News

Covid 4ನೇ ಅಲೆ: ಸರ್ಕಾರದಿಂದ ಅಧಿಕೃತ ಮಾರ್ಗಸೂಚಿ ರಿಲೀಸ್‌..ಉಗುಳಿದರೆ ಬೀಳುತ್ತೆ ದಂಡ

26 April, 2022 11:29 AM IST By: Maltesh
ಸಾಂದರ್ಭಿಕ ಚಿತ್ರ

ಕೋವಿಡ್‌ ನಾಲ್ಕನೇ ಅಲೆ ಬರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್‌ ಧರಿಸುವುದೂ ಸೇರಿ ಕೆಲವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಸರ್ಕಾರ  ಹೊಸ ಆದೇಶ ಹೊರಡಿಸಿದೆ.

ಹೌದು ಮಾರಕ ಕೊರೊನಾ ಮತ್ತೆ ತನ್ನ ಹಾವಳಿಯನ್ನು ಶುರು ಮಾಡುವ ಮುನ್ಸೂಚನೆ ನೀಡುತ್ತಿದೆ. 3 ಅಲೆಯ ಬಳಿಕೆ ಮತ್ತೆ ಹೆಮ್ಮಾರಿ ನಾಲ್ಕನೇ ಅಲೆಯ ಮೂಲಕ ಭಿತಿ ಸೃಷ್ಟಿಸಿಲು ನಿಂತಿದೆ. ಸದ್ಯ ಕೊರೊನಾ 4ನೇ ಅಲೆ ಬರುವ ಸಾಧ‍್ಯತೆ ಇರುವುದರಿಂದ ರಾಜ್ಯ ಸರ್ಕಾರ ಹೊಸ ಕೋವಿಡ್ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ಈ ರಾಜ್ಯದಲ್ಲಿ 4.3 ಲಕ್ಷ ಮೆಟ್ರಿಕ್ ಟನ್ ಗೋಧಿ ಖರೀದಿಸಿದ ಸರ್ಕಾರಿ ಸಂಸ್ಥೆಗಳು..!

“ಸಾವಯವ ಆಹಾರ ರಫ್ತು ಭಾರತದ ಆರ್ಥಿಕತೆ ಬದಲಾಯಿಸಬಹುದು”- ಅಮಿತ್ ಶಾ

ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯಲ್ಲಿ ಈ ಕುರಿತು ತೀರ್ಮಾನಕ್ಕೆ ಬರಲಾಗಿದೆ.  ಇದರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ, ಸಂಚಾರದ ವೇಳೆ ಉಗುಳುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಒಂದು ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸಂಚರಿಸುವ ವೇಳೆ ಉಗುಳಿದರೆ ದಂಡ ವಿಧಿಸಲು ಸ್ಥಳೀಯ ಆಡಳಿತಕ್ಕೆ ಅಧಿಕಾರ ನೀಡಿ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಆದೇಶ ಹೊರಡಿಸಿದ್ದಾರೆ.

ಗುಡ್‌ನ್ಯೂಸ್‌: ದೇಶಾದ್ಯಂತ ಬಲವರ್ಧಿತ ಅಕ್ಕಿ ವಿತರಣೆಗೆ ಸಂಪುಟ ಅಸ್ತು..!

EPFO ಹೊಸ ಮಾರ್ಗಸೂಚಿ ರಿಲೀಸ್.. ಇಲ್ಲಿದೆ ಟ್ಯಾಕ್ಸ್ ಲೆಕ್ಕಾಚಾರ

ಕರ್ನಾಟಕದಲ್ಲಿಯೂ ಪ್ರತಿದಿನ ಕೊರೊನಾ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿದೆ. ಸದ್ಯ 4ನೇ ಅಲೆ ಭೀತಿ ಇರುವುದರಿಂದ ಸಾರ್ವಜನಿಕರು ಈ ಆದೇಶದಲ್ಲಿ ತಿಳಿಸಲಾದ ಮಾರ್ಗಸೂಚಿಗಳನ್ನು ಚಾಚಯ ತಪ್ಪದೆ ಪಾಲಿಸಲು ತಿಳಿಸಲಾಗಿದೆ.ಕೊರೊನಾ 4ನೇ ಅಲೆಯ ಭೀತಿ ಇರುವುದರಿಂದ ಸೂಕ್ತ ಮುಂಜಾಗೃತೆ ಅತ್ಯವಶ್ಯಕವೆಂದು ಜನರಿಗೆ ಸಲಹೆ ನೀಡಲಾಗಿದೆ. ವಿದೇಶಗಳಿಂದ ರಾಜ್ಯಕ್ಕೆ ಮತ್ತು ದೇಶಕ್ಕೆ ಬರುವವರ ಮೇಲೆ ವಿಶೇಷ ನಿಗಾ ಇಡಲಾಗುತ್ತಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆ ಜನರು ಎಚ್ಚರಿಕೆ ವಹಿಸಬೇಕೆಂದು ತಿಳಿಸಲಾಗಿದೆ.

ಕೊರೊನಾ ತಡೆಯುವ ನಿಟ್ಟಿನಲ್ಲಿ ರಾಜ್ಯ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸಿನಂತೆ ರಾಜ್ಯದಲ್ಲಿಯೂ ಮಾಸ್ಕ್ ಧರಿಸುವುದ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸರ್ಕಾರದ ಹೊಸ ಆದೇಶದಲ್ಲಿ ತಿಳಿಸಲಾಗಿದೆ. ಕೊರೊನಾ 4ನೇ ಅಲೆಯ ಭೀತಿ ಹಿನ್ನೆಲೆ ಇತ್ತ ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಈಗಾಗಲೇ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.

LPG ಸಿಲಿಂಡರ್‌ಗೆ ಹೆಚ್ಚಿನ ಬೆಲೆ ಕೇಳ್ತಿದ್ದಾರಾ..? ಹಾಗಾದ್ರೇ ಇಲ್ಲಿ ಕಂಪ್ಲೇಟ್‌ ಮಾಡಿ ಸಾಕು

ರಷ್ಯಾದಿಂದ ಅಪಾರ ಬೇಡಿಕೆಯಿದ್ದರೂ 200 ರೂ. ಕುಸಿತ ಕಂಡ ಗೋಧಿ..ಕಾರಣವೇನು..?