News

ಬೆಳೆ ದರ್ಶಕ ಆ್ಯಪ್ ತಿದ್ದುಪಡಿಗೆ ಅಕ್ಟೋಬರ್ 15 ರ ವರೆಗೆ ಅವಕಾಶ

13 October, 2020 7:00 AM IST By:

“ಬೆಳೆ ದರ್ಶಕ 2020” ಆ್ಯಪ್ ಮೂಲಕ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯ ದಾಖಲೀಕರಣವು ಕ್ರಮಬದ್ಧವಾಗಿದೆ ಎಂಬುವುದನ್ನು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಬೆಳೆ ದಾಖಲೀಕರಣದ ಕುರಿತು ಆಕ್ಷೇಪಣೆಗಳಿದ್ದಲ್ಲಿ  ಅಕ್ಟೋಬರ್ 15 ರೊಳಗಾಗಿ ಆಕ್ಷೇಪಣೆಗಳನ್ನು ಸಲ್ಲಿಸಬಹುದು.

ಪ್ರಸಕ್ತ ಸಾಲಿನಲ್ಲಿ ರೈತರು ಮತ್ತು ಖಾಸಗಿಯವರಿಂದ ಕಂದಾಯ, ಕೃಷಿ ಇಲಾಖೆಯು ಬೆಳೆ ಸಮೀಕ್ಷೆ ಮಾಡುತ್ತಿದ್ದು, ಬೆಳೆ ಸಮೀಕ್ಷೆ ಕುರಿತಂತೆ ಆಕ್ಷೇಪಣೆಗಳಿದ್ದರೆ “ಬೆಳೆ ದರ್ಶಕ್‌-2020 ಆ್ಯಪ್‌’ ಮೂಲಕ ಸಲ್ಲಿಸಬಹುದು. ಒಂದು ವೇಳೆ ಮಾಹಿತಿಯನ್ನು ತಪ್ಪಾಗಿ ದಾಖಲಿಸಿದ್ದರೆ ಅಕ್ಟೋಬರ್ 15 ರೊಳಗೆ ಆಕ್ಷೇಪಣೆ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಲು ಆ್ಯಪ್ನಣಲ್ಲಿ ಅವಕಾಶ ಕಲ್ಪಿಸಲಾಗಿದೆ.

ಬೆಳೆ ದರ್ಶಕ್‌ ಆ್ಯಪ್‌ ವಿಶೇಷತೆ:

ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ದಾಖಲಾಗಿರುವ ಬೆಳೆ ವಿವರ, ವಿಸ್ತೀರ್ಣದ ಮಾಹಿತಿ ಮತ್ತು ಬೆಳೆ ಸಮೀಕ್ಷೆ ಸಮಯದಲ್ಲಿ ನಿಮ್ಮ ಜಮೀನಿನಲ್ಲಿ ತೆಗೆದ ಜಿಪಿಎಸ್‌ ಆಧಾರಿತ ಛಾಯಾಚಿತ್ರಗಳನ್ನು ವೀಕ್ಷಿಸಬಹುದು. ಬೆಳೆ ಸಮೀಕ್ಷೆ ಮಾಡಿದವರ ಹೆಸರು, ಮೊಬೈಲ್‌ ಸಂಖ್ಯೆ ಪಡೆಯಬಹುದು. ಅಲ್ಲದೆ, ಬೆಳೆ ಸಮೀಕ್ಷೆ ಪ್ರಕಾರ ದಾಖಲಿಸಿದ ಮಾಹಿತಿಯನ್ನು ಮೇಲ್ವಿಚಾರಣೆ ಮಾಡುವ ಅಧಿಕಾರಿಗಳು ಅಂಗೀಕರಿಸಿದ್ದಾರೋ, ಇಲ್ಲವೋ ಎಂದು ಷರಾ ಕಾಲಂನಲ್ಲಿ ತಿಳಿದು ಬೆಳೆ ಸಮೀಕ್ಷೆ ವಿವರ ತಪ್ಪಾಗಿ ದಾಖಲಾಗಿದ್ದಲ್ಲಿ ಆಕ್ಷೇಪಣೆ ಸಲ್ಲಿಸಬಹುದು. ಮೇಲ್ವಿಚಾರಣೆ ಮಾಡುವ ಸರ್ಕಾರಿ ಅಧಿಕಾರಿಗಳು ಆಕ್ಷೇಪಣೆ ಕುರಿತು ಏನು ಕ್ರಮಕೈಗೊಂಡಿದ್ದಾರೆ ಎಂದು ತಿಳಿಯಬಹುದು.

     ಬೆಳೆ ಸಮೀಕ್ಷೆ 2020-21 ಕಾರ್ಯಕ್ರಮ ಮುಕ್ತಾಯ ಹಂತದಲ್ಲಿದ್ದು, ಖಾಸಗಿ ನಿವಾಸಿಗಳು ಅಥವಾ ರೈತರು ಬೆಳೆ ದಾಖಲೀಕರಣ ಮಾಡಿರುವ ಕುರಿತು ಸುಪರ ವೈಸರಗಳು ಮೇಲ್ವಿಚಾರಣೆ ನಡೆಸಿ, ಕ್ರಮಬದ್ಧವಾಗಿರುವುದನ್ನು ಸ್ವೀಕರಿಸುತ್ತಿದ್ದು, ಕ್ರಮಬದ್ಧವಲ್ಲದ್ದನ್ನು ತಿರಸ್ಕರಿಸುತ್ತಿದ್ದಾರೆ. ಹೀಗೆ ತಿರಸ್ಕಾರ ಮಾಡಿದ ಪ್ಲಾಟುಗಳನ್ನು ಖಾಸಗಿ ನಿವಾಸಿ (P.R) ಗಳು ಪುನಃ ಸಮೀಕ್ಷೆ ನಡೆಸಿ, ಮರು ದಾಖಲೀಕರಣ ಮಾಡಲಾಗುತ್ತಿದೆ.

   ರೈತರು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ರೈತರು ಕೃಷಿ ಇಲಾಖೆ, ಕಂದಾಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು.