News

ಕೊರೋನಾ ಸೋಂಕು ತಡೆಗೆ ಲಾಕ್ಡೌನ್ ಕೊನೆಯ ಅಸ್ತ್ರವಾಗಲಿ- ಪ್ರಧಾನಿ ನರೇಂದ್ರ ಮೋದಿ

21 April, 2021 2:43 PM IST By:
PM Narendra Modi

ಕೊರೋನಾ ವೈರಸ್ ನ 2ನೇ ಅಲೆಯು ಭಾರಿ ಆತಂಕ ಸೃಷ್ಟಿಸಿರುವ ನಡುವೆಯೋ  ಪ್ರಧಾನಿ ನರೇಂದ್ರ ಮೋದಿಯವರು ಕೊರೋನಾದ 2ನೇ ಅಲೆ ಬಿರುಗಾಳಿಯಂತೆ ಅಪ್ಪಳಿಸಿದೆ. ಸರ್ಕಾರದ ಮಾರ್ಗಸೂಚಿ ಪಾಲಿಸುವುದರ ಮೂಲಕ ಈ ಅಲೆಯನ್ನು ಎದುರಿಸಿ ಲಾಕ್ಡೌನ್ ನಿಂದ ದೇಶವನ್ನು ರಕ್ಷಿಸಬೇಕಾಗಿದೆ.  ಯಾವುದೇ ಕಾರಣಕ್ಕೂ ಲಾಕ್ ಡೌನ್ ಜಾರಿ ಮಾಡುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣ ‌ಮಾಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಅವರು ರಾಜ್ಯ ಸರ್ಕಾರಗಳಿಗೆ ಲಾಕ್ ಡೌನ್ ಅಂತಿಮ ಅಸ್ತ್ರವಾಗಿರಲಿ. ಹೀಗಾಗಿ ದೇಶವನ್ನು ಲಾಕ್ ಡೌನ್ ಮಾಡಲು ಅವಕಾಶ ಮಾಡಿಕೊಡದಿರಿ. ದೇಶವನ್ನು ಲಾಕ್ ಡೌನ್ ನಿಂದ ಬಚಾವು ಮಾಡಿ. ರಾಜ್ಯ ಸರ್ಕಾರಗಳು ಲಾಕ್ ಡೌನ್ ಅನ್ನು ಕೊನೆಯ ಅಸ್ತ್ರವಾಗಿ ಬಳಸಬೇಕು.‌ಸೂಕ್ಷ್ಮ ಕಂಟೇನ್ಮೇಂಟ್ ವಲಯಗಳಲ್ಲಿ ಹೆಚ್ಚು ಆದ್ಯತೆ ನೀಡಬೇಕು. ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕೆಂದುರಾಜ್ಯ ಸರ್ಕಾರಗಳಿಗೆ  ಮನವಿ ಮಾಡಿದ ಅವರು, ದೇಶದ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಮಾಡುವ ಕಠಿಣ ನಿರ್ಧಾರಕ್ಕೆ ದೇಶದ ಜನರು ಅವಕಾಶ ಮಾಡಿಕೊಡಬಾರದು ಎಂದು ಹೇಳಿದ್ದಾರೆ

ದೇಶದಲ್ಲಿ ಎರಡನೇ ಹಂತದ ಕೋರೋನೋ ಅಲೆ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಅನಗತ್ಯವಾಗಿ ಮನೆಯಿಂದ ಹೊರ ಬರಬೇಡಿ ಸುರಕ್ಷತೆಯ ಕಡೆಗೆ ಹೆಚ್ಚು ಒತ್ತು ನೀಡಬೇಕು.ದೇಶದಲ್ಲಿ ಆಮ್ಲಜನಕ ಕೊರತೆ ಇದ್ದು ಅದನ್ನು ಪೂರೈಕೆ ಮಾಡುವ ಕಡೆಗೆ ಹೆಚ್ಚಿನ ಗಮನವನ್ನು ಕೇಂದ್ರ ಸರ್ಕಾರ ವಹಿಸಿದೆ. ಲಸಿಕೆ ಉತ್ಪಾದನೆಯ ಪ್ರಮಾಣವನ್ನು ಕೂಡ ಹೆಚ್ಚಳ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಕೋವಿಡ್ ಸಂಕಷ್ಟದ ಸಮಯದಲ್ಲಿ ಸೋಂಕು ವಿರುದ್ಧ ಹೋರಾಟ ಮಾಡುತ್ತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು. ವೈದ್ಯರು, ದಾದಿಯರು, ಮುಂಚೂಣಿ ಆರೋಗ್ಯ ಪಡೆಯ ಸಿಬ್ಬಂದಿ ಜೀವದ ಹಂಗು ತೊರೆದು ಹೋರಾಡುತ್ತಿದ್ದಾರೆ. ಅವರ ಸೇವೆ ಸ್ಮರಣೀಯವಾಗಿದೆ.

ದೇಶದಲ್ಲಿ ಕೊರೋನಾ ಸೋಂಕು ಕುರಿತು ಜನರಲ್ಲಿ ಮತ್ತಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ ಹೀಗಾಗಿ ಮಾಧ್ಯಮಗಳು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಅವರು ಹೇಳಿದ್ದಾರೆ

ದೇಶದಲ್ಲಿ ಕಡಿಮೆ ಸಮಯದಲ್ಲಿ ಲಸಿಕೆಯನ್ನು ಉತ್ಪಾದನೆ ಮಾಡಿ ಜನರಿಗೆ ನೀಡುವ ಕೆಲಸ ಮಾಡಲಾಗುತ್ತದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಲಸಿಕೆ ನೀಡಿಕೆ ಹೆಚ್ಚಳ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ವಲಸೆ ಕಾರ್ಮಿಕರು ಯಾವುದೇ ಕಾರಣಕ್ಕೂ ಗುಳೆ ಹೋಗಬೇಡಿ ತಾವು ಇರುವ ಕಡೆ ಸುರಕ್ಷತೆಯೊಂದಿಗೆ ಕೆಲಸ ಮಾಡಬೇಕು. ದೇಶದಲ್ಲಿ ಲಸಿಕೆ ಹಾಕುವ ಕಾರ್ಯವನ್ನು ಹೆಚ್ಚಳ ಮಾಡಲಾಗುತ್ತದೆ ಸುರಕ್ಷತೆಗೆ ಆದ್ಯತೆ ನೀಡಿ ಎಂದು ಕೂಡ ಅವರು ಮಾಡಿದ್ದಾರೆ.