News

ಕೊರೋನಾದಿಂದ ಬಿತ್ತನೆ (seeds) ಬೀಜ, ಯೂರಿಯಾ ಗೊಬ್ಬರ(fertilizer) ಪೂರೈಕೆಗೆ ತೊಂದರೆಯಾಗಲ್ಲ : ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟನೆ

25 July, 2020 2:26 PM IST By:

ಕೊರೋನಾ ಸಂಕಷ್ಟದ ನಡುವೆಯೂ ರೈತರಿಗೆ ಬಿತ್ತನೆ (transplantation seeds) ಬೀಜ ಹಾಗೂ ಯೂರಿಯಾ ಗೊಬ್ಬರ (fertilizer) ಪೂರೈಕೆಗೆ ಕೊರತೆಯಾಗದಂತೆ ಸೂಕ್ತ ಕ್ರಮ ವಹಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೆಲ ಜಿಲ್ಲೆಗಳಲ್ಲಿ ಆಗಸ್ಟ್ ತಿಂಗಳವರೆಗೂ ಬಿತ್ತನೆ ಕಾರ್ಯ ಮುಂದುವರೆಯುವುದರಿಂದ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಕಳೆದ ಬಾರಿಗಿಂತ ಹೆಚ್ಚುವರಿಯಾಗಿ ಯೂರಿಯಾ ಗೊಬ್ಬರ ಹಾಗೂ ಬಿತ್ತನೆ ಬೀಜ  ಈ ವರ್ಷ ವಿತರಿಸಲಾಗಿದೆ ಎಂದರು.

ಗೊಬ್ಬರ ಪೂರೈಕೆ (Fertilizer supply):

 2020-21 ನೇ ಸಾಲಿನ ಮುಂಗಾರು ಹಂಗಾಮಿನ 2020 ಏಪ್ರಿಲ್ 1 ರಿಂದ ಜುಲೈ ಅಂತ್ಯದವರೆಗೆ ಒಟ್ಟು 13.99 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರಕ್ಕೆ ಬೇಡಿಕೆ ಇದ್ದು ಇದರಲ್ಲಿ ಯೂರಿಯಾ 4.98 ಲಕ್ಷ ಡಿಎಪಿ 3.06 ಲಕ್ಷ ಮೆಟ್ರಿಕ್ ಟನ್ ಎಂಒಪಿ 1.37 ಲಕ್ಷ ಮೆಟ್ರಿಕ್ ಟನ್ ಮತ್ತು ಕಾಂಪ್ಲೆಕ್ಸ್ 4.58 ಲಕ್ಷ ಮೆಟ್ರಿಕ್ ಟನ್ ಗೆ ಬೇಡಿಕೆಯಿದೆ. ಈ ಪೈಕಿ ಜುಲೈ 23 ರವರೆಗೆ ಒಟ್ಟು 13.50 ಲಕ್ಷ ಮೆಟ್ರಿಕ್ ಟನ್ ಅಂದರೆ 5.36 ಮೆಟ್ರಿಕ್ ಟನ್ ಯೂರಿಯಾ ಡಿ ಎ ಪಿ- 2.49 ಲಕ್ಷ ಮೆ.ಟನ್ , ಎಂಒಪಿ . 1.03 ಲಕ್ಷ ಮೆ.ಟನ್ ಮತ್ತು ಕಾಂಪ್ಲೆಕ್ಸ್ , 4.62 ಲಕ್ಷ ಮೆ.ಟನ್  ಸರಬರಾಜಾಗಿರುತ್ತದೆ .ಕಳೆದ ಬಾರಿಗೆ ಹೋಲಿಸಿದರೆ ಶೇ.5.4 ರಷ್ಟು  13.50 ಲಕ್ಷ ಮೆಟನ್ ವಿವಿಧ ರಸಗೊಬ್ಬರಗಳು ಸರಬರಾಜಾಗಿವೆ. ವಿಶೇಷವಾಗಿ 30.8%ರಷ್ಟು ಯೂರಿಯಾ ರಸಗೊಬ್ಬರ ಹೆಚ್ಚುವರಿ ಸರಬರಾಜಾಗಿದೆ ಎಂದರು.

ಬಿತ್ತನೆ ಬೀಜ ಸರಬರಾಜು (supply seeds):

ಮುಂಗಾರು ಚಟುವಟಿಕೆಗಳಿಗೆ ಅಗತ್ಯವಾದ ಬಿತ್ತನೆ ಬೀಜವನ್ನು ಸಹ ಅಗತ್ಯಕ್ಕೆ ತಕ್ಕಂತೆ ಪೂರೈಸಲಾಗುತ್ತಿದೆ. 2020-21 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 5.97 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಗಳ ಬೇಡಿಕೆ ಇದ್ದು, ರಾಜ್ಯಾದ್ಯಂತ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳ ಮೂಲಕ ಇದುವರೆಗೂ 3,29,862.8 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ರೈತರಿಗೆ ನೀಡಲಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಇನ್ನು 52,110 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನಿದೆ. ರಾಜ್ಯದಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಅಗತ್ಯವಾಗಿರುವ ಬಿತ್ತನೆ ಬೀಜ ಹಾಗೂ ಯೂರಿಯಾ ರಸಗೊಬ್ಬರಕ್ಕೆ ಯಾವುದೇ ಕೊರತೆಯಾಗಿಲ್ಲ. ರೈತರ ಬೇಡಿಕೆಗಳನ್ನು ಪೂರೈಸಲು ಇಲಾಖೆ ಬದ್ಧವಾಗಿದೆ ಎಂದು ಸಚಿವರು ಹೇಳಿದ್ದಾರೆ.