ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ಸಮಗ್ರ ವಿಮಾ ರಕ್ಷಣೆಯನ್ನು ಒದಗಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಸರ್ಕಾರದ ಸಚಿವಾಲಯ ಪ್ರಕಟನೆಯಲ್ಲಿ ತಿಳಿಸಿದೆ.
ಇದನ್ನೂ ಓದಿರಿ: PaddyPrice | ಕ್ವಿಂಟಲ್ ಭತ್ತಕ್ಕೆ ₹2450 ನಿಗದಿ; ಜಿಲ್ಲಾಡಳಿತ ಸ್ಪಷ್ಟನೆ
ನೈಸರ್ಗಿಕ ವಿಕೋಪಗಳಿಂದ ನಷ್ವವಾದ ರೈತರ ಬೆಳೆಗಳಿಗೆ ಸಮಗ್ರ ವಿಮಾ ರಕ್ಷಣೆಯನ್ನು ಒದಗಿಸಲಾಗುವುದು.
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ಸಮಗ್ರ ವಿಮಾ ರಕ್ಷಣೆಯನ್ನು ಒದಗಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.
ಪಿಎಂ ಫಸಲ್ ಭೀಮಾ ಯೋಜನೆಯು ವಿಶ್ವದ ಅತಿದೊಡ್ಡ ಬೆಳೆ ವಿಮಾ ಯೋಜನೆಯಾಗುವ ಹಾದಿಯಲ್ಲಿದೆ. ಅಷ್ಟೆ ಅಲ್ಲದೇ ಪ್ರತಿ ವರ್ಷ ಈ ಯೋಜನೆಯಡಿ ಸುಮಾರು 5 ಕೋಟಿ ರೈತರ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ.
ಸರ್ಕಾರಿ ನೌಕರರಿಗೆ ಸಿಹಿಸುದ್ದಿ; ಡಿಎ ಹೆಚ್ಚಳದ ನಂತರ ಇದೀಗ ಮತ್ತೊಂದು ಮಹತ್ವದ ಘೋಷಣೆ! ಏನಿದು ತಿಳಿಯಿರಿ
ಕಳೆದ 6 ವರ್ಷಗಳಲ್ಲಿ ಕೇಂದ್ರ ಸರ್ಕಾರ ರೈತರಿಗೆ 25,186 ಕೋಟಿ ರೂಪಾಯಿ ಪ್ರೀಮಿಯಂ ರೀತಿಯಲ್ಲಿ ಪಾವತಿಸಿದೆ.
ಇನ್ನೂ ಕಳೆದ ಅಕ್ಟೋಬರ್ 31ಕ್ಕೆ ರೈತರಿಗೆ 1,25,662 ಕೋಟಿ ರೂಪಾಯಿಗಳನ್ನು ಪಾವತಿಸಲಾಗಿದೆ. ಈ ಯೋಜನೆಯ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚಿನ ಪ್ರೀಮಿಯಂನ್ನು ಭರಿಸುತ್ತವೆ.
ಇನ್ನೂ ಕೆಲವೊಂದು ರಾಜ್ಯಗಳಲ್ಲಿ ಸತ್ಯಕ್ಕೆ ದೂರವಾದ ವರದಿಗಳು ಕೆಲವೊಂದು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ರೈತರಿಗೆ ವಿಮಾ ಹಕ್ಕಿನಲ್ಲಿ ಅತ್ಯಲ್ಪ ಮೊತ್ತವನ್ನು ಪಾವತಿಸಲಾಗುತ್ತಿದೆ ಎಂದು ವರದಿಯಾಗಿವೆ.
Pradhan Mantri Jan-Dhan Yojana | ಖಾತೆದಾರರಿಗೆ ಸರ್ಕಾರದಿಂದ 10,000 ರೂಪಾಯಿ!
ಇದು ಸತ್ಯವೇ ಎಂದು ಪರೀಕ್ಷಿಸಿದಾಗ ನಿಖರ ದತ್ತಾಂಶಗಳ ಕೊರತೆಯಿಂದಾಗಿ ಕೇವಲ ಒಬ್ಬ ರೈತರನ್ನು ಮಾತ್ರ ಗುರುತಿಸಲಾಗಿದ್ದು ಅವರು ಪಾಂಡುರಂಗ ಭಾಸ್ಕರ್ ರಾವ್ ಕದಮ್ ಎಂಬುವವರಾಗಿದ್ದಾರೆ.
ಅವರಿಗೆ ಒಂದು ಕಂತಿನ ವಿಮೆಯ ಒಟ್ಟು 595 ರೂಪಾಯಿ ಮೊತ್ತವನ್ನು ಸರ್ಕಾರ ಸಂದಾಯ ಮಾಡಿದ್ದರೂ ಅವರಿಗೆ ಒಂದು ಬೆಳೆ ಕಂತಿಗೆ ಕೇವಲ 37 ರೂಪಾಯಿ 31 ಪೈಸೆ ಮತ್ತು ಮತ್ತೊಂದು ಕಂತಿನಲ್ಲಿ 327 ರೂಪಾಯಿ ಸಿಕ್ಕಿದೆ ಎಂದು ಮಾಧ್ಯಮದಲ್ಲಿ ಸುದ್ದಿ ಪ್ರಕಟವಾಗಿತ್ತು.
ಆದರೆ ವಾಸ್ತವ ದತ್ತಾಂಶ ಪ್ರಕಾರ, ಇದುವರೆಗೆ ಅವರಿಗೆ ಒಟ್ಟು 2080 ರೂಪಾಯಿ 40 ಪೈಸೆ ಸಿಕ್ಕಿದೆ ಎಂದು ತಿಳಿಸಿದೆ.
ರೈತರಿಗೆ ಸಿಹಿಸುದ್ದಿ | ಜಮೀನಿನಲ್ಲಿ ಶ್ರೀಗಂಧದ ಬೆಳೆಯಲು ಸಚಿವ ಸಂಪುಟ ಒಪ್ಪಿಗೆ, ಸರ್ಕಾರದಿಂದ ಸಹಾಯ ಕೂಡ ಲಭ್ಯ!
ನಿಖರವಾದ ಕೃಷಿಯೊಂದಿಗೆ ಫಸಲ್ ಭೀಮಾ ಯೋಜನೆ ರೈತರನ್ನು ತಲುಪಲು ಮತ್ತು ಕಾರ್ಯಾಚರಣೆಗಳನ್ನು ಹೆಚ್ಚಿಸುವಲ್ಲಿ ಡಿಜಿಟಲೀಕರಣ ಮತ್ತು ತಂತ್ರಜ್ಞಾನವು ಮಹತ್ವದ ಪಾತ್ರವನ್ನು ವಹಿಸುತ್ತಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ಹೇಳುತ್ತಾರೆ.
ಕೃಷಿ-ತಂತ್ರಜ್ಞಾನ ಮತ್ತು ಗ್ರಾಮೀಣ ವಿಮೆಯ ಒಕ್ಕೂಟವು ಆರ್ಥಿಕ ಸೇರ್ಪಡೆಯಲ್ಲಿ ತಂತ್ರ ಸೂತ್ರವನ್ನು ತಂದು ರೈತರು ಈ ವಿಮಾ ಯೋಜನೆಯಲ್ಲಿ ಹೆಚ್ಚು ನಂಬಿಕೆ ಇಡುವಂತೆ ಮಾಡಬಹುದು.