ಗ್ರಾಮವೊಂದಕ್ಕೆ ಭೂಮಿ ಪೂಜೆಗೆ ಆಗಮಿಸಿದ ಕಾಂಗ್ರೆಸ್ ಶಾಸಕಿಗೆ ವ್ಯಕ್ತಿಯೋರ್ವ ಚಾಕುವಿನಿಂದ ಹಲ್ಲೆಗೆ ಮುಂದಾದ ಘಟನೆ ಛತ್ತೀಸಘರ್‌ನ ರಾಜನಂದಗಾಂವ್ ಜಿಲ್ಲೆಯಲ್ಲಿ ವರದಿಯಾಗಿದೆ.
ರಾಜನಂದಗಾಂವ್ ಜಿಲ್ಲೆಯ ಜೋಧ್ರಾ ಗ್ರಾಮದಲ್ಲಿ ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯೋರ್ವ ಶಾಸಕಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದು, ಶಾಸಕಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದ ಹತ್ತರಿದ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ
ಭಾನುವಾರದಂದು ಜೋಡ್ರಾ ಗ್ರಾಮದಲ್ಲಿ ಕಾಂಗ್ರೆಸ್ ಶಾಸಕ ಚನ್ನಿ ಚಂದು ಸಾಹು ಅವರು ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿದ್ದಾಗ ಈ ಘಟನೆ ನಡೆದಿದೆ. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ನಾನು ಭೂಮಿ ಪೂಜೆಗಾಗಿ ಜೋಧ್ರಾ ಗ್ರಾಮಕ್ಕೆ ಹೋಗಿದ್ದೆ.
ಇದಾದ ನಂತರ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಬೇಕಾಯಿತು. ನಾನು ಸಭೆಯಲ್ಲಿದ್ದಾಗ ವ್ಯಕ್ತಿಯೊಬ್ಬರು ಹಿಂದಿನಿಂದ ಬಂದು ನನ್ನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಇದರಿಂದ ನನ್ನ ಕೈಗೆ ಚಿಕ್ಕ ಪುಟ್ಟ ಗಾಯಗಳಾಗಿವೆ ಎಂದು ಅವರು ಹೇಳಿಕೆ ನೀಡಿದ್ದಾರೆ.
ಈ ಆತಂಕಕಾರಿ ಘಟನೆ ನಡೆದ ಬೆನ್ನಲ್ಲೆ ಪ್ರತಿಪಕ್ಷ ಬಿಜೆಪಿ ಘಟನೆಯನ್ನು ಖಂಡಿಸಿದೆ ಮತ್ತು ಛತ್ತೀಸ್‌ಗಢದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿದೆ. “ಆಡಳಿತಾರೂಢ ಪಕ್ಷದ ಶಾಸಕರಿಗೆ ಸುರಕ್ಷಿತೆ ಇಲ್ಲದಿದ್ದಾಗ ಸಾಮಾನ್ಯ ಜನರ ಕಥೆ ಏನು? ಇದು ಭೂಪೇಶ್ ಬಘೇಲ್ ಸರ್ಕಾರದ ವೈಫಲ್ಯ ' ಎಂದು ಬಿಜೆಪಿ ಆರೋಪ ಮಾಡಿದೆ.