ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಮತ್ತೆ ಏರಿಕೆಯಾಗಿವೆ. ಶುಕ್ರವಾರ 41,779 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಕಳೆದ ಮೂರು ದಿನಗಳಿಂದ ಇಳಿಕೆ ಹಾದಿಯಲ್ಲಿದ್ದ ಹೊಸ ಸೋಂಕಿತರ ಸಂಖ್ಯೆ ಮತ್ತೆ ಏರಿಕೆ ಹಾದಿಗೆ ಮರಳಿದೆ. ಇದರೊಂದಿಗೆ ರಾಜ್ಯದಲ್ಲಿ ಇಲ್ಲಿಯವರೆಗೆ ದೃಢಪಟ್ಟ ಪ್ರಕರಣಗಳ ಸಂಖ್ಯೆ 21,30,267ಕ್ಕೆ ತಲುಪಿದೆ.
ಶುಕ್ರವಾರ ಒಂದೇ ದಿನ 41,779 ಜನರಿಗೆ ಸೋಂಕು ತಗುಲಿದ್ದು 373 ಮಂದಿ ಸಾವನ್ನಪ್ಪಿದ್ದಾರೆ. ಕೋವಿಡ್‍ನಿಂದ ಮೃತಪಟ್ಟವರ ಸಂಖ್ಯೆ 21,085ಕ್ಕೆ ಏರಿಕೆಯಾಗಿದೆ. ಶುಕ್ರವಾರ ಆಸ್ಪತ್ರೆಯಿಂದ 35,879 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇದುವರೆಗೆ 1510557 ಗುಣಮುಖರಾಗಿದ್ದಾರೆ.ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 598605 ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ಒದಗಿಸಿದೆ
ಸೋಂಕಿನ ಖಚಿತ ಪ್ರಮಾಣ ಶೇ.32.86 ಮತ್ತು ಮರಣ ಪ್ರಮಾಣ ಶೇ.0.89ರಷ್ಟಿದೆ. ಇಂದು 1,27,105 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು ಒಟ್ಟು 56,350 ಮಂದಿಗೆ ಲಸಿಕೆ ನೀಡಲಾಗಿದ್ದು, ಇಲ್ಲಿಯವರೆಗೆ ಒಟ್ಟು 1,10,51,982 ಡೋಸ್‍ಗಳನ್ನು ವಿತರಣೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಇಂದು 14,316 ಹೊಸ ಪ್ರಕರಣಗಳು ವರದಿಯಾಗಿದ್ದು, 121 ಸೋಂಕಿತರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ ನಗರದಲ್ಲಿ 9246ಕ್ಕೆ ಹೆಚ್ಚಳವಾಗಿದೆ.
ಇಂದು 12898 ಮಂದಿ ಬಿಡುಗಡೆ ಹೊಂದಿದ್ದಾರೆ. ಇದರೊಂದಿಗೆ 6592203 ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 3,60,862 ಸಕ್ರಿಯ ಪ್ರಕರಣಗಳಿವೆ.
ಜಿಲ್ಲೆಗಳಲ್ಲಿ ಇಂದು ದಾಖಲಾಗಿರುವ ಪ್ರಕರಣಗಳು: ಬಾಗಲಕೋಟೆ 773, ಬಳ್ಳಾರಿ 2,421, ಬೆಳಗಾವಿ 1,592, ಬೆಂಗಳೂರು ಗ್ರಾಮಾಂತರ 707, ಬೆಂಗಳೂರು ನಗರ 14,316, ಬೀದರ್ 223, ಚಾಮರಾಜನಗರ 713, ಚಿಕ್ಕಬಳ್ಳಾಪುರ 676, ಚಿಕ್ಕಮಗಳೂರು 435, ಚಿತ್ರದುರ್ಗ 314, ದಕ್ಷಿಣ ಕನ್ನಡ 1,215, ದಾವಣಗೆರೆ 581, ಧಾರವಾಡ 829, ಗದಗ 591, ಹಾಸನ 1,339, ಹಾವೇರಿ 292, ಕಲಬುರಗಿ 929, ಕೊಡಗು 539, ಕೋಲಾರ 306, ಕೊಪ್ಪಳ 495, ಮಂಡ್ಯ 1,385, ಮೈಸೂರು 2,340, ರಾಯಚೂರು 1,063, ರಾಮನಗರ 459, ಶಿವಮೊಗ್ಗ 1,045, ತುಮಕೂರು 2,668, ಉಡುಪಿ 1,219, ಉತ್ತರ ಕನ್ನಡ 787, ವಿಜಯಪುರ 444 ಮತ್ತು ಯಾದಗಿರಿಯಲ್ಲಿ 683 ಹೊಸ ಕೊರೊನಾ ಪ್ರಕರಣಗಳಿವೆ.
ಬೆಂಗಳೂರು ಹೊರತುಪಡಿಸಿ 10 ಜಿಲ್ಲೆಗಳಲ್ಲಿ ಸಾವಿರಕ್ಕಿಂತ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. ಜತೆಗೆ 500ಕ್ಕಿಂತ ಕಡಿಮೆ ಪ್ರಕರಣಗಳು ದೃಢಪಟ್ಟ ಜಿಲ್ಲೆಗಳ ಸಂಖ್ಯೆ 7ಕ್ಕೆ ಇಳಿದಿದೆ. ತುಮಕೂರು ಮತ್ತು ಬಳ್ಳಾರಿಯಲ್ಲಿ ನಿರಂತರವಾಗಿ ಹೆಚ್ಚಿನ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿರುವುದು, ಸೋಂಕು ನಿಯಂತ್ರಣದಲ್ಲಿ ವಿಫಲವಾಗಿರುವುದನ್ನು ಹೇಳುತ್ತಿದೆ.