ಟ್ವಿಟರ್ ಬಾಸ್ ಎಲಾನ್ ಮಸ್ಕ್ ಅವರು ಹೊಸ ಷರತ್ತೊಂದನ್ನು ವಿಧಿಸಿದ್ದಾರೆ. ಅದರ ವಿವರ ಇಲ್ಲಿದೆ.
LPG ಗ್ರಾಹಕರಿಗೆ ಸಿಹಿಸುದ್ದಿ: ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ!
twitter ದೂರುವವರು ದೂರುತ್ತಲೇ ಇರಿ ಆದರೆ, ಬ್ಲೂಟಿಕ್‌ಗೆ ನೀವು ತಿಂಗಳಿಗೆ ಎಂಟು ಡಾಲರ್ ಅಂದರೆ ಅಂದಾಜು 620ರೂಪಾಯಿ ಪಾವತಿ ಮಾಡಬೇಕು ಎಂದು ಟ್ವಿಟರ್‌ನ ಮಾಲೀಕ ಎಲಾನ್ (Elon Musk) ಮಸ್ಕ್ ಅವರು ಷರತ್ತು ವಿಧಿಸಿದ್ದಾರೆ.
ಟ್ವಿಟರ್‌ನ ಬ್ಲೂಟಿಕ್‌ಗೆ ಹಣ ಪಾವತಿ ಮಾಡಬೇಕಾಗಬಹುದು ಎನ್ನುವ ವಿಷಯ ಕಳೆದ ಒಂದು ವಾರದಿಂದ ಚರ್ಚೆಯಲ್ಲಿತ್ತು.
ಇದೀಗ ಎಲಾನ್ ಮಸ್ಕ್ (Elon Musk) ಅವರು ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ತಿಂಗಳಿಗೆ ಎಂಟು ಡಾಲರ್ ಕೊಡಬೇಕು ಎಂದು ಹೇಳಿದ್ದಾರೆ.
ಈ ಸಂಬಂಧ ಬುಧವಾರ ಟ್ವೀಟ್ ಮಾಡಿರುವ ಅವರು “ To all complainers, please continue complaining, but it will cost $8” ದೂರುವವರೇ ದೂರುತ್ತಲೇ ಇರಿ ಆದರೆ,
ನೀವು ಮಾಸಿಕ ಎಂಟು ಡಾಲರ್ ಪಾವತಿ ಮಾಡಬೇಕು ಎಂದು ಟ್ವಿಟ್ಟಿಸಿದ್ದಾರೆ.
ಟ್ವಿಟರ್ನಲ್ಲಿ ಅಧಿಕೃತ ಖಾತೆಗಳನ್ನು ಪತ್ತೆ ಮಾಡುವ ಉದ್ದೇಶದಿಂದ ಬ್ಲೂಟಿಕ್ (Twitter Blue Tick) ಪಡೆಯಲು ಇನ್ನು ಮುಂದೆ 8 ಡಾಲರ್ ಶುಲ್ಕ ಪಾವತಿಸಬೇಕು ಎನ್ನುವುದು ಈ ಟ್ವಿಟ್‌ನ ಅರ್ಥವಾಗಿದೆ.
ಜನರೇ ಸ್ವತಃ ಶುಲ್ಕ ನೀಡಲು ಪ್ರಾರಂಭಿಸಿದರೆ, ಮುಂದೆ ಜಾಹೀರಾತುದಾರರ ಮೇಲೆ ಅವಲಂಬನೆ ಆಗುವುದು ಕಡಿಮೆಯಾಗುತ್ತದೆ.
Rbi: ಆರ್‌ಬಿಐ: ದೇಶದ 9 ಬ್ಯಾಂಕ್‌ಗಳಲ್ಲಿ ಡಿಜಿಟಲ್ ಕರೆನ್ಸಿ ಲಭ್ಯ!
ಟ್ವಿಟರ್ ಕಂಪನಿಯ ಕಾರ್ಯನಿರ್ವಹಣೆಗೆ ಇದರಿಂದ ಹೆಚ್ಚಿನ ಸ್ವಾತಂತ್ರ್ಯ ಸಿಗುತ್ತದೆ.
ಅಲ್ಲದೇ ಟ್ವಿಟರ್ನಲ್ಲಿ ಬ್ಲೂಟಿಕ್ ಪಡೆಯುವುದು ಪ್ರತಿಷ್ಠೆಯ ವಿಷಯವೂ ಆಗಿದೆ ಎನ್ನಲಾಗಿದೆ.
ಇನ್ನು ಪ್ರಸ್ತುತ ಟ್ವಿಟರ್ನಲ್ಲಿ ಎರಡು ಮಾದರಿಯ ಬಳಕೆದಾರರ ಸೃಷ್ಟಿ ಆಗಿದೆ. ಒಂದು ಹೆಚ್ಚು ಬಲಿಷ್ಠರು ಮತ್ತೊಂದು ಕೆಲಸಗಾರರು ಎಂಬ ಎರಡು ವರ್ಗ ನಿರ್ಮಾಣವಾಗಿದೆ.
ವಾಟ್ಸಪ್‌ನಲ್ಲೂ ಲಭ್ಯ ಮೆಟ್ರೋ ಟಿಕೆಟ್; ಈ ಸೇವೆ ಪ್ರಾರಂಭಿಸಿದ ದೇಶದ ಮೊದಲ ಮೆಟ್ರೋ!
ಮುಂದಿನ ದಿನಗಳಲ್ಲಿ ಈ ಅಸಮಾನತೆ ಇರುವುದಿಲ್ಲ. ತಿಂಗಳಿಗೆ 8 ಡಾಲರ್ ಶುಲ್ಕವನ್ನು ಯಾರೂ ಬೇಕಾದರೂ ಪಾವತಿ ಮಾಡಿ ಬ್ಲೂಟಿಕ್ ಸೇವೆಯನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.
ಬ್ಲೂಟಿಕ್‌ಗೆ ಈಗ ನಿರ್ಧರಿಸಿರುವ ಮೊತ್ತವು ಆಯಾ ದೇಶದ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಪರಿಷ್ಕರಣೆ ಮಾಡಲಾಗುವುದು ಎಂದು ಮಸ್ಕ್ ತಿಳಿಸಿದ್ದಾರೆ.
Gkvk: ಕೃಷಿ ಮೇಳಕ್ಕೆ ಜಿಕೆವಿಕೆ ಸಜ್ಜು; ಈ ಬಾರಿಯ ವಿಶೇಷತೆಗಳೇನು?
ಸದ್ಯ ಟ್ವಿಟರ್ ಬ್ಲೂಟಿಕ್‌ಗೆ ಯಾವುದೇ ಹಣ ಪಡೆದುಕೊಳ್ಳುತ್ತಿಲ್ಲ. ಈ ಸೇವೆ ಸಂಪೂರ್ಣವಾಗಿ ಉಚಿತವಾಗಿತ್ತು.
ಸದ್ಯ ಬ್ಲೂ-ಟಿಕ್ ಪಡೆದಿರುವ ಖಾತೆಗಳಿಗೆ ಟ್ವಿಟರ್ನಲ್ಲಿ ಆದ್ಯತೆ ಸಿಗುತ್ತದೆ. ಈ ಅಂಶವನ್ನು ಮಸ್ಕ್ ತಿಳಿಸಿದ್ದಾರೆ.
ಬ್ಲೂಟಿಕ್ ಪಡೆದ ಖಾತೆಗಳಿಗೆ ಪ್ರತಿಕ್ರಿಯೆಗಳು, ಉಲ್ಲೇಖಗಳು ಮತ್ತು ಹುಡುಕಾಟಗಳಲ್ಲಿ ಆದ್ಯತೆ ಸಿಗುತ್ತದೆ.
ಇಂಥವರಿಗೆ ದೀರ್ಘ ಅವಧಿಯ ವಿಡಿಯೊ ಹಾಗೂ ಆಡಿಯೊ ಪೋಸ್ಟ್ ಮಾಡಲೂ ಅವಕಾಶ ಕಲ್ಪಿಸಲಾಗುವುದು ಎಂದಿದ್ದಾರೆ.