News

ಯಾವ ಜಿಲ್ಲೆಯಲ್ಲೂ ಬೆಳೆ ನಷ್ಟ ಪರಿಹಾರ ಆಗಿಲ್ಲ: ಕುರುಬೂರು ಶಾಂತಕುಮಾರ್‌

28 November, 2023 5:14 PM IST By: Hitesh
ಯಾವ ಜಿಲ್ಲೆಯಲ್ಲೂ ಪರಿಹಾರ ಸಿಕ್ಕಿಲ್ಲ

ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಲವು ಮನವಿ ಮಾಡಲಾಗಿದೆ.

ಬರಗಾಲದ ಸಂಕಷ್ಟದಲ್ಲಿರುವ ರೈತರಿಗೆ ಬೆಳೆ ನಷ್ಟ ಪರಿಹಾರ ಕೂಡಲೇ ಬಿಡುಗಡೆ ಮಾಡಿ ಎಂದು ಒತ್ತಾಯಿಸಲಾಗಿದೆ.

ಈ ಸಂಬಂಧ ಮನವಿ ಪತ್ರ ನೀಡಿರುವ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಅವರು,

ನಾನು ಹಾಗೂ ನಮ್ಮ ಪದಾಧಿಕಾರಿಗಳು ಕಳೆದ ಹತ್ತು ದಿನಗಳಿಂದ ರಾಜ್ಯದ ಬೀದರ್, ಗುಲ್ಬರ್ಗ, ಬಿಜಾಪುರ, ಬಾಗಲಕೋಟೆ, ಬೆಳಗಾವಿ, ಉತ್ತರ ಕನ್ನಡ

ಧಾರವಾಡ, ಹಾವೇರಿ, ಬೆಂಗಳೂರು ಗ್ರಾಮಾಂತರ ಮೈಸೂರು ಚಾಮರಾಜನಗರ ಜಿಲ್ಲೆಗಳಲ್ಲಿ 10 ದಿನಗಳು ಪ್ರವಾಸ ಮಾಡಿದಾಗ ಗಮನಿಸಿರುವ

ಮುಖ್ಯ ಸಮಸ್ಯೆಗಳ ಬಗ್ಗೆ ಕೂಡಲೇ ಕ್ರಮ ವಹಿಸಬೇಕೆಂದು ಕೋರುತ್ತೇವೆ ಎಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ

ಆಯಾ ಜಿಲ್ಲೆಗಳಲ್ಲಿರುವ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಡಿದ್ದಾರೆ.

ಬರ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಯಾವುದೇ ಜಿಲ್ಲೆಯಲ್ಲಿ ಬೆಳೆ ನಷ್ಟ ಪರಿಹಾರ ಬಿಡುಗಡೆ ಆಗಿರುವುದಿಲ್ಲ.

ಶೇಕಡ 50ರಷ್ಟು ಬೆಳೆ ನಾಶವಾಗಿದೆ. ಕಬ್ಬು ಹತ್ತಿ ತೂಗರಿ, ಜೋಳ, ಭತ್ತ ಮತ್ತಿತರ ಬೆಳೆಗಳು ನೀರಿಲ್ಲದೆ ಒಣಗಿಹೋಗಿವೆ ಕೃಷಿ ಇಲಾಖೆ

ಅಧಿಕಾರಿಗಳು ಸಮಗ್ರವಾಗಿ ಸಮರ್ಪಕ ನಮೀಕ್ಷೆ ನಡೆಸಿಲ್ಲ ಎಂದು ಕಂಡು ಬರುತ್ತಿದೆ ಎಂದು ಹೇಳಿದ್ದಾರೆ.

ಬೆಳೆ ನಷ್ಟ ಅಂದಾಜು ಸಮೀಕ್ಷೆಯಲ್ಲಿ ಕಬ್ಬು ಬೆಳೆಯನ್ನು ಸೇರಿಸಿರುವುದಿಲ್ಲ. ಶೇಕಡ 50ರಷ್ಟು ಕಬ್ಬು ಬೆಳೆಗಾರರು ಬರದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಶೇಕಡ 50ರಷ್ಟು ಕಬ್ಬಿನ ಬೆಳೆ ಒಣಗಿ ಹೋಗಿದೆ ಆದ್ದರಿಂದ ಕೂಡಲೇ ಕಬ್ಬಿನ ಬೆಳೆಯನ್ನು ಬರ ಪರಿಹಾರ ನಷ್ಟಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಲ್ಲದೇ ತೊಗರಿ ಹತ್ತಿ ಮೆಕ್ಕೆಜೋಳ ಬಿಳಿ ಜೋಳ ಬೆಳೆಗಳು ಶೇಕಡ 50ರಷ್ಟು ನಾಶವಾಗಿ ನಷ್ಟ ಅನುಭವಿಸುತ್ತಿದ್ದಾರೆ. ಬೆಳೆ ನಷ್ಟ ಪರಿಹಾರ ಸಿಕ್ಕಿಲ್ಲ

ಕೆಲವು ಜಿಲ್ಲೆಗಳಲ್ಲಿ ಖಾಸಗಿ ಫೈನಾನ್ಸ್ ಗಳವರು ಸಾಲ ವಸೂಲಿಗಾಗಿ ರೈತರನ್ನು ಪೀಡಿಸುತ್ತಿದ್ದಾರೆ. ಇಂಥವರ ವಿರುದ್ದ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು.

ಕೃಷಿ ಪಂಪ್‌ಸೆಟ್‌ಗಳಿಗೆ ಸರ್ಕಾರ ನೀಡುತ್ತಿರುವ ಏಳು ಗಂಟೆಗಳ ವಿದ್ಯುತ್ ನಿಂದ ಬೆಳೆಗಳಿಗೆ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ.

ಕನಿಷ್ಠ 10 ಗಂಟೆಗಳ ವಿದ್ಯುತ್ ನೀಡಬೇಕೆಂದು ರೈತರು ಒತಾಯಿಸಿದ್ದಾರೆ.

ಸಕ್ಕರೆ ಕಾರ್ಖಾನೆಗಳು ಸಕ್ಕರೆ ಇಳುವರಿಯಲ್ಲಿ ಮೋಸ ತೂಕದಲ್ಲಿ ಮೋಸ ಮಾಡುತ್ತಿದ್ದಾರೆ. ಆದ್ದರಿಂದ ಬೆಲೆ ಕಡಿಮೆ ಸಿಗುತ್ತಿದೆ ಇದನ್ನು

ತಪ್ಪಿಸಲು ಸರ್ಕಾರ ನೂತನ ತಂತ್ರಜ್ಞಾನ ಅಳವಡಿಸುವ ಕ್ರಮ ಕೈಗೊಂಡು ನ್ಯಾಯ ಕೊಡಿಸಬೇಕು, ಹಲವು ಸಕ್ಕರೆ ಕಾರ್ಖಾನೆಗಳು

ಕಬ್ಬು ಕಟಾವು ಸಾಗಾಣಿಕೆ ವೆಚ್ಚವನ್ನು ಸರ್ಕಾರ ನಿಗದಿ ಮಾಡಿದ ಹಣಕ್ಕಿಂತ ಹೆಚ್ಚು ಕಡಿತ ಮಾಡಿ ರೈತರಿಗೆ ವಂಚನೆ ಮಾಡುತ್ತಿದ್ದಾರೆ ಇದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ.

ಬಾಳೆ ಬೆಳೆಯನ್ನು ಸೇರಿಸಿರುವ ರೀತಿ ಕಬ್ಬು ಬೆಳೆಯನ್ನು ಎನ್ ಆರ್ ಇ ಜಿ ಯೋಜನೆಗೆ ಸೇರಿಸಬೇಕು ಇದರಿಂದ ಕಬ್ಬು ಬೇಸಾಯದ ಕೂಲಿ

ಸಮಸ್ಯೆಗೆ ಹಾಗೂ ನಷ್ಟ ಕಡಿಮೆಯಾಗಲು ಪರಿಹಾರ ಸಿಗುತ್ತದೆ.

ಕಬ್ಬಿನ ಬೆಳೆಯನ್ನು ಬೆಳೆವಿಮೆ ವ್ಯಾಪ್ತಿಗೆ ಸೇರಿಸಿದರೆ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇನ್ನು ಕಳೆದ ವರ್ಷ ಸರ್ಕಾರ ನಿಗದಿ

ಮಾಡಿದ ಹೆಚ್ಚುವರಿ ದರ 150ರೂ ಯಾವುದೇ ಕಾರ್ಖಾನೆ ಪಾವತಿ ಮಾಡಿಲ್ಲ ಸುಮಾರು 950 ಕೋಟಿ ರೂ ಬಾಕಿ ಇದೆ

ರೈತರಿಗೆ ಕೂಡಲೇ ಬಾಕಿ ಕೊಡಿಸಬೇಕು ಇದರಿಂದ ಬರಗಾಲದ ಕಷ್ಟಕ್ಕೆ ಸ್ವಲ್ಪ ಪರಿಹಾರ ಸಿಗುತ್ತದೆ ಎಂದು ಹೇಳಿದ್ದಾರೆ.

ಬೀದರ್ ಜಿಲ್ಲೆಯ ಕಾರಂಜ ಜಲಾಶಯಕ್ಕೆ ಭೂಮಿ ಕಳೆದುಕೊಂಡಿರುವ ರೈತರು ಪರಿಹಾರಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಈ ಬಗ್ಗೆ ಗಂಭೀರವಾಗಿ ಗಮನಹರಿಸಬೇಕು.

ಕೇಂದ್ರ ರ್ಕಾರ ಪಿಎಂ ಕಿಸಾನ್ ಸೋಲಾರ್ ವಿದ್ಯುತ್ ಯೋಜನೆಗೆ 60ರಷ್ಟು ಸಹಾಯಧನ ನೀಡುತ್ತದೆ.

ಇದಕ್ಕೆ ರಾಜ್ಯ ಸರ್ಕಾರ 30ರಷ್ಟು ಸಹಾಯಧನ ನೀಡಿದರೆ ರೈತರಿಗೆ ಹಗಲು ವೇಳೆ ವಿದ್ಯುತ್ ಸಿಗುವಂತಾಗಲು ಸಹಾಯವಾಗುತ್ತದೆ.

ಹಳಿಯಾಳ ಬೀದ‌ರ್ ಮತ್ತಿತರ ಜಿಲ್ಲೆಗಳಲ್ಲಿ ಕಾಡಾನೆಗಳ ಹಾವಳಿ ಕಾಡು ಪ್ರಾಣಿಗಳ ಹಾವಳಿಂದ ಬೆಳೆಗಳು ನಾಶವಾಗುತ್ತಿವೆ.

ಕಾಡಂಚಿನ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ನೋಲಾರ್ ತಂತಿ ಬೇಲಿ ಸಹಾಯಧನವನ್ನು ಕನಿಷ್ಠ 30 ಕಿಲೋಮೀಟರ್ ವ್ಯಾಪ್ತಿಗೆ ವಿಸ್ತರಿಸಬೇಕು.

ಬಗ‌ರ್ ಹುಕುಂ ಸಾಗುವಳಿ ರೈತರಿಗೆ ಸಾಗುವಳಿ ಪತ್ರ ವಿತರಿಸಿ ನೆಮ್ಮದಿಯಾಗಿ ವ್ಯವಸಾಯ ಮಾಡಲು ಅನುಕೂಲ ಕಲ್ಪಿಸಿ ಎಂದು ಒತ್ತಾಯಿಸಿದ್ದಾರೆ.

ನೆಲಮಂಗಲ ತಾಲೂಕಿನಲ್ಲಿ ಕೋಟಿ ಬೆಲೆಬಾಳುವ ಜಮೀನು ಇರುವ ರೈತರಿಗೆ ಸಹಕಾರ ಸಂಘಗಳಲ್ಲಿ ಕೇವಲ ಐವತ್ತು ಸಾವಿರ ರೂ ಮಾತ್ರ ಬೆಳೆ ಸಾಲ

ನೀಡಿ ಬೇರೆ ಯಾವುದೇ ಬ್ಯಾಂಕಿನಲ್ಲಿ ನಾಲ ಸಿಗದ ರೀತಿಯಲ್ಲಿ ರೈತರನ್ನು ಸಂಕಷ್ಟಕ್ಕೆ ತಳ್ಳುತ್ತಿದ್ದಾರೆ.

ಸರ್ಕಾರ 5 ಲಕ್ಷ ಜಾರಿಗೆ ತಂದಿದ್ದರು ಇಲ್ಲಿ ನೀಡುತ್ತಿಲ್ಲ ಬಲಾಡ್ಯರು ಮಾತ್ರ ಈ ನವಲತ್ತು ಪಡೆಯುತ್ತಿದ್ದಾರೆ.

ಕೆ ಐ ಡಿ ಬಿ ಯವರು ರೈತರ ಜಮೀನು ಭೂಸ್ವಾಧೀನ ಪಡಿಸಿಕೊಂಡಿರುವ ಭೂಮಿ ಪರಿಹಾರ ನೀಡಲು ವಿಳಂಬವಾಗುತ್ತಿದೆ ವರ್ಷಗಟ್ಟಲೆ

ಕಚೇರಿಗೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.

ಕೃಷಿ ಭೂಮಿ ಕಳೆದುಕೊಂಡ ರೈತರ ಮಕ್ಕಳನ್ನು ಸಂಬಂಧಪಟ್ಟ ಕಂಪನಿಗಳು ಕುಟುಂಬಕ್ಕೆ ಒಂದು ಕೆಲಸ ನೀಡಬೇಕೆಂಬ ನಿಯಮವನ್ನು

ಉಲ್ಲಂಘಿಸಿ ಕೆಲಸಕ್ಕೆ ತೆಗೆದುಕೊಳ್ಳದೆ ಬಿಹಾರ್ ಹಾಗೂ ಇನ್ನಿತರ ರಾಜ್ಯಗಳ ಯುವಕರಿಗೆ ಕೆಲಸ ಕೊಡುತ್ತಿದ್ದಾರೆ.

ಕೃಷಿ ಕ್ಷೇತ್ರ ದುರ್ಬಲವಾಗುತ್ತಿದೆ ರೈತರ ಮಕ್ಕಳು ವ್ಯವಸಾಯದಿಂದ ದೂರವಾಗುತ್ತಿದ್ದಾರೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎನ್ನುವ ಬೇಸರವಿದೆ,

ಅಂತರ್ಜಾತಿ ವಿವಾಹವಾಗುವ ದಂಪತಿಗಳಿಗೆ ಸರ್ಕಾರದಿಂದ 5 ಲಕ್ಷ ಧನಸಹಾಯ ಕೊಡಲಾಗುತ್ತಿದೆ ಅದೇ ರೀತಿ ರೈತರ ಮಗನ ಮದುವೆಯಾಗುವ ಹೆಣ್ಣಿಗೆ

ಸರ್ಕಾರಿ ಉದ್ಯೋಗದಲ್ಲಿ ಶೇಕಡ 10 ಮೀಸಲಾತಿ ಕೊಡುತ್ತೇವೆ ಎನ್ನುವ ನಿಯಮ ಜಾರಿಗೆ ಬಂದರೆ ಈ ಸಮಸ್ಯೆ ಪರಿಹಾರವಾಗುತ್ತದೆ ಎಂದು ಅವರು ವಿಸ್ತಾರವಾದ ವಿವರನ್ನು ಸಲ್ಲಿಸಿದ್ದಾರೆ.