ಡಿಸೆಂಬರ್ 2019ರಲ್ಲಿ ಈ ಜಗತ್ತನ್ನು ಪ್ರವೇಶಿಸಿದ ಕೊರೋನಾ ಎಲ್ಲೆಂದರಲ್ಲಿ ಹಬ್ಬುತ್ತಾ ಸಾಗಿತ್ತು, ಆದರೆ ಅದಕ್ಕೆ ಈಗ ಕಡಿವಾಣ ಹಾಕಲು ಲಸಿಕೆ ಸಿದ್ದವಾಗಿದ್ದು ಮುಂದಿನ ವಾರದಿಂದಲೇ ಬ್ರಿಟನ್ ಪ್ರಜೆಗಳಿಗೆ ನೀಡುವುದಾಗಿ ಬ್ರಿಟನ್ ಅಧ್ಯಕ್ಷರು ಘೋಷಿಸಿದ್ದಾರೆ.
ಮನುಕುಲಕ್ಕೆ ಮಾರಕವಾಗಿದ್ದ ಕೊರೋನಕ್ಕೆ ಔಷಧಿಯನ್ನು ಹುಡುಕುವುದರಲ್ಲಿ ಎಲ್ಲ ರಾಷ್ಟ್ರಗಳು ಇನ್ನೂ ಬಿಸಿಯಾಗಿರುವಾಗ ಬ್ರಿಟನ್ ದೇಶದ ಪ್ರಧಾನಿಯವರು ಬುಧವಾರ ಹೇಳಿಕೆ ನೀಡಿದ್ದಾರೆ, ಮುಂದಿನ ವಾರದಿಂದ ಬ್ರಿಟನ್ ನಾದ್ಯಂತ ಲಸಿಕೆಯನ್ನು ಒದಗಿಸಲಾಗುತ್ತದೆ, ಲಸಿಕೆಯು ನೀಡುವ ರಕ್ಷಣೆಯೇ ಅಂತಿಮವಾಗಿ ನಮ್ಮ ಜೀವನವನ್ನು ಮರಳಿ ಪಡೆಯಲು ಹಾಗೂ ಆರ್ಥಿಕತೆ ಸಹಜ ಸ್ಥಿತಿಗೆ ಮರಳಲು ನೆರವಾಗುತ್ತದೆ ಎಂದು ಹೇಳಿದರು.
ಅಮೆರಿಕದ ಫೈಜರ್ ಕಂಪನಿ ಸಿದ್ಧಪಡಿಸಿದ ಕೋವಿಡ್-19 ಲಸಿಕೆಗೆ ಬ್ರಿಟನ್ನಲ್ಲಿ ಅನುಮೋದನೆ ಸಿಕ್ಕಿದ್ದು ಹಾಗೂ ತೀರ ಅವಶ್ಯಕವಿರುವ ಪ್ರಜೆಗಳಿಗೆ ಅಂದರೆ ವೈದ್ಯರಿಗೆ, ವೈದ್ಯಕೀಯ ಸಿಬ್ಬಂದಿಗಳಿಗೆ ಹಾಗೂ ಹೆಚ್ಚಿನ ಅವಶ್ಯಕತೆ ಇರುವ ಪ್ರಜೆಗಳಿಗೆ ಮುಂದಿನ ವಾರದಿಂದಲೇ ಲಸಿಕೆಯನ್ನು ನೀಡಲಾಗುವುದು ಎಂದು ಹೇಳಲಾಗಿದೆ.
ಕೊರೋನಾ ಬಂದಾಗಿನಿಂದಲೂ ಎಲ್ಲ ರಾಷ್ಟ್ರಗಳು ಆರ್ಥಿಕ ಒತ್ತಡದಲ್ಲಿ ಸಿಲುಕಿವೆ, ಜನರು ಅತ್ಯಂತ ಕೆಟ್ಟ ಆರ್ಥಿಕ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ, ಜಾಗತಿಕವಾಗಿ ಸುಮಾರು 15 ಲಕ್ಷ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ, ವಿದ್ಯಾರ್ಥಿಗಳು ಶಾಲೆಗೆ ಹೋಗಲಾಗುತ್ತಿಲ್ಲ, ಯುವಕರು ದುಡಿಯಲು ಹೋಗಲಾಗುತ್ತಿಲ್ಲ, ಹೀಗೆ ಇಷ್ಟೆಲ್ಲಾ ಕಷ್ಟವನ್ನು ನೀಡಿದ ಕೊರೋನಕ್ಕೆ ಇನ್ನೇನು ಫೈಜರ್ ಕಂಪನಿಯ ಲಸಿಕೆ ಸಿದ್ಧವಾಗಿದ್ದು ಇಡೀ ಜಾಗತಿಕವಾಗಿ ಇಡೀ ವಿಶ್ವಕ್ಕೆ ಇದು ಖುಷಿಯನ್ನು ನೀಡಿದೆ. ಫೈಜರ್ ಕಂಪನಿಯ ಔಷಧಿಯನ್ನು ಬಳಕೆಗೆ ಅನುಮೋದನೆ ನೀಡಿದ ಬ್ರಿಟನ್ ರಾಷ್ಟ್ರ ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುನ್ನಡೆ ಸಾಧಿಸಿದೆ.
ಔಷಧಿಯು ಕೇವಲ 23 ದಿನಗಳಲ್ಲಿ ಕೊರೊನಾ ವಿರುದ್ಧ ಪರಿಣಾಮ ಬೀರುವುದಾಗಿ ಫೈಜ್ ರ ಬಯೋಟೆಕ್ ಕಂಪನಿಯವರು ತಿಳಿಸಿದ್ದಾರೆ. ಔಷಧಿಯು ₹800 ಗಿಂತ ಕಡಿಮೆ ಬೆಲೆಯಲ್ಲಿ ಸಿಗುವ ನಿರೀಕ್ಷೆ ಇದೆ ಹಾಗೂ ಬ್ರಿಟನ್ ಸರ್ಕಾರ 2 ಕೋಟಿ ಲಸಿಕೆ ಗಳಿಗೆ ಕಂಪನಿಯ ಮುಂದೆ ಬೇಡಿಕೆ ಇಟ್ಟಿದೆ.
ಇನ್ನು ಭಾರತದಲ್ಲಿ ನಾವು ನೋಡುವುದಾದರೆ ನಮ್ಮ ದೇಶದಲ್ಲಿ ಕೂಡ 3 ಲಸಿಕೆಗಳು ಸಿದ್ದವಾಗುತ್ತಿವೆ ನೀವು ಯಾವ ಎಂದರೆ ಜೈ ಕೋವಿಡ್, ಕೋ ವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್. ಭಾರತದಲ್ಲಿಯೂ ಕೂಡ 2021 ಫೆಬ್ರವರಿಯಲ್ಲಿ ಲಚಿಕಿ ಸಿಗುವುದು ನಿಶ್ಚಿತ ಎಂದು ಹೇಳಲಾಗಿದೆ.
ಲೇಖಕರು: ಚಿನ್ನಪ್ಪ ಎಸ್. ಅಂಗಡಿ