News

ವಿಶ್ವದಲ್ಲಿ 50 ಲಕ್ಷ ಜನಕ್ಕೆ ಸೋಂಕು, ವಿಶ್ವದಲ್ಲಿ 3.35 ಲಕ್ಷ ಜನ ಕೊರೋನಾ ಸೋಂಕಿಗೆ ಬಲಿ

21 May, 2020 8:24 PM IST By:

ನವೆಂಬರ್ ತಿಂಗಳಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಕೊರೋನಾ ಸೋಂಕು ಜಗತ್ತಿನಾದ್ಯಂತ ತನ್ನ ಅಟ್ಟಹಾಸ ಮುಂದುವರೆಸಿದೆ.  ವಿಶ್ವದ 214 ದೇಶಗಳಿಗೂ ಹಬ್ಬಿದ ಈ ಸೋಂಕು ಜಗತ್ತಿನೆಲ್ಲೆಡೆ ಆತಂಕ ಸೃಷ್ಟಿಸಿರುವ ಮತ್ತು ಮಾರಣಹೋಮಕ್ಕೆ ಕಾರಣವಾಗಿರುವ ಕೋವಿಡ್ 19 ವೈರಸ್ ಗೆ ಬುಧವಾರದ (ಮೇ 20) ವೇಳೆಗೆ 5 ಮಿಲಿಯನ್ ಜನರು ಸೋಂಕಿಗೆ ತುತ್ತಾಗಿದ್ದಾರೆ.

ಈ ಮಹಾಮಾರಿ ರೋಗಕ್ಕೆ ಸುಮಾರು 3,25,000 ಜನರು ಮೃತಪಟ್ಟಿದ್ದು,  ಮಿಲಿಯನ್ ಗಟ್ಟಲೇ ಜನರು  ನಿರುದ್ಯೋಗಿಗಳಾಗಲು  ಕಾರಣವಾಗಿದೆ. ದುರಂತವೆಂದರೇ ಕಳೆದ 24 ಗಂಟೆಗಳ ಅವಧಿಯಲ್ಲಿ ಜಗತ್ತಿನಲ್ಲಿ 1,06,000 ಲಕ್ಷ ಜನರು ವೈರಾಣು ಪೀಡಿತರಾಗಿದ್ದಾರೆ.

ಈ ಸೋಂಕು 1 ಮಿಲಿಯನ್  ಜನರಿಗೆ ಕೇವಲ 11 ದಿನದಲ್ಲಿ ಹರಡಿದ್ದು, ವೈರಸ್  ಅಟ್ಟಹಾಸಕ್ಕೆ ಅಕ್ಷರಶಃ ನಲುಗಿ ಹೋಗಿದ್ದ ಇಟಲಿ, ಸ್ಪೇನ್ ಮುಂತಾದ ಕಡೆ ನಿಧಾನವಾಗಿ ಲಾಕ್ ಡೌನ್ ಸಡಿಲಿಸಲಾಗಿದೆ.  ಆದರೂ ಏರಡನೇ ಹಂತದ ಸೋಂಕು ಹರಡುವ ಸಾಧ್ಯತೆ ಕಂಡುಬರುತ್ತಿದೆ. ಜಗತ್ತಿನೆಲ್ಲೆಡೆ 50 ಲಕ್ಷ ಜನರು ಸೋಂಕಿನಿಂದ ಬಳಲುತ್ತಿದ್ದು, ಇದು ನ್ಯೂಜಿಲ್ಯಾಂಡ್ ನ ಜನಸಂಖ್ಯೆಗೆ ಸಮಾನವಾಗಿದೆ ಎಂದು ತಿಳಿದುಬಂದಿದೆ. ಇದೀಗ ಈ ವೈರಸ್ ಸಣ್ಣಪುಟ್ಟ ರಾಷ್ಟ್ರಗಳಲ್ಲೂ ಹರಡುತ್ತಿದ್ದು ಈ ಕುರಿತು ವಿಶ‍್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಭಾರತದಲ್ಲಿ 1 ಲಕ್ಷಕ್ಕೂ ಹೆಚ್ಚು ಸೋಂಕಿತರು:

ಭಾರತದಲ್ಲಿ ಕೊರೋನಾ ವೈರಸ್ ಒಟ್ಟು ಸೋಂಕಿತರ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದೆ.ಮೇ 21 ರ ಸಾಯಂಕಾಲ 5ರವರೆಗೆ (1,13,321) ಇತ್ತು. ಅಲ್ಲದೆ ಜಾಗತಿಕವಾಗಿ ಅತಿ ಹೆಚ್ಚು ಕೋವಿಡ್ 19 ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪೈಕಿ 11ನೇ ಸ್ಥಾನದಲ್ಲಿದೆ. ಈ ಮಧ್ಯೆ ಲಾಕ್‌ಡೌನ್ ಸರಿಯಾದ ಸಂದರ್ಭಕ್ಕೆ ಜಾರಿಗೆ ತಂದಿರುವುದು ಕೋವಿಡ್ ಪ್ರಕರಣಗಳ ಸಂಖ್ಯೆಯನ್ನು ನಿಯಂತ್ರಿಸಲು ಸಾಧ್ಯವಾಗಿದೆ. ಆದರೆ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ನಡುವೆಯೂ ಕೊರೋನಾ ವೈರಸ್ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ ವಿಚಾರದಲ್ಲಿದೆ.
ಮಹಾರಾಷ್ಟ್ರ 39,295, ತಮಿಳುನಾಡು 13,191, ಗುಜರಾತ 12,539, ದೆಹಲಿ 11,659,ರಾಜಸ್ಥಾನ 6154 ಸೋಂಕಿತರಿರುವ ಟಾಪ್ ಐದು ರಾಜ್ಯಗಳಾಗಿವೆ. ಕರ್ನಾಟಕದಲ್ಲಿಯೂ ಕೊರೋನಾ ತನ್ನ ಅಟ್ಟಹಾಸ ಮುಂದುವರೆಸಿದೆ. ಕರ್ನಾಟಕದಲ್ಲಿ 1578ಕ್ಕೂ ಹೆಚ್ಚು ಕೊರೋನಾ ಸೋಂಕಿರಿದ್ದಾರೆ. ಮುಂಬೈದಿಂದ ಬಂದ ವಲಸೆ ಕಾರ್ಮಿಕರಿಂದ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿಯೂ ಕೊರೋನಾ ತನ್ನ ಅಟ್ಟಹಾಸ ಮುಂದುವರೆಸಿದೆ.

ಅಮೇರಿಕದಲ್ಲಿ 15 ಲಕ್ಷಕ್ಕಿತ ಹೆಚ್ಚು ಕೊರೋನಾ ಸೋಂಕಿತರು:

ಅಮೆರಿಕಾದಲ್ಲಿ 15 ಲಕ್ಷಕ್ಕಿಂತಲೂ ಹೆಚ್ಚು ಸೊಂಕು ಪೀಡಿತರಿದ್ದು, 94 ಸಾವಿರ ಮಂದಿ ಈ ಮಹಾಮಾರಿಗೆ ಬಲಿಯಾಗಿದ್ದಾರೆ. ರಷ್ಯಾದಲ್ಲೂ 3 ಲಕ್ಷ ಮಂದಿ ವೈರಾಣುವಿಗೆ ತುತ್ತಾಗಿದ್ದು ಇಲ್ಲಿ ಮರಣ ಪ್ರಮಾಣ ಕಡಿಮೆಯಿದೆ.ಇಟಲಿ 2.25 ಲಕ್ಷ ಸೋಂಕಿತರು 32 ಸಾವಿರ ಜನರ ಸಾವು, ಬ್ರೀಟನ್ 2.4 ಲಕ್ಷ ಸೋಂಕಿತರು, 35 ಸಾವಿರ ಜನರ ಸಾವು,  ಬ್ರೆಜಿಲ್,ಸ್ಪೇನ್ ಸೇರಿದಂತೆ ಎಲ್ಲಾ ದೇಶಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.