News

ಮೀನುಗಾರಿಕೆಗೆ 20,000 ಕೋಟಿ : ಮತ್ಸ್ಯಸಂಪದ ಯೋಜನೆ ಘೋಷಿಸಿದ ಕೇಂದ್ರ ಸರಕಾರ

20 May, 2020 9:09 PM IST By:
ಲಾಕ್ ಡೌನ್ ನಲ್ಲಿ ಸಿಲುಕಿರುವ ಮೀನುಗಾರರಿಗೆ ಕೇಂದ್ರ ಸರಕಾರ ಬಂಪರ್ ಆಫರ್ ನೀಡಿದೆ. ಕೇಂದ್ರ ಸರಕಾರ ಘೋಷಿಸಿರುವ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ ಪ್ಯಾಕೇಜ್ ಘೋಷಿಸಿದ್ದು, ಬರೋಬ್ಬರಿ 20 ಸಾವಿರ ಕೋಟಿ ರೂಪಾಯಿಗಳನ್ನು ಮೀನುಗಾರಿಕೆಗೆ ಮೀಸಲಿಟ್ಟಿದೆ.  ಮೀನುಗಾರರಿಗೆ ಹೊಸ ಬೋಟ್, ಉಪಕರಣ ಖರೀದಿಗೆ ಹಣದ ಸಹಾಯ ಮಾಡಲಿದೆ ಎಂದು  ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಮೀನುಗಾರಿಕಾ ರಫ್ತನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಲಾಗಿದೆ. ಪ್ರತೀ ವರ್ಷ 1 ಲಕ್ಷ ಕೋಟಿ ಮೌಲ್ಯದ ಮೀನನ್ನು ರಫ್ತು ಮಾಡಲು ಕೇಂದ್ರ ಸರಕಾರ ಮುಂದಾಗಿದೆ. 5 ವರ್ಷಗಳಲ್ಲಿ 70 ಲಕ್ಷ ಟನ್ ಮೀನಿನ ಮರಿಗಳ ಉತ್ಪಾದನೆಯ ಗುರಿಯನ್ನು ಹೊಂದಲಾಗಿದೆ.
ಮೀನುಗಾರಿಕೆ ಉದ್ಯಮದಲ್ಲಿ 55 ಲಕ್ಷ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದೆ. ದೇಶದಾದ್ಯಂತ 9 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಮೀನುಗಾರಿಕಾ ಬಂದರು, ಕೋಲ್ಡ್ ಸ್ಟೋರೇಜ್ ಹಾಗೂ ಮಾರುಕಟ್ಟೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಅಲ್ಲದೇ ಮೀನುಗಾರರಿಗೆ ಇದ್ದ ಆಮದು ಅವಧಿಯನ್ನು 3 ತಿಂಗಳು ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಜಾನುವಾರುಗಳ ರಕ್ಷಣೆಗೆ ಮುಂದಾದ ಕೇಂದ್ರ ಸರ್ಕಾರ ರೋಗ ತಡೆಗೆ ಮುಂದಾಗಿದೆ. ಇದ್ರಡಿ ಪಶುಗಳಿಗೆ ರೋಗ ನಿರೋಧಕ ಲಸಿಕೆ ನೀಡಲು ಮುಂದಾಗಿದೆ. ಇದಕ್ಕೆ 13,343 ಕೋಟಿ ರೂಪಾಯಿ ಖರ್ಚಾಗಲಿದೆ. ಈಗಾಗಲೇ 1.5 ಕೋಟಿ ಪಶುಗಳಿಗೆ ಲಸಿಕೆ ಹಾಕಲಾಗಿದೆ. ಡೈರಿ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಲು 15 ಸಾವಿರ ಕೋಟಿ ರೂ. ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದ್ರಿಂದ ಡೈರಿ ಉತ್ಪನ್ನಗಳ ರಫ್ತಿಗೂ ಸಹಾಯವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಗುಣಮಟ್ಟದ ಮಿಲ್ಕ್ ಪೌಡರ್, ಚೀಸ್ ಉತ್ಪನ್ನಗಳಿಗೆ ಒತ್ತ ನೀಡಲಾಗಿದೆ. ಔಷಧಿ ಸಸ್ಯಗಳ ಕೃಷಿಗೆ 4 ಸಾವಿರ ಕೋಟಿ ರೂಪಾಯಿಯನ್ನು ಸರ್ಕಾರ ನೀಡ್ತಿದೆ. 10 ಲಕ್ಷ ಹೆಕ್ಟೇರ್ ನಲ್ಲಿ ಬೆಳೆ ಬೆಳೆಯಲಾಗುವುದು. ಗಂಗಾ ನದಿ ಆಸುಪಾಸು ಔಷಧಿ ಸಸ್ಯಗಳ ಕೃಷಿಗೆ ಉತ್ತೇಜನ ನೀಡಲಾಗುವುದು ಎಂದು ಹೇಳಿದ್ದಾರೆ.