News

ದೇಶದಲ್ಲಿ ಮಂಗಳವಾರ ಒಂದೇ ದಿನ 2 ಸಾವಿರಕ್ಕೂ ಹೆಚ್ಚು ಮಂದಿ ಕೊರೋನಾಗೆ ಬಲಿ!

17 June, 2020 1:56 PM IST By:

ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ ಬರುವ ಲಕ್ಷಣ ಕಾಣುತ್ತಿಲ್ಲ. ಗುಣಮುಖರಾಗುವವವರ ಸಂಖ್ಯೆ ಹೆಚ್ಚಾಗುತ್ತಿರುವುದು ಒಂದೆಡೆ ನೆಮ್ಮದಿ ತಂದರೆ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕಕ್ಕಿಡುಮಾಡಿದೆ.

ಕಳೆದ ಹದಿನೈದು ದಿನಗಳಿಂದ ಪ್ರತಿನಿತ್ಯ 300 ರಿಂದ 400ರವರೆಗೆ ಸಾವಿನ ಸಂಖ್ಯೆ ಇರುತ್ತಿತ್ತು. ಆದರೆ ಮಂಗಳವಾರ ಒಂದೇ ದಿನ 2 ಸಾವಿರಕ್ಕೂ ಹೆಚ್ಚು ಜನರು ಕೊರೋನಾ ಸೋಂಕಿನಿಂದ ಮೃತಪಟ್ಟಿರುವುದು ದೇಶದ ಜನರಿಗೆ ಬೆಚ್ಚಿಬೀಳಿಸಿದೆ.

ಸೋಂಕಿತರ ಸಂಖ್ಯೆ ಮಂಗಳವಾರ 3,54,161ಕ್ಕೆ ಏರಿಕೆಯಾಗಿದೆ. 1,87,552 ಮಂದಿ ಗುಣಮುಖರಾಗಿದ್ದು, 11,921 ಮಂದಿ ಸಾವನ್ನಪ್ಪಿದ್ದಾರೆ. ಸೋಂಕಿತ ಪ್ರಕರಣದ ದೇಶಗಳ ಪಟ್ಟಿಯಲ್ಲಿ ಭಾರತ 4ನೇ ಸ್ಥಾನಕ್ಕೆ ಏರಿದೆ. ಮಂಗಳವಾರ ಒಂದೇ ದಿನ 11,090 ಪ್ರಕರಣ ದಾಖಲಾಗಿದೆ. ಜೊತೆಗೆ ಮಂಗಳವಾರ ಒಂದೇ ದಿನ 2,004 ಮಂದಿ ಸಾವನ್ನಪ್ಪಿದ್ದರಿಂದ ಜನರಲ್ಲಿ ಆತಂಕ ಇಮ್ಮಡಿಗೊಂಡಿದೆ.

ಲಾಕ್ಡೌನ್ ಸಡಿಲಿಕೆಯಿಂದಾಗಿ ಕೊರೋನಾ ಸೋಂಕಿತರ ಸಂಖ್ಯೆಯೊಂದಿಗೆ ಸಾವಿನ ಸಂಖ್ಯೆಯೂ ದ್ವಿಗುಣಗೊಂಡಿದೆ.

ವಿಶ್ವದಾದ್ಯಂತ ಕೊರೊನಾ ವೈರಸ್ 4 ಲಕ್ಷದ 45ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. 82ಲಕ್ಷದ 56 ಸಾವಿರಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ. ಇದರಲ್ಲಿ 43ಲಕ್ಷದ 06ಸಾವಿರಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ.

ಕರ್ನಾಟಕದಲ್ಲಿ ಮಂಗಳವಾರ 317 ಜನರಿಗೆ ಕೊರೋನಾ-ಏಳು ಜನರ ಸಾವು

ರಾಜ್ಯದಲ್ಲಿ ಮಂಗಳವಾರ ಒಂದೇ ದಿನ 317 ಜನರಿಗೆ ಕೊರೋನಾ ಸೋಂಕು ತಗುಲಿದೆ. ಇದರೊಂದಿಗೆ ಏಳು ಮಂದಿ ಮೃತಪಟ್ಟಿರುವುದು  ದೃಢಪಟ್ಟಿದೆ. ಇದರಿಂದಾಗಿ ಮೃತರ ಒಟ್ಟು ಸಂಖ್ಯೆ 94ಕ್ಕೆ ಏರಿದೆ.

ಸೋಂಕಿತರ ಸಂಖ್ಯೆ 7,530ಕ್ಕೆ ತಲುಪಿದೆ. ಹತ್ತು ದಿನಗಳಲ್ಲಿ 2,317 ಮಂದಿಗೆ ಸೋಂಕು ತಗುಲಿದ್ದರೆ, 35 ಮಂದಿ ಮೃತಪಟ್ಟಿದ್ದಾರೆ.

ದಕ್ಷಿಣ ಕನ್ನಡದಲ್ಲಿ 79, ಕಲಬುರಗಿಯಲ್ಲಿ 63, ಬಳ್ಳಾರಿಯಲ್ಲಿ 53, ಬೆಂಗಳೂರಿನಲ್ಲಿ 47, ಧಾರವಾಡದಲ್ಲಿ 8, ಉಡುಪಿ

ಯಲ್ಲಿ 7, ಶಿವಮೊಗ್ಗದಲ್ಲಿ 7, ಯಾದಗಿರಿಯಲ್ಲಿ 6, ಉತ್ತರ ಕನ್ನಡದಲ್ಲಿ 6, ರಾಯಚೂರಿನಲ್ಲಿ 6, ಹಾಸನದಲ್ಲಿ 5, ವಿಜಯಪುರದಲ್ಲಿ 4, ಮೈಸೂರಿನಲ್ಲಿ 4, ಗದಗದಲ್ಲಿ 4, ರಾಮನಗರದಲ್ಲಿ 4, ಚಿಕ್ಕಮಗಳೂರಿನಲ್ಲಿ 4, ಕೊಪ್ಪಳದಲ್ಲಿ 4, ಬೆಳಗಾವಿಯಲ್ಲಿ 3, ಬೀದರ್‌ನಲ್ಲಿ 2 ಹಾಗೂ ತುಮಕೂರಿನಲ್ಲಿ ಒಂದು ಪ್ರಕರಣ ಹೊಸದಾಗಿ ವರದಿಯಾಗಿದೆ.