ಆತ್ಮೀಯ ರೈತರೆ ಈ ಬಾರಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ರೈತ ತಾನು ಬೆಳೆದ ಬೆಳೆಯನ್ನು ತಾನೇ ಸಮೀಕ್ಷೆ ಮಾಡಲೆಂದು ಮುಂಗಾರಿನಲ್ಲಿ ಮುಂಗಾರು ಬೆಳೆ ಸಮೀಕ್ಷೆ app ಬಿಡುಗಡೆ ಮಾಡಿದ್ದು ತಮಗೆಲ್ಲ ತಿಳಿದಿದೆ. ಅದೇ ರೀತಿ ಹಿಂಗಾರಿನ ಬೆಳೆಗಳನ್ನು ಸಮೀಕ್ಷೆ ಮಾಡಲು ಕೂಡ ಒಂದು ಆಪನ್ನು ಸರ್ಕಾರ ಬಿಡುಗಡೆ ಮಾಡಿತ್ತು,, ಹಾಗಾಗಿ ಅದರ ಮೂಲಕ ನಾವು ಹಿಂಗಾರಿನಲ್ಲಿ ಬೆಳೆದಂತಹ ಬೆಳೆಗಳ ಸಮೀಕ್ಷೆಯನ್ನು ಮಾಡಿದ್ದೆವು,ಒಂದು ವೇಳೆ ನಾವು ಮಾಡಿದ ಸಮೀಕ್ಷೆಯಲ್ಲಿ ಏನಾದರೂ ತಪ್ಪಾಗಿದ್ದರೆ ಅದಕ್ಕೆ ಆಕ್ಷೇಪಣೆ ಸಲ್ಲಿಸಲು ಫೆಬ್ರವರಿ 20 ಕೊನೆಯ ದಿನಾಂಕ ಎಂದು ತಿಳಿಸಲಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಹಿಂಗಾರು ಬೆಳೆ ಸಮೀಕ್ಷೆ ಮಾಡಲು ಅವಧಿ ಮುಕ್ತಾಯವಾಗಿದ್ದು, ಅದರಲ್ಲಿ ಏನಾದರೂ ತಪ್ಪಾಗಿದ್ದರೆ ಬೆಳೆದರ್ಶಕ ಯಾಪ್ ಮೂಲಕ ಆಕ್ಷೇಪಣೆಯನ್ನು ಸಲ್ಲಿಸಲು ಫೆಬ್ರುವರಿ 20 ಕೊನೆಯ ದಿನಾಂಕ ಎಂದು ತಿಳಿಸಲಾಗಿದೆ.
ಬೆಳೆ ಸಮೀಕ್ಷೆಯನ್ನು ಮಾಡುವ ಮೂಲಕ ನಾವು ಸರ್ಕಾರದ ವಿವಿಧ ಯೋಜನೆಗಳ ಆದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ, ಬೆಳೆ ವಿಮೆ, ಕನಿಷ್ಠ ಬೆಂಬಲ ಬೆಲೆ,ವಿಪತ್ತು ನಿರ್ವಹಣೆ,ಬರ ಮತ್ತು ನೆರೆಯಿಂದ ಹಾನಿಗೊಳಗಾದರೆ ಆಗ ಅರ್ಹ ಫಲಾನುಭವಿಗಳಿಗೆ ಸರ್ಕಾರದಿಂದ ನೆರವು ನೀಡಲು ಬೆಳೆ ಸಮೀಕ್ಷೆ ಉಪಯೋಗವಾಗುತ್ತದೆ.