News

ನಿಮಗೆ ಸಾಲ ಬೇಕಾ? ಕ್ರೆಡಿಟ್ ಸ್ಕೋರ್ ಚೆನ್ನಾಗಿರಲಿ

14 July, 2020 1:24 PM IST By:

ವಾಹನ, ಮನೆ ಸೇರಿದಂತೆ ವೈಯಕ್ತಿಕ ಹಾಗೂ ಇನ್ನಿತರ ಸಾಲ ಮಾಡುವ ವಿಚಾರವಿದೆಯೇ?  ಹೆಚ್ಚು ಸಂಬಳವಿದ್ದರೂ ಸಹ ಸಾಲ ಬ್ಯಾಂಕಿನವರು ಸಾಲ ಏಕೆ ಕೊಡುತ್ತಿಲ್ಲವೆಂಬ ಚಿಂತಿಯಲ್ಲಿದ್ದೀರಾ. ಇದಕ್ಕೆ ಮುಖ್ಯ ಕಾರಣ ನಿಮ್ಮ ಕ್ರೆಡಿಟ್ ಸ್ಕೋರ್,

ಸಾಲಕ್ಕೂ ಕ್ರೆಡಿಟ್ ಸ್ಕೋರಗೂ ಏನು ಸಂಬಂಧ ಅಂದುಕೊಂಡಿದ್ದಾರೆ. ಸಾಲ ಕೊಡಬೇಕೋ ಬೇಡವೋ ಎಂಬುದನ್ನು ನಿಮ್ಮ ಕ್ರೆಡಿಟ್ ಸ್ಕೋರ್ನಿ ರ್ಣಯಮಾಡುತ್ತದೆ. ಒಂದು ವೇಳೆ ಸ್ಕೋರ್‌ ಕಡಿಮೆಯಾಗಿದ್ದರೆ, ನಿಮ್ಮ ಸಾಲದ ಅರ್ಜಿ ತಿರಸ್ಕೃತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಸಿಬಿಲ್ ಸ್ಕೋರ್ ಎಂದರೇನು ಹಾಗೂ ಇದು ಹೇಗೆ ಕೆಲಸ ಮಾಡುತ್ತದೆ ಎಂಬ ವಿಚಾರಗಳು ನಿಮ್ಮ ಮನಸ್ಸಿನಲ್ಲಿ ಹೊಳೆಯುತ್ತಿದ್ದರೆ ಈ ಕೆಳಗಿನ ಮಾಹಿತಿ ಓದಿ.

ಭಾರತದ ಆರ್.ಬಿ.ಐ ಕೆಲವು ಸಂಸ್ಥೆಗಳಿಗೆ ಸಾಲಮೌಲ್ಯಾಂಕ ನೀಡುವ ಸಂಸ್ಥೆಗಳೆಂಬ ಮಾನ್ಯತೆ ನೀಡಿದೆ.ಅದರಲ್ಲಿ ಸಿಬಿಲ್ (ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ ಇಂಡಿಯಾ ಲಿಮಿಟೆಡ್) ಮುಖ್ಯವಾಗಿದೆ. ಇದು ನೀಡುವ ಅಂಕಗಳ ವ್ಯಾಪ್ತಿ 300 ರಿಂದ 900ರವರೆಗೆ ಇರುತ್ತದೆ..

ಸಿಬಿಲ್ ಸ್ಕೋರ್ ಎಂದರೇನು?

ಸಿಬಿಲ್ ಸ್ಕೋರ್ ಎನ್ನುವುದು ನಿಮ್ಮ ಕ್ರೆಡಿಟ್ ಅರ್ಹತೆಯನ್ನು ಪ್ರತಿನಿಧಿಸುವ ಮೂರು-ಅಂಕಿಯ ಸಂಖ್ಯೆಯಾಗಿದೆ. ಇದು 300 ರಿಂದ 900 ರವರೆಗೆ ಇರುತ್ತದೆ ಮತ್ತು ನಿಮ್ಮ ಪಾವತಿ ಇತಿಹಾಸವನ್ನು ಅಳೆಯುವ ಮೂಲಕ ಮತ್ತು ಸಿಬಿಲ್ ನಿರ್ವಹಿಸುವ ಇತರ ಕ್ರೆಡಿಟ್ ವಿವರಗಳನ್ನು ಪಡೆಯಲಾಗಿದೆ. ಸಾಮಾನ್ಯವಾಗಿ, 700 ಕ್ಕಿಂತ ಹೆಚ್ಚಿನ ಸ್ಕೋರ್ ಅನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ.. ನೀವು ಸಾಲಗಾರರಾಗಿ ಎಷ್ಟು ಜವಾಬ್ದಾರಿಯುತ ಮತ್ತು ಶಿಸ್ತುಬದ್ಧರಾಗಿದ್ದೀರಿ ಎಂಬುದನ್ನು  ಸಿಬಿಲ್ ಸ್ಕೋರ್ ತಿಳಿಸುತ್ತದೆ. 500ರಿಂದ 650 ಇದ್ದರೂ, ಸಾಲ ಮರು ಪಾವತಿಸುವ ವಿಚಾರದಲ್ಲಿ ದುರ್ಬಲರು ಎಂದೇ ಅರ್ಥ. 650ರಿಂದ 750 ಇದ್ದರೆ ತಕ್ಕಮಟ್ಟಿಗೆ ರಿಪೇಮೆಂಟ್ ಮಾಡುತ್ತಿದ್ದಾರೆ ಎಂದು ಬ್ಯಾಂಕ್‌ಗಳು ಭಾವಿಸುತ್ತವೆ. 750ರಿಂದ 850 ಇದ್ದರೆ ಬ್ಯಾಂಕ್‌ಗಳಿಗೆ ರಿಸ್ಕ್ ಕಡಿಮೆಯಾಗಿರುತ್ತದೆ. 850ಕ್ಕಿಂತ ಹೆಚ್ಚಿದ್ದರೆ ಅತ್ಯಂತ ಸುರಕ್ಷಿತ.

ಸಿಬಿಲ್ ಸ್ಕೋರ್ ಅನ್ನು ಹೇಗೆ ಪರಿಶೀಲಿಸುವುದು? ನಿಮ್ಮ ಸಿಬಿಲ್ ವರದಿಯನ್ನು ಪಡೆಯಲು ಕೆಲವು ಸರಳ ಹಂತಗಳನ್ನು ಕೆಳಗೆ ನೀಡಲಾಗಿದೆ:

ಸ್ಕೋರ್ ಹೆಚ್ಚಿಸುವುದು ಹೇಗೆ?

ಹೆಚ್ಚೆಚ್ಚು ವೈಯಕ್ತಿಕ ಸಾಲ ಪಡೆಯಬಾರದು. ಹಲವಾರು ಸಾಲಗಳು ಇದ್ದಾಗ, ಸಾಲ ಪಡೆಯುವ ಅರ್ಹತೆ ಕಡಿಮೆಯಾಗುತ್ತದೆ. ಕ್ರೆಡಿಟ್‌ಕಾರ್ಡ್ ಬಿಲ್‌ಗಳನ್ನು ಪೂರ್ತಿಯಾಗಿ ಸಲ್ಲಿಸಿ. ಕನಿಷ್ಠ ಮೊತ್ತವನ್ನು ಮಾತ್ರ ಪಾವತಿಸುವುದರಿಂದ ಪ್ರಯೋಜನವಿಲ್ಲ. ಯಾಕೆಂದರೆ ಉಳಿದ ಮೊತ್ತ ಒಟ್ಟಾರೆ ಬಾಕಿ ಎಂದು ಪರಿಗಣನೆಯಾಗುತ್ತದೆ. ಹಾಲಿ ಇರುವ ಸಾಲದ ಮಾಸಿಕ ಕಂತುಗಳನ್ನು (ಇಎಂಐ) ಸಕಾಲಕ್ಕೆ ಪಾವತಿಸಿ. ಸಾಲದ ಮರುಪಾವತಿಯಲ್ಲಿ ಡಿಫಾಲ್ಟ್ (ಸುಸ್ತಿ) ಆಗಿದ್ದರೆ, ಸಿಬಿಲ್ ಸ್ಕೋರ್‌ನಲ್ಲಿ ಬಹುಕಾಲ ಅದರ ಪರಿಣಾಮ ತಟ್ಟುತ್ತದೆ. ಯಾವುದೇ ಚೆಕ್ ಬೌನ್ಸ್ ಆಗದಂತೆ ನೋಡಿಕೊಳ್ಳಿ. ಒಂದೇ ಒಂದು ಚೆಕ್ ಬೌನ್ಸ್ ಆದರೂ ಸಿಬಿಲ್ ಸ್ಕೋರ್ ಕಡಿಮೆಯಾಗುತ್ತದೆ.