News

ಮುಂಬೈ ಪೊಲೀಸರಿಗೂ ಕೊರೋನಾ ಸೋಂಕು

28 April, 2020 6:42 PM IST By:

ಕೊರೋನಾ ಸೋಂಕು ತಡೆಯಲು  ಪೊಲೀಸರು, ಆರೋಗ್ಯ ಇಲಾಖೆ, ವೈದ್ಯರು, ನರ್ಸ್, ಆಶಾ ಕಾರ್ಯಕರ್ತೆಯರು ಸೇರಿದಂತೆ ಇತರ ಇಲಾಖೆಗಳು ಶ್ರಮಿಸುತ್ತಿವೆ. ವೈದ್ಯರಿಗೆ, ನರ್ಸ್ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ತಗುಲಿತ್ತು.ಈಗ ಪೊಲೀಸರಿಗೂ ಕೊರೋನಾ ಸೋಂಕು ತಗುಲುತ್ತಿದ್ದರಿಂದ ಮಹಾರಾಷ್ಟ್ರ ಸರ್ಕಾರವು ವಿಶೇಷ ಕಾಳಜಿ ವಹಿಸಿದೆ.

ಮಹಾರಾಷ್ಟ್ರ ರಾಜಧಾನಿ ಮುಂಬೈಯಲ್ಲಿ ವ್ಯಾಪಕವಾಗಿ ಕೊರೋನಾ ಸೋಂಕು ಹರಡುತ್ತಿದ್ದು, ಸೋಮವಾರ ಮೂವರು ಪೊಲೀಸರಲ್ಲಿ ಸೋಂಕು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೊರೋನಾ ವೈರಸ್ ಸೋಂಕಿನಿಂದ ರಕ್ಷಣೆ ಒದಗಿಸಲು 55 ವರ್ಷಕ್ಕೆ ಮೇಲ್ಪಟ್ಟ ಪೊಲೀಸರಿಗೆ ರಜೆಯ ಮೇಲೆ ತೆರಳಲು ಸೂಚಿಸಿದೆ.

ಸೋಮವಾರ ಮೂವರು ಮುಂಬೈ ಪೊಲೀಸರಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದೆ. ಅವರೆಲ್ಲರಿಗೂ 50 ವರ್ಷ ದಾಟಿದೆ. ಈ ಹಿನ್ನೆಲೆಯಲ್ಲಿ 55 ವರ್ಷ ದಾಟಿದ ಪೊಲೀಸರು ಮತ್ತು ಅಧಿಕಾರಿಗಳನ್ನು ರಕ್ಷಿಸುವುದಕೋಸ್ಕರ ಅವರಿಗೆ ರಜೆಯ ಮೇಲೆ ತೆರಳುವಂತೆ ಸೂಚಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

50 ವರ್ಷದ ನಂತರ ಸಹಜವಾಗಿ ಕೆಲವು ಸಹ ವಯೋಸಹಜ ಕಾಯಿಲೆಗಳು ಬರುತ್ತವೆ. ಇಂತಹ ಕಷ್ಟಕರ ಪರಿಸ್ಥಿತಿಯಲ್ಲಿ ಅವರು ಸೇವೆಯಲ್ಲಿದ್ದರೆ ಕೊರೋನಾ ಬೇಗ ತಗಲುವ ಸಾಧ್ಯತೆಯಿರುವುದರಿಂದ ವಯಸ್ಸಿನ ಕಾರಣ, ಪೊಲೀಸ್ ಸಿಬ್ಬಂದಿಗಳು ಹೆಚ್ಚಿನ ಅಪಾಯದಲ್ಲಿದ್ದಾರೆ. ಆದ್ದರಿಂದ ಅವರಿಗೆ ರಜೆ ತೆಗೆದುಕೊಳ್ಳಲು ಅವಕಾಶ ನೀಡುತ್ತಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.