ರಾಜ್ಯದಲ್ಲಿ ಶನಿವಾರ 41664 ಮಂದಿಗೆ ಸೋಂಕು ತಗುಲಿದ್ದು, 349 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಸಾವನ್ನಪ್ಪಿದವರ ಸಂಖ್ಯೆ 21434ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯಿಂದ 34,425 ಮಂದಿ ಬಿಡುಗಡೆಯಾಗಿದ್ದಾರೆ.ಇದರೊಂದಿಗೆ ಒಟ್ಟು 1544982 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. 695494 ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಖಚಿತ ಪ್ರಕರಣಗಳ ಸಂಖ್ಯೆ 2172931 ಕ್ಕೆ ಏರಿಕೆಯಾಗಿದೆ. ಸೋಂಕಿನ ಖಚಿತ ಪ್ರಕರಣಗಳ ಸಂಖ್ಯೆ ಶೇ.35.20 ರಷ್ಟಿದರೆ, ಮೃತರ ಪ್ರಮಾಣ ಶೇ. 0.83 ರಷ್ಚಿದೆ.
ಬೆಂಗಳೂರು ನಗರದಲ್ಲಿ ಸಾವಿನ ಸಂಖ್ಯೆ ಇಳಿಕೆಯಾಗಿದ್ದು ಇಂದು 94 ಮಂದಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 9340 ಕ್ಕೆ ಹೆಚ್ಚಳವಾಗಿದೆ. ನಗರದಲ್ಲಿ 13402 ಸಕ್ರಿಯ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1042714ಕ್ಕೆ ಏರಿಕೆಯಾಗಿದೆ.
ಜಿಲ್ಲೆಗಳಲ್ಲಿ ಇಂದು ದಾಖಲಾಗಿರುವ ಪ್ರಕರಣಗಳು: ಬಾಗಲಕೋಟೆ 584, ಬಳ್ಳಾರಿ 1622, ಬೆಳಗಾವಿ 1,502 ಬೆಂಗಳೂರು ಗ್ರಾಮಾಂತರ 1265, ಬೆಂಗಳೂರು ನಗರ 13,402,ಬೀದರ್ 185, ಚಾಮರಾಜನಗರ 535, ಚಿಕ್ಕಬಳ್ಳಾಪುರ 595, ಚಿಕ್ಕಮಗಳೂರು 1035, ಚಿತ್ರದುರ್ಗ 454, ದಕ್ಷಿಣ ಕನ್ನಡ 1787, ದಾವಣಗೆರೆ 292, ಧಾರವಾಡ 901, ಗದಗ ,459, ಹಾಸನ 2443, ಹಾವೇರಿ 267, ಕಲಬುರಗಿ 832, ಕೊಡಗು 483, ಕೋಲಾರ 778, ಕೊಪ್ಪಳ 630, ಮಂಡ್ಯ 1188, ಮೈಸೂರು 2489, ರಾಯಚೂರು 467, ರಾಮನಗರ 524, ಶಿವಮೊಗ್ಗ 1,081, ತುಮಕೂರು 2302, ಉಡುಪಿ 1146, ಉತ್ತರ ಕನ್ನಡ 1226 ವಿಜಯಪುರ 789 ಮತ್ತು ಯಾದಗಿರಿಯಲ್ಲಿ 343 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ.
ಬೆಂಗಳೂರಿನಲ್ಲಿ ಸೋಂಕು ಇಳಿಕೆ, ಜಿಲ್ಲೆಗಳಲ್ಲಿ ಭಾರಿ ಏರಿಕೆ
ಬೆಂಗಳೂರಿನಲ್ಲಿ ಸೋಂಕಿನ ಸಂಖ್ಯೆ ನಿರಂತರ ಇಳಿಕೆಯಾಗುತ್ತಲೇ ಇದೆ. ಶನಿವಾರ ರಾಜಧಾನಿಯಲ್ಲಿ 13,402 ಹೊಸ ಪ್ರಕರಣಗಳು ದೃಢಪಟ್ಟಿವೆ. ಅಂದರೆ ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ ಬೆಂಗಳೂರಿನ ಪ್ರಮಾಣ ಶೇ.32 ಮಾತ್ರ. ಉಳಿದ ಶೇ. 68ರಷ್ಟು ಸೋಂಕುಗಳು ಜಿಲ್ಲೆಗಳಿಂದ ವರದಿಯಾಗಿವೆ.
6 ಲಕ್ಷ ದಾಟಿದ ಸಕ್ರಿಯ ಪ್ರಕರಣ, ರಾಜ್ಯಕ್ಕೆ ಮತ್ತಷ್ಟು ಕುಖ್ಯಾತಿ
ಶನಿವಾರ ಕರ್ನಾಟಕದಲ್ಲಿ ಕೊರೊನಾದಿಂದ 34,425 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಇಲ್ಲಿಯವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 15,44,982ಕ್ಕೆ ಏರಿಕೆಯಾಗಿದೆ..