾಂಪಿಯನ್​ ಚೆನ್ನೈ ಸೂಪರ್ ಕಿಂಗ್ಸ್​ 69 ರನ್​ಗಳ ಅಂತರದಿಂದ ಆರ್​ಸಿಬಿಯನ್ನು ಮಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಸೋಲಿಲ್ಲದ ಸರದಾರನಾಗಿ ಮಿಂಚುತ್ತಿದ್ದ ಕೊಹ್ಲಿ ಪಡೆ ಟೂರ್ನಿಯಲ್ಲಿ ಮೊದಲು ಸೋಲು ಅನುಭವಿಸಿತು. ರವೀಂದ್ರ ಜಡೇಜಾ ಮತ್ತು ಇಮ್ರಾನ್ ತಾಹೀರ್ ದಾಳಿಗೆ ನಲುಗಿದ ಆರ್​ಸಿಬಿ ಸಿಎಸ್​ಕೆ ನೀಡಿದ 192 ರನ್​ಗಳ ಗುರಿಗೆ ಪ್ರತಿಯಾಗಿ 9 ವಿಕೆಟ್​ ಕಳೆದುಕೊಂಡು 122 ರನ್​ಗಳಿಸಿ ಸೋಲು ಕಂಡಿತು.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ‌‌ ಪಂದ್ಯದಲ್ಲಿ ಆರ್ ಸಿಬಿ, ಸಿಎಸ್ ಕೆ ಬೌಲಿಂಗ್ ದಾಳಿಗೆ ದೂಳಿಪಟವಾಯಿತು. ಪಡಿಕ್ಕಲ್ 34 ಹಾಗೂ ಮ್ಯಾಕ್ಸ್ ವೆಲ್ 22 ರನ್ ಗಳಿಸಿದ್ದನ್ನು ಹೊರತು ಪಡಿಸಿ ಕೊಹ್ಲಿ, ಎಬಿಡಿ ಸೇರಿದಂತೆ ಉಳಿದ ಆಟಗಾರರು ಬೇಗನೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಅಂತಿಮವಾಗಿ ಆರ್ ಸಿಬಿ 20 ಓವರ್ ಗಳಲ್ಲಿ 9 ವಿಕೆಟ್ ಗೆ 122 ರನ್ ಗಳಿಸಿ‌ ಹೀನಾಯ ಸೋಲು ಅನುಭವಿಸಿತು.
ಜಡೇಜಾ 3 ಹಾಗೂ ಇಮ್ರಾನ್ ತಹೀರ್ ಎರಡು ವಿಕೆಟ್ ಪಡೆದರು. ಮೊದಲು ಬ್ಯಾಟ್ ಮಾಡಿದ ಸಿಎಸ್ ಕೆ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 191 ರನ್ ಪೇರಿಸಿತು.
ಆಲ್ ರೌಂಡರ್ ರವೀಂದ್ರ ಜಡೇಜಾ ಕೇವಲ 28 ಎಸೆತಗಳಲ್ಲಿ ಐದು‌ ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ಸಿಡಿಸಿ ಅಜೇಯ 62 ರನ್ ಬಾರಿಸಿದರು.ಕೊನೆಯ ಓವರ್ ನಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ 37 ರನ್ ಚಚ್ಚಿದರು. ಡೂಪ್ಲೆಸಿಸ್ 41ಎಸೆತಗಳಲ್ಲಿ 50 ರನ್ ಗಳಿಸಿದರು. ರೈನಾ 24 ರನ್ ಗಳಿಸಿದರು. ಅಲ್ಲದೆ ಐಪಿಎಲ್ ನಲ್ಲಿ 200 ಸಿಕ್ಸರ್ ಬಾರಿಸಿದ ಕೀರ್ತಿಗೂ ಭಾಜನರಾದರು. ಋತುರಾಜ್ 33 ರನ್ ಗಳಿಸಿದರು.

ಜಡೇಜಾ ಕೊನೆಯ ಓವರ್​ನಲ್ಲಿ ಹರ್ಷಲ್​ ಪಟೇಲ್​ಗೆ 5 ಸಿಕ್ಸರ್​ ಸೇರಿದಂತೆ 37 ರನ್​ ಚಚ್ಚುವ ಮೂಲಕ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು. ಅರ್ಧಶತಕ ಮತ್ತು 3 ವಿಕೆಟ್​ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.