ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅರಣ್ಯ ವಿಭಾಗದ ಅಧಿಕಾರಿಗಳು ಬೃಹತ್ ಉದ್ದದ ಇಂಡಿಯನ್ ರಾಕ್ ಪೈತಾನ್ ಹಾವನ್ನು ಸಂರಕ್ಷಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಬೆಂಗಳೂರು ನಗರ ಪ್ರದೇಶದ ವ್ಯಾಪ್ತಿಯಲ್ಲಿ ಬಿಬಿಎಂಪಿ
ಅರಣ್ಯ ಘಟಕದ ವತಿಯಿಂದ ವನ್ಯಜೀವಿ ಸಂರಕ್ಷಣಾ ತಂಡವನ್ನು ನಿರ್ವಹಿಸುತ್ತಿದೆ.
ಈ ಅರಣ್ಯ ಘಟಕವು ವನ್ಯಜೀವಿಗಳು ಹಾಗೂ ವನ್ಯ ಪ್ರಾಣಿಗಳಿಂದ ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ನಿವಾರಿಸುವ
ನಿಟ್ಟಿನಲ್ಲಿ ವನ್ಯಜೀವಿ ಸಂರಕ್ಷಣೆಯ ಕುರಿತು(ಹಾವುಗಳು, ಕೋತಿ, ಪಕ್ಷಿಗಳು ಹಾಗೂ ಇತರೆ) ಸಾರ್ವಜನಿಕರಿಂದ ಬರುವ
ದೂರುಗಳಿಗೆ ಅನುಗುಣವಾಗಿ ಕ್ರಮ ಕೈಗೊಳ್ಳುತ್ತಿದ್ದು, ಸಾರ್ವಜನಿಕರಿಗೆ ನೆರವಾಗುತ್ತಿದೆ.
ಮಂಗಳವಾರ ಬೆಳಗಿನ ಜಾವ ಅಂದಾಜು 2.30 ಗಂಟೆಗೆ ರಾಹಿದಾಸ್ ಎಂಬವರು ಕರೆಮಾಡಿ ಅಂಜನಾಪುರ, ಕುಂಬತ್ತಳ್ಳಿ,
ಬೆಂಗಳೂರು ಇಲ್ಲಿ ಹೆಬ್ಬಾವೊಂದು ಇರುವುದಾಗಿ ಮಾಹಿತಿ ನೀಡಿದ್ದು, ಈ ಮಾಹಿತಿಯ ಆಧಾರದ ಮೇರೆಗೆ
ಬಿಬಿಎಂಪಿ ಅರಣ್ಯ ವಿಭಾಗದ ವನ್ಯಜೀವಿ ಸಂರಕ್ಷಕರು ಸ್ಥಳಕ್ಕೆ ಭೇಟಿ ನೀಡಿ, ಹಾವನ್ನು ಸಂರಕ್ಷಣೆ ಮಾಡಿದ್ದಾರೆ.
ಅಂದಾಜು 6 ರಿಂದ 7 ಅಡಿ ಉದ್ದದ ಇಂಡಿಯನ್ ರಾಕ್ ಪೈತಾನ್ ಹೆಬ್ಬಾವುನ್ನು ಪ್ರಸನ್ನ ಕುಮಾರ್ ಪ್ರಾಣಿ ಕಲ್ಯಾಣ
ಪರಿಪಾಲಕರು ಬೆಂಗಳೂರು ಅವರ ನೇತೃತ್ವದಲ್ಲಿ ಸಂರಕ್ಷಣೆ ಮಾಡಿದ್ದು ಸದರಿ ಹೆಬ್ಬಾವನ್ನು ಸೂಕ್ತ ಆವಾಸ ಸ್ಥಾನಕ್ಕೆ ಬಿಡಲಾಗಿದೆ.
ಇದೀಗ ಬೇಸಿಗೆ ಕಾಲ ಇರುವುದರಿಂದ ಹಾವುಗಳು ಬಿಸಿಲಿನ ತಾಪಕ್ಕೆ ಹೊರಬರುತ್ತಿದ್ದು ಇವುಗಳಿಗೆ ಯಾರೂ ಸಹ ಹಾನಿಯನ್ನು ಮಾಡದೆ
ಬಿಬಿಎಂಪಿ ಅರಣ್ಯ ವಿಭಾಗದ ವನ್ಯಜೀವಿ ತಂಡಗಳಿಗೆ ಕರೆ ಮಾಡಿ ಸಂರಕ್ಷಣೆ ಮಾಡಲು ಹಾಗೂ ಸೂಕ್ತ
ಆವಾಸ ಸ್ಥಾನಕ್ಕೆ ಬಿಡಲು ಸಾರ್ವಜನಿಕರುಗಳು ಅನುವು ಮಾಡಿಕೊಡಬೇಕು ಎಂದು ಬಿಬಿಎಂಪಿ ಮನವಿ ಮಾಡಿದೆ.
ಬೆಂಗಳೂರಿನಲ್ಲಿ ಪ್ರಾಣಿಗಳಿಂದ ಅಥವಾ ಹಾವುಗಳಿಂದ ಸಮಸ್ಯೆ ಎದುರಾದರೆ, ಬಿಬಿಎಂಪಿ ಸಹಾಯವಾಣಿ 08022221188ಗೆ ಕರೆ ಮಾಡಬೇಕು
ಎಂದು ಉಪಅರಣ್ಯ ಸಂರಕ್ಷಣಾಧಿಕಾರಿ ಸರಿನಾ ಸಿಕ್ಕಲಿಗರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.