ರೈತರಿಗೆ ಭರ್ಜರಿ ಗುಡ್ ನ್ಯೂಸ್, ಈಗ ರೈತರು ಮನೆಯಲ್ಲಿಯೇ ಕುಳಿತು ಸಾಲಮನ್ನಾ ಕುರಿತು ಸ್ಟೇಟಸ್ ನೋಡಿಕೊಳ್ಳಬಹದು. ಈಗಾಗಲೇ ಕೆಲವು ತಾಂತ್ರಿಕ ಕಾರಣಗಳಿಂದ ಉಳಿದುಕೊಂಡಿರುವ 57 ಸಾವಿರ ರೈತರಿಗೆ ಸಾಲಮನ್ನಾದ ಭಾಗ್ಯ ಸಿಕ್ಕಿದೆ. ಈಗ ನೀವು ನಿಮ್ಮ ಬೆಳೆ ಸಾಲಮನ್ನಾ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಇನ್ನೂ ಮುಂದೆ ಬ್ಯಾಂಕಿಗೆ ಹೋಗುವ ಅವಶ್ಯಕತೆಯಿಲ್ಲ. ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿಯೇ ಕ್ಷಣಾರ್ಧದಲ್ಲಿ ಮಾಹಿತಿ ಪಡೆಯಬಹುದು.
ಸಾಲಮನ್ನಾ ಸ್ಟೇಟಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ
ಈ ಲಿಂಕ್ https://clws.karnataka.gov.in/clws/pacs/citizenreport/ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ಆಧಾರ್ ನಂಬರ್ ಅಥವಾ ರೇಷನ್ ಕಾರ್ಡ್ ನಂಬರ್ ಎರಡರಲ್ಲಿ ಯಾವುದಾದರೂ ಒಂದನ್ನು ಸೆಲೆಕ್ಟ್ ಮಾಡಬೇಕು. ಆಧಾರ್ ನಂಬರ್ ಸೆಲೆಕ್ಟ್ ಮಾಡಿದ್ದರೆ ಬಾಕ್ಸ್ ನಲ್ಲಿ ಆಧಾರ್ ನಂಬರ್ ಟೈಪ್ ಮಾಡಿ ಒಂದು ವೇಳೆ ರೇಷನ್ ಕಾರ್ಡ್ ಸೆಲೆಕ್ಟ್ ಮಾಡಿದ್ದರೆ ರೇಷನ್ ಕಾರ್ಡ್ ನಂಬರ್ ಹಾಕಿ ನಂತರ Fetch Report ಕ್ಲಿಕ್ ಮಾಡಿದರೆ ಸಾಕು. ನಿಮ್ಮ ಜಿಲ್ಲೆ, ತಾಲೂಕು, ಬ್ಯಾಂಕಿನ ಹೆಸರು, ಬ್ರ್ಯಾಂಚ್, ಹೆಸರು, ಅಕೌಂಟ್ ನಂಬರ್, ಎಷ್ಟು ಹಣ ಸಾಲಮನ್ನಾ ಆಗಿದೆ. ಸ್ಟೇಟಸ್ ಏನಿದೆ ಎಲ್ಲಾ ಮಾಹಿತಿ ಪರದೆ ಮೇಲೆ ಕಾಣಿಸಿಕೊಳ್ಳುತ್ತದೆ.
ಕೆಲವು ರೈತರ ಸಾಲಮನ್ನಾ ಆಗಿದ್ದರೂ ಇನ್ನೂ ಬಾಕಿಯಿದೆ ಎಂಬ ಮಾಹಿತಿ ವೆಬ್ ಸೈಟ್ ನಲ್ಲಿ ಕಾಣುತ್ತಿರುವುದರಿಂದ ಬಹಳಷ್ಟು ರೈತರು ಸಾಲಮನ್ನಾ ಕುರಿತಂತೆ ಗೊಂದಲದಲ್ಲಿದ್ದಾರೆ. ನಿಮ್ಮ ಸಾಲಮನ್ನಾ ಆಗಿದ್ದರೂ ವೆಬ್ ಸೈಟ್ ನಲ್ಲಿ ಸಾಲದ ಬಾಕಿಕಾಣುತ್ತದೆ. ಹೀಗಾಗಿ ರೈತಬಾಂಧವರು ಆತಂಕ ಪಡುವ ಅವಶ್ಯಕತೆಯಿಲ್ಲ. ಆನ್ ಲೈನ್ ವೆಬ್ ಸೈಟ್ ನಲ್ಲಿ ಅಪ್ ಡೇಟ್ ಆಗಿರಲ್ಲ. ಹೀಗಾಗಿ ಸಾಲಮನ್ನಾ ಆಗಿದ್ದು ತೋರಿಸುವುದಿಲ್ಲ. ನಿಮ್ಮ ಬ್ಯಾಂಕಿನ ಶಾಖೆಗೆ ಹೋಗಿ ವಿಚಾರಿಸಿ ಸಾಲಮನ್ನಾ ಋಣುಮಕ್ತ ಪತ್ರ ಪಡೆದು ಹೊಸ ಸಾಲ ಪಡೆಯಬಹುದು.