News

MFOI 2023 ಸ್ಪಾನ್ಸರ್‌ ಪಟ್ಟಿಗೆ Coromandel ಸೇರ್ಪಡೆ!

01 December, 2023 11:56 AM IST By: Maltesh

ಕಳೆದ 27 ವರ್ಷಗಳಿಂದ ಭಾರತೀಯ ಕೃಷಿ ಕ್ಷೇತ್ರದಲ್ಲಿ ತನ್ನದೆಯಾದ ಕೊಡುಗೆಯನ್ನು ನೀಡುತ್ತಿರುವ ಸಂಸ್ಥೆ ಕೃಷಿ ಜಾಗರಣ. ನವ ದೆಹಲಿಯಲ್ಲಿ ಡಿಸೆಂಬರ್‌ 6 7 8 ರಂದು ಮೂರು ದಿನಗಳ ಕಾಲ ನಡೆಯಲಿರುವ ಮಿಲಿಯನೇಯರ್‌ ಫಾರ್ಮರ್‌ ಆಫ್‌ ಇಂಡಿಯಾ ಅವಾರ್ಡ್‌ 2023 ಕಾರ್ಯಕ್ರಮಕ್ಕಾಗಿ ಇದೀಗ ಇಡೀ ದೇಶವೇ ಎದುರು ನೋಡುತ್ತಿದೆ.

ಕೃಷಿ ಜಾಗರಣ ಆಯೋಜಿಸಿರುವ ಈ ಬೃಹತ್‌ ಕೃಷಿ ಮಹಾಕುಂಭಕ್ಕೆ ದೇಶದಾದ್ಯಂತರ ರೈತ ಬಾಂಧವರು ನೋಂದಾಯಿಸಿಕೊಂಡಿದ್ದು ರಾಷ್ಟ್ರ ರಾಜಧಾನಿಯತ್ತ ಮುಖ ಮಾಡಿದ್ದಾರೆ. ಭಾರತೀಯ ಕೃಷಿ ಕ್ಷೇತ್ರದ ಈ  ಮಹಾಕುಂಭದಲ್ಲಿ ರೈತರಿಗೆ ಸನ್ಮಾನಿಸಲಾಗುವುದು, ಅವರ ಸ್ಪೂರ್ತಿಯ ಕಥೆಯನ್ನು ಇಡೀ ದೇಶಕ್ಕೆ ತಿಳಿಸಲಾಗಿವುದು.

MFOI 2023 ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿದೆ.ಈ ಕಾರ್ಯಕ್ರಮದ ಮುಖ್ಯ ಪ್ರಾಯೋಜಕರು ಮಹೀಂದ್ರಾ ಟ್ರಾಕ್ಟರ್ಸ್.ಈ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅನೇಕ ಪ್ರಮುಖ ಕಂಪನಿಗಳು ಭಾಗವಹಿಸಲಿವೆ.

SBI ಬ್ಯಾಂಕ್ , ಸೋಮಾನಿ ಸೀಡ್ಸ್‌, ಧಾನುಕಾ ಅಗ್ರಿಟೆಕ್‌, FMC, ಸೇರಿದಂದತೆ ಹಲವಾರು ಪ್ರಮುಖ ಕಂಪನಿಗಳು ಹಾಗೂ ಸಂಸ್ಥೆಗಳು ಈ ಕಾರ್ಯಕ್ರಮದ ಭಾಗವಾಗಿವೆ. ಇದೀಗ ಆ ಸಾಲಿಗೆ ದೇಶದ ಅಗ್ರಗಣ್ಯ ರಸಗೊಬ್ಬರ ಹಾಗೂ ಕ್ರಿಮೀನಾಶಕ ಕಂಪನಿಯಾದ ಕೋರ್‌ಮಂಡಲ್‌ ಸ್ಪಾನ್ಸರ್‌ ಆಗಿ ಸೇರಿಕೊಂಡಿದೆ.

ಕೋರಮಂಡಲ್‌ ಕಂಪನಿಯು ತನ್ನ ಮುಖ್ಯ ಧ್ಯೇಯದೊಂದಿಗೆ ಅನೇಕ ವರ್ಷಗಳಿಂದ ಕೃಷಿ ಪ್ರಪಂಚದೊಂದಿಗೆ ಸಂಬಂಧ ಹೊಂದಿದೆ.  ರಸಗೊಬ್ಬರ ಕ್ಷೇತ್ರದಲ್ಲಿ ರೈತರಿಗೆ ತಡೆರಹಿತ ಸೇವೆಗಳನ್ನು ಒದಗಿಸುವುದು, ಅನನ್ಯ ಬೆಳೆ ಪರಿಹಾರಗಳು ಮತ್ತು ಕೃಷಿ ಸಮೃದ್ಧಿಯನ್ನು ಹೆಚ್ಚಿಸಲು ಸುಧಾರಿತ ಕೃಷಿ ತಂತ್ರಜ್ಞಾನಗಳನ್ನು ನಿರಂತರವಾಗಿ ಪರಿಚಯಿಸುವುದರಲ್ಲಿ ಮೊದಲ ಸಾಲಿನಲ್ಲಿದೆ.

ನಿಖರವಾದ ಉತ್ಪಾದನೆ ಮತ್ತು ಗ್ರಾಹಕರ ಪ್ರತಿಕ್ರಿಯೆಯನ್ನು ನಿಕಟವಾಗಿ ಸಂಯೋಜಿಸುವ ಮೂಲಕ ಕೃಷಿ ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟದ ಪೋಷಣೆ, ಬೆಳೆ ಆರೈಕೆ ಪರಿಹಾರಗಳು ಮತ್ತು ಸೇವೆಗಳನ್ನು ನಿರಂತರವಾಗಿ ಒದಗಿಸುವ ಕಾರ್ಯದಲ್ಲಿ ಕೋರಮಂಡಲ್‌ ನಿರತವಾಗಿದೆ.

ಡಿಸೆಂಬರ್ 6 ರಿಂದ 8 ರವರೆಗೆ ನಡೆಯಲಿರುವ ಕೃಷಿ ಮಹಾಕುಂಭದಲ್ಲಿ  ಕೃಷಿ ವಿಜ್ಞಾನಿಗಳು, ದೊಡ್ಡ ಕೈಗಾರಿಕೋದ್ಯಮಿಗಳು, ಕೃಷಿ ಉದ್ಯಮಿಗಳು, ಎಲ್ಲಾ ರಾಜ್ಯಗಳ ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳು ಮತ್ತು ರೈತರು ಭಾಗವಹಿಸಲಿದ್ದಾರೆ.ವಿವಿಧ ಕೃಷಿ ಮತ್ತು ಕೃಷಿ ಉದ್ಯಮಗಳ ಬಗ್ಗೆ ಚರ್ಚಿಸಲಾಗುವುದು. ಆದ್ದರಿಂದ ನಿಮ್ಮ ಸಹಕಾರವು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತದೆ. ತಡಮಾಡದೆ ಇಂದೇ ನಮ್ಮ  ಮಿಲಿಯನೇಯರ್‌ ಫಾರ್ಮರ್‌ ವೆಬ್‌ಸೈಟ್‌ಗೆ ಭೇಟಿ ನೀಡಿ https://millionairefarmer.in/  ಈ ಕೃಷಿ ಮಹಾಕುಂಭದ ಬಗ್ಗೆ ಎಲ್ಲಾ ಮಾಹಿತಿ ಅಥವಾ ಮಾಹಿತಿಯನ್ನು ಪಡೆದುಕೊಳ್ಳಿ.