News

ಭಾರತೀಯ ಹೈನೋದ್ಯಮವು ಇಂದು ಜಾಗತಿಕವಾಗಿ ಹಬ್ಬಿದೆ-KJ ಚೌಪಾಲ್‌ನಲ್ಲಿ ಸೆಬಾಸ್ಟಿಯನ್‌ ಅಭಿಮತ

16 September, 2022 4:50 PM IST By: Maltesh
Communication Manager, International Dairy Federation, Sabastian Dates along with Rafael Cornes visit to Krishi jagaran

ನವದೆಹಲಿ: ಭಾರತದ ಹೈನೋದ್ಯಮವು ಜಾಗತಿಕವಾಗಿ ಪಸರಿಸಿದ್ದು ಭಾರತದ ಕೃಷಿ ಉದ್ಯಮಕ್ಕೆ ಸಾಕಷ್ಟು ಬಲ ನೀಡಿದೆ ಇದು ಕೃಷಿಯನ್ನು ಇನ್ನಷ್ಟು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಂತರಾಷ್ಟ್ರೀಯ ಡೈರಿ ಒಕ್ಕೂಟದ (America) ಕಮ್ಯೂನಿಕೆಶನ್‌ ಮ್ಯಾನೇಜರ್‌ ಸೆಬಾಸ್ಟಿಯನ್‌ ಡೇಟ್‌  ಹೇಳಿದರು.

ಈ ತಳಿಯ ಕೋಳಿ ವರ್ಷಕ್ಕೆ 300ಕ್ಕೂ ಹೆಚ್ಚು ಮೊಟ್ಟೆ ಇಡುತ್ತದೆ..ಸಾಕಾಣಿಕೆದಾರರಿಗೆ ಬಂಪರ್‌ ಆದಾಯ

ನಗರದ ಕೃಷಿ ಜಾಗರಣ ಮಾಧ್ಯಮ ಕಚೇರಿಯಲ್ಲಿ ಆಯೋಜಿಸಲಾಗಿದ್ದ KJ ಚೌಪಾಲ್‌ನಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ದೇಶವು ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿಕೊಂಡಿತು. ಇಲ್ಲಿನ ಸಂಸ್ಕೃತಿ ಮನಸೂರೆಗೊಳಿಸುವಂತಿದೆ ಎಂದು ತಿಳಿಸಿದರು. ಡೈರಿ ಉದ್ಯಮವು ಇಂದು ಹಳ್ಳಿಯಿಂದ ಹಿಡಿದು ಜಾಗತಿಕ ಮಟ್ಟದವರೆಗೆ ಬೆಳೆದು ನಿಂತಿದೆ. ಈ ಹೈನೋದ್ಯಮದಲ್ಲಿ ತಂತ್ರಜ್ಞಾನಗಳು ಕೂಡ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದೆ.

ಮುದ್ರಾ ಯೋಜನೆ:4 ಸಾವಿರ ರೂ ಅಪ್ಲಿಕೇಶನ್‌ ಫೀ ಕಟ್ಟಿದ್ರೆ ₹10 ಲಕ್ಷ ಸುಲಭ ಸಾಲ..!ಸರ್ಕಾರ ಹೇಳಿದ್ದೇನು..?

ಜನಸ್ನೇಹಿ ಹಾಗೂ ಪರಿಸರ ಸ್ನೇಹಿ ಅಭಿವೃದ್ಧಿ ತಂತ್ರಗಳ ಮೂಲಕ ನಾವು ಈ ಕ್ಷೇತ್ರದಿಂದ ಅಧಿಕ ಆದಾಯವನ್ನು ಪಡೆಯಬಹುದಾಗಿದೆ ಎಂದು. ಮುಂದುವರೆದು ಮಾತನಾಡಿ ಭಾರತ ದೇಶ ಸಾಮಾನ್ಯವಾಗಿ ಹಳ್ಳಿಗಳ ದೇಶವಾಗಿದ್ದು ಇಲ್ಲಿ ಕೃಷಿಗೆ ತನ್ನದೆಯಾದ ಪ್ರಧಾನ್ಯತೆ ಇದೆ ಎಂಬುದು ನಮಗೆಲ್ಲ ಗೊತ್ತಿರುವ ವಿಚಾರ. ಅದರಲ್ಲೂ ವಿಶೇಷವಾಗಿ ಈ ಹೈನೋದ್ಯಮದಕ್ಕೆ ಇಲ್ಲಿಯ ವಾತಾವರಣ ತುಂಬು ಪೂರಕವಾಗಿ ಬೆಂಬಲ ನೀಡುತ್ತದೆ. ಈ ಎಲ್ಲ ಅನೂಕೂಲಗಳಿಂದ ನಾವು ಹೈನೋದ್ಯಮದಲ್ಲಿ ನಲಮ್ಮ ಕನಸುಗಳನ್ನು ಈಡೇರಿಸಿಕೊಳ್ಳಬಹುದು ಎಂದರು.

ಇನ್ನು ನಮ್ಮನ್ನ ಭಾರತಕ್ಕೆ ಬಂದಾಗ ಇಲ್ಲಿಯ ಜನರು ತುಂಬಾ ಪ್ರೀತಿಯಿಂದ ಬರಮಾಡಿಕೊಂಡರು. ಇಲ್ಲಿಯ ಸಂಸ್ಕೃತಿ, ಆಚಾರ ಪದ್ಧತಿಗಳು ಭಿನ್ನವಾಗಿದ್ದು ನನ್ನನ್ನು ಖುಷಿಪಡಿಸಿದೆ ಎಂದು ಅವರು ಹೇಳಿದರು. ಇನ್ನು ಕಾರ್ಯಕ್ರಮದಲ್ಲಿ ಹಾಜರಿದದದ ಇನ್ನೋರ್ವ ಅಥಿತಿಯಾದ ಮಾಸ್ಟರ್‌ ನ್ಯೂಟ್ರಿಷನಿಸ್ಟ್‌, (Pan American Dairy Federation Uruguay) ಜಾಗತಿಕ ಕೃಷಿ ಹಾಗೂ ಡೈರಿ ಉದ್ಯಮದಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದರು. ಅಷ್ಟೇ ಅಲ್ಲದೆ ಹಾಲಿನಲ್ಲಿ ಸಾಕಷ್ಟು ಪ್ರೋಟೀನ್‌ಗಳಿದ್ದು ಅದು ದೇಹಕ್ಕೆ ಉತ್ತಮವಾದ ಆಹಾರವಾಗಿದೆ. ಇಂದು ಸಾಕಷ್ಟು ಕೆಮಿಕಲ್‌ ಮಿಕ್ಸ್‌ ಹಾಲು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಅವುಗಳ ಕಡಿವಾಣಕ್ಕೆ ಕಟಿಬದ್ಧರಾಗಿ ನಿಲ್ಲಬೇಕು ಎಂದರು.

Edible Oil Price: ಗ್ರಾಹಕರಿಗೆ ಗುಡ್ ನ್ಯೂಸ್.. ತಾಳೆ ಎಣ್ಣೆ ಬೆಲೆ ಮತ್ತಷ್ಟು ಇಳಿಕೆ!

ಇನ್ನು ಕಾರ್ಯಕ್ರಮದಲ್ಲಿ ಕೃಷಿ ಜಾಗರಣದ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ ಎಂ.ಸಿ. ಡೊಮಿನಿಕ್‌, ನಿರ್ದೇಶಕಿ ಶೈನಿ ಡೊಮಿನಿಕ್‌, ಕಾರ್ಪೋರೇಟ್‌ ವ್ಯವಹಾರಗಳ ವಿಭಾಗದ ಉಪಾಧ್ಯಕ್ಷ ಪಿ.ಎಸ್‌.ಸೈನಿ, ಸಿಒಒ ಪಿ.ಕೆ.ಪಂತ್‌ ಸೇರಿದಂತೆ ಕೃಷಿ ಜಾಗರಣದ ಮಾಧ್ಯಮ ಸಂಸ್ಥೆಯ ಸಿಬ್ಬಂದಿ ಭಾಗವಹಿಸಿದ್ದರು.