News

2023-24ರ ಮುಂಗಾರು ಹಂಗಾಮಿನ ಬೆಳೆವಿಮೆ ಸೌಲಭ್ಯ, ಜುಲೈ 31ರೊಳಗೆ ನೋಂದಣಿಗೆ ಸೂಚನೆ

01 July, 2023 11:47 AM IST By: Kalmesh T
Crop insurance facility for monsoon season crops 2023-24, July 31 last date

Crop insurance : 2023-24ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೋಂದಣಿ ಮಾಡಿಸಿಕೊಳ್ಳುವ ಕುರಿತು ರೈತರಿಗೆ ಕೃಷಿ ಇಲಾಖೆ ಪ್ರಕಟಣೆ ನೀಡಿದೆ.

Crop insurance 2023-24 - ಧಾರವಾಡ: 2023-24 ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಸೌಲಭ್ಯ ಲಭ್ಯವಿದ್ದು, ಆಸಕ್ತ ರೈತರು ಸದುಪಯೋಗಪಡಿಸಿಕೊಳ್ಳಬೇಕು. ಬೆಳೆ ವಿಮೆಗೆ ನೋಂದಾಯಿಸಲು ಜುಲೈ-31 ಕೊನೆಯ ದಿನವಾಗಿದೆ.

ಬ್ಯಾಂಕಿನಲ್ಲಿ ಬೆಳೆಸಾಲ (Croo Loan) ಮಂಜುರಾದ ಎಲ್ಲಾ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಡಿ ಒಳಪಡಿಸಲಾಗುವುದು. ಬೆಳೆಸಾಲ ಪಡೆದ ರೈತರು ಬೆಳೆವಿಮೆ ಮಾಡಿಸಲು ಇಚ್ಛಿಸದಿದ್ದರೆ ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದ್ದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಬಿಡಲಾಗುವುದು.

PMFBY Crop Insurance : 2023-24 ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ತಾಲ್ಲೂಕಾವಾರು ಮುಖ್ಯ ಹಾಗೂ ಇತರೆ ಬೆಳೆಗಳ ವಿವರ : ಅಳ್ನಾವರ ತಾಲೂಕಿನ ಮುಖ್ಯ ಬೆಳೆ ಭತ್ತ (ಮ.ಆ), ಇತರೆ ಬೆಳೆಗಳು ತೊಗರಿ (ಮ.ಆ), ಭತ್ತ (ನೀ), ಮುಸುಕಿನಜೋಳ (ಮ.ಆ), ಸೋಯಾಅವರೆ (ಮ.ಆ), ಹತ್ತಿ (ಮ.ಆ.),

ಧಾರವಾಡ ತಾಲೂಕಿನ ಮುಖ್ಯ ಬೆಳೆ ಆಲೂಗಡ್ಡೆ (ನೀ), ಆಲೂಗಡ್ಡೆ (ಮ.ಆ), ಈರುಳ್ಳಿ (ನೀ), ಈರುಳ್ಳಿ (ಮ.ಆ), ಉದ್ದು (ಮ.ಆ), ಜೋಳ (ಮ.ಆ), ಟೊಮ್ಯಾಟೊ, ತೊಗರಿ(ಮ.ಆ), ಭತ್ತ(ನೀ), ನೆಲಗಡಲೆ(ಶೇಂಗಾ)(ನೀ), ನೆಲಗಡಲೆ(ಶೇಂಗಾ) (ಮ.ಆ), ಮುಸುಕಿನಜೋಳ(ಮ.ಆ), ಮುಸುಕಿನಜೋಳ(ನೀ), ಸಾವೆ(ಮ.ಆ), ಸೋಯಾಅವರೆ(ಮ.ಆ), ಹತ್ತಿ(ಮ.ಆ), ಹತ್ತಿ (ನೀ), ಹೆಸರು (ಮ.ಆ)

2023-24 ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಗ್ರಾಮ ಪಂಚಾಯತ ಮಟ್ಟಕ್ಕೆ ಒಳಗೊಂಡ ಬೆಳೆಗಳ ವಿವರ : ಅಳ್ನಾವರ ತಾಲೂಕು ಭತ್ತ(ಮ.ಆ), ಅಳ್ಳಾವರ (ನಗರ) , ಅರವಟಗಿ, ಕಡಬಗಟ್ಟಿ, ಬೆಣಚಿ, ಹೊನ್ನಾಪುರ.

Crop Insurance Facility for monsoon crops : ಧಾರವಾಡ ತಾಲೂಕು ಭತ್ತ (ಮ.ಆ) ಕೋಟುರ, ನರೇಂದ್ರ, ಬೇಲೂರ, ಮಾಧನಬಾವಿ, ಧಾರವಾಡ, (ನಗರ) - 1, ಧಾರವಾಡ (ನಗರ) -3, ಕಲಕೇರಿ, ಕ್ಯಾರಕೊಪ್ಪ, ಚಿಕ್ಕಮಲ್ಲಿಗವಾಡ, ದೇವರಹುಬ್ಬಳ್ಳಿ, ನಿಗದಿ, ಮಂಡಿಹಾಳ, ಮನಗುಂಡಿ, ಮನಸೂರ, ಮುಗದ, ಮುಮ್ಮಿಗಟ್ಟಿ, ಯರಿಕೊಪ್ಪ, ರಾಮಾಪುರ, ಹಳ್ಳಿಗೇರಿ, ತೇಗೂರ

2023-24 ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಅಧಿಸೂಚಿತ ಹೋಬಳಿ ಮತ್ತು ಬೆಳೆಗಳು: ಧಾರವಾಡ ತಾಲೂಕಿನ ಅಮ್ಮಿನಭಾವಿ: ಈರುಳ್ಳಿ(ನೀ), ಈರುಳ್ಳಿ (ಮ.ಆ), ಉದ್ದು(ಮ.ಆ), ಜೋಳ(ಮ.ಆ), ತೊಗರಿ(ಮ.ಆ), ಶೇಂಗಾ (ನೀ), ಶೇಂಗಾ(ಮ.ಆ), ಮುಸುಕಿನಜೋಳ(ಮ.ಆ), ಮುಸುಕಿನಜೋಳ (ನೀ),ಸೋಯಾಅವರೆ(ಮ.ಆ), ಹತ್ತಿ(ಮ.ಆ), ಹತ್ತಿ (ನೀ), ಹೆಸರು(ಮ.ಆ),

ಗರಗ: ಆಲೂಗಡ್ಡೆ (ನೀ), ಆಲೂಗಡ್ಡೆ(ಮ.ಆ), ಉದ್ದು(ಮ.ಆ), ಟೊಮ್ಯಾಟೊ, ತೊಗರಿ(ಮ.ಆ), ಶೇಂಗಾ (ಮ.ಆ), ಭತ್ತ(ನೀ), ಮುಸುಕಿನಜೋಳ(ನೀ), ಸಾವೆ(ಮ.ಆ), ಸೋಯಾಅವರೆ(ಮ.ಆ), ಹತ್ತಿ(ಮ.ಆ), ಹೆಸರು(ಮ.ಆ)

Crop insurance facility for monsoon season crops 2023-24, July 31 last date

ಧಾರವಾಡ: ಆಲೂಗಡ್ಡೆ(ಮ.ಆ), ಉದ್ದು(ಮ.ಆ), ಭತ್ತ(ನೀ), ಶೇಂಗಾ (ಮ.ಆ), ಮುಸುಕಿನಜೋಳ(ಮ.ಆ), ಮುಸುಕಿನಜೋಳ(ನೀ), ಸಾವೆ(ಮ.ಆ), ಸೋಯಾಅವರೆ(ಮ.ಆ), ಹತ್ತಿ(ಮ.ಆ), ಹೆಸರು(ಮ.ಆ), ಜೋಳ(ಮ.ಆ)

ಅಳ್ನಾವರ : ತೊಗರಿ(ಮ.ಆ), ಭತ್ತ(ನೀ), ಮುಸುಕಿನಜೋಳ(ಮ.ಆ), ಸೋಯಾಅವರೆ(ಮ.ಆ), ಹತ್ತಿ(ಮ.ಆ)

ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿನ ವಿಮಾ ಪ್ರತಿನಿಧಿಗಳನ್ನು ಎಸ್‍ಬಿಐ ಸಾಮಾನ್ಯ ವಿಮಾ ಕಂಪನಿಯ ಹುಬ್ಬಳ್ಳಿ ಜಿಲ್ಲಾ ವ್ಯವಸ್ಥಾಪಕ ಉಮೇಶ ಕಾಂತಿ, ಮೊ:9980987740 ಅಥವಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ, ರೈತ ಸಂಪರ್ಕ ಕೇಂದ್ರ ಇಲ್ಲವೇ ಬ್ಯಾಂಕ್ ಶಾಖೆಯವರನ್ನು ಸಂಪರ್ಕಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕಿ ಸುಷ್ಮಾ ಮಳಿಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.