News

ರಾಜ್ಯಮಟ್ಟದ ಜೋಡಿ ಎತ್ತಿನ ಗಾಡಿ ಸ್ಪರ್ಧೆ- ಪ್ರಥಮ ಬಹುಮಾನ 50 ಸಾವಿರ, ದ್ವಿತೀಯ 40 ಸಾವಿರ, ತೃತೀಯ 50 ಸಾವಿರ

05 February, 2021 9:58 AM IST By:
pulling competition

ನಿಮ್ಮಲ್ಲಿ ದಷ್ಟಪುಷ್ಟ ಎತ್ತುಗಳಿವೆಯೇ? ಹಾಗಾದರೆ ಇನ್ನೇಕೆ ತಡ. ಕೂಡಲೇ ನಿಮ್ಮ ಹೆಸರು ನೋಂದಾಯಿಸಿ ಜೋಡಿ ಎತ್ತಿನ ಗಾಡಿ ಎಳೆಯುವ ಸ್ಪರ್ಧೆಗೆ ಭಾಗವಹಿಸಿ 50 ಸಾವಿರ ರೂಪಾಯಿಯವರೆಗೆ ಬಹುಮಾನ ಗೆಲ್ಲುವ ಅವಕಾಶ ನಿಮಗಿದೆ.

ಹೌದು, ಚಿಕ್ಕಮಗಳೂರ ಜಿಲ್ಲೆಯ ತರೀಕೆರೆ ತಾಲೂಕಿನ ಚೌಡೇಶ್ವರಿ ಯುವಕ ಸಂಘದ ವತಿಯಿಂದ ಅಂತರಘಟ್ಟಮ್ಮ ಹಬ್ಬದ ಪ್ರಯುಕ್ತ ನಾಲ್ಕನೇ ವರ್ಷದ ರಾಜ್ಯಮಟ್ಟದ ಜೋಡಿ ಎತ್ತಿನಗಾಡಿ ಸ್ಪರ್ಧೆಯನ್ನು ಪಟ್ಟಣದ ರಿಲಯನ್ಸ್ ಪೆಟ್ರೋಲ್ ಬಂಕ್ ಪಕ್ಕದ ಬಯಲಿನಲ್ಲಿ 13ರಂದು ಬೆಳಿಗ್ಗೆ 9.30ಕ್ಕೆ ಹಮ್ಮಿಕೊಂಡಿದೆ. ಆಸಕ್ತ ರೈತರು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.

ಪ್ರವೇಶ ಶುಲ್ಕ ಒಂದು ಎತ್ತಿನ ಗಾಡಿಗೆ  2 ಸಾವಿರ ನಿಗದಿಪಡಿಸಲಾಗಿದ್ದು, ಎಲ್ಲಾ ತಳಿಯ ರಾಸುಗಳಿಗೆ ಪ್ರವೇಶವಿದೆ. ಪ್ರಥಮ ಬಹುಮಾನ  50 ಸಾವಿರ ರೂಪಾಯಿ, ದ್ವಿತೀಯ ಬಹುಮಾನ  40 ಸಾವಿರ ರೂಪಾಯಿ, ತೃತೀಯ ಬಹುಮಾನ  30 ಸಾವಿರ ರೂಪಾಯಿ ಹಾಗೂ ಆಕರ್ಷಕ ಟ್ರೋಫಿಯನ್ನು ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಕರಿಮಲ್ಲಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.