ದಿನದ ಪ್ರಮುಖ ಹಾಗೂ ಕೃಷಿ ಸುದ್ದಿಗಳನ್ನು ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಕನ್ನಡ ಯೂಟ್ಯೂಬ್ ಸುದ್ದಿ ಪ್ರಸಾರ ಮಾಡುತ್ತಿದೆ.
ನೀವು ಇಂದಿನ ಪ್ರಮುಖ ಸುದ್ದಿಗಳನ್ನು ನೋಡುವುದಾದರೆ, ರಾಜ್ಯದ ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಕರ್ನಾಟಕ ಭಾಗದಲ್ಲಿ ಮಳೆಯಾಗಲಿದೆ. ಇನ್ನೂ ಎರಡು ದಿನ ಮಳೆ ಮುಂದುವರಿಯಲಿದೆ
ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಸಮುದ್ರದಲ್ಲಿ ಪ್ರಕ್ಷುಬದ್ಧ ಸ್ಥಿತಿ ಇರಲಿದ್ದು,
ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಉತ್ತರ ಭಾರತದಲ್ಲಿ ಶೀತಗಾಳಿ ವಿಪರೀತವಾಗಿದೆ.
ಕನಿಷ್ಠ ಬೆಂಬಲ ಬೆಲೆಯೊಂದಿಗೆ ದ್ವಿದಳ ಧಾನ್ಯ ಖರೀದಿಸುವುದಾಗಿ ಅಮಿತ್ ಶಾ ಹೇಳಿದ್ದಾರೆ. ಈ ಎಲ್ಲ ಸುದ್ದಿಗಳ ವಿವರ ನೋಡೋಣ ಮೊದಲಿಗೆ ಮುಖ್ಯಾಂಶಗಳು.
- ಪರಿಷ್ಕೃತ ರಬ್ಬರ್ (ಉತ್ತೇಜನೆ ಮತ್ತು ಅಭಿವೃದ್ಧಿ) ಮಸೂದೆ ಬಗ್ಗೆ ಚರ್ಚೆ
- ಕನಿಷ್ಠ ಬೆಂಬಲ ಬೆಲೆಯೊಂದಿಗೆ ದ್ವಿದಳ ಧಾನ್ಯ ಖರೀದಿ: ಅಮಿತ್ ಶಾ
- ಉತ್ತರ ಭಾರತದಲ್ಲಿ ಎರಡು ದಿನ ಶೀತಗಾಳಿ
- ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ, ಮೀನುಗಾರರಿಗೆ ಎಚ್ಚರಿಕೆ
- ಶೀತಗಾಳಿ ಶಾಲೆಗಳಿಗೆ ರಜೆ ಘೋಷಣೆ
- ಎಪಿಎಂಸಿ ಅಭಿವೃದ್ಧಿಗಾಗಿ 33 ಕೋಟಿ ಅನುದಾನ
ಸುದ್ದಿಗಳ ವಿವರ ಈ ರೀತಿ ಇದೆ.
1. ಪರಿಷ್ಕೃತ ರಬ್ಬರ್ (ಉತ್ತೇಜನೆ ಮತ್ತು ಅಭಿವೃದ್ಧಿ) ಮಸೂದೆ - 2023ರ ಚರ್ಚೆಯಲ್ಲಿ ಕನಿಷ್ಠ ಬೆಂಬಲ ಬೆಲೆ (MSP) ಅನ್ನು
ಸೇರಿಸುವುದು ವಿವಾದಾತ್ಮಕ ವಿಷಯವಾಗಿ ಮಾರ್ಪಟ್ಟಿದೆ. ಬೆಳೆಗಾರರು ಕೃಷಿಯ ಕೊಡುಗೆಯೊಂದಿಗೆ MSP ಅನ್ನು ಮಸೂದೆಯಲ್ಲಿ
ಅಳವಡಿಸಲು ಪ್ರತಿಪಾದಿಸುತ್ತಿದ್ದಾರೆ. ರಬ್ಬರ್ ಉದ್ಯಮವನ್ನು ಉತ್ತೇಜಿಸುವುದು ಮತ್ತು ಅಭಿವೃದ್ಧಿಪಡಿಸುವುದು ಮತ್ತು ಸಮಕಾಲಿನ
ಅಗತ್ಯಗಳಿಗೆ ಅನುಗುಣವಾಗಿ ರಬ್ಬರ್ ಮಂಡಳಿಯನ್ನು ಸ್ಥಾಪಿಸುವುದು ಮಸೂದೆಯ ಪ್ರಾಥಮಿಕ ಉದ್ದೇಶಗಳಾಗಿವೆ.
ಕಳೆದ ತಿಂಗಳು ಕೇರಳ, ತಮಿಳುನಾಡು ಮತ್ತು ಕರ್ನಾಟಕದ ಉದ್ಯಮದ ಪಾಲುದಾರರ ಸಹಯೋಗದೊಂದಿಗೆ
ರಬ್ಬರ್ ಮಂಡಳಿಯು ಮಸೂದೆಯ ಕುರಿತು ಚರ್ಚೆ ನಡೆಸಿತ್ತು.
-------------------------------
2027ರ ಒಳಗಾಗಿ ಭಾರತವು ದ್ವಿದಳ ಧಾನ್ಯದಲ್ಲಿ ಸ್ವಾವಲಂಬನೆಯಾಗಲಿದೆ ಎಂದು ಕೇಂದ್ರ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಹೆಸರುಕಾಳು ಮತ್ತು ಬೇಳೆ ಉತ್ಪಾದನೆಯಲ್ಲಿ ಭಾರತ ಈಗಾಗಲೇ ಸ್ವಾವಲಂಬಿಯಾಗಿದೆ. ಇದರೊಂದಿಗೆ ದ್ವಿದಳ ಧಾನ್ಯಗಳನ್ನು ಆಮದು ಮಾಡಿಕೊಳ್ಳುತ್ತಿದೆ ಎಂದಿದ್ದಾರೆ.
9 ವರ್ಷಗಳಲ್ಲಿ ಸರ್ಕಾರ ದ್ವಿದಳ ಧಾನ್ಯಗಳ ಉತ್ಪಾದನೆ ಹೆಚ್ಚಿಸಲು ಹಲವು ಕ್ರಮ ಕೈಗೊಳ್ಳಲಾಗಿದೆ.
2013-14ರಲ್ಲಿ 19 ಮಿಲಿಯನ್ ಟನ್‌ಗಳಷ್ಟಿದ್ದ ದ್ವಿದಳ ಧಾನ್ಯಗಳ ಉತ್ಪಾದನೆ ಪ್ರಮಾಣವೂ 2022-23ರಲ್ಲಿ 26 ಮಿಲಿಯನ್
ಟನ್‌ಗಳಿಗೆ ಏರಿಕೆ ಕಂಡಿದೆ ಎಂದಿದ್ದಾರೆ. ಇನ್ನು ರೈತರು ಎನ್‌ಸಿಸಿಎಫ್, ನಫೆಡ್‌ಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕು.
ನೋಂದಾಯಿತ ಎಲ್ಲ ರೈತರಿಂದ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಯೊಂದಿಗೆ ದ್ವಿದಳ ಧಾನ್ಯ ಖರೀದಿಸಲಿದೆ ಎಂದು ಹೇಳಿದ್ದಾರೆ.
-------------------------------
ಉತ್ತರ ಭಾರತದ ಪಂಜಾಬ್, ಹರಿಯಾಣ, ಚಂಡೀಗಢ, ರಾಜಸ್ಥಾನ ಹಾಗೂ ದೆಹಲಿಯಲ್ಲಿ ಮುಂದಿನ ಎರಡು ದಿನಗಳ ಕಾಲ
ತೀವ್ರ ಚಳಿ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ರಾಜ್ಯಗಳಲ್ಲಿ ಚಳಿ ಪ್ರಮಾಣವು 6 ರಿಂದ 9 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
-------------------------------
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಮುಂದುವರಿದಿದೆ.
ಕರಾವಳಿ ಹಾಗೂ ದಕ್ಷಿಣ ಕರ್ನಾಟಕದ ಕೆಲವು ಭಾಗಗಳಲ್ಲಿ ಮಳೆಯಾಗಲಿದೆ.
ಉತ್ತರ ಕರ್ನಾಟಕದ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.
ಮೀನುಗಾರರಿಗೆ ಎಚ್ಚರಿಕೆ: ಸಮುದ್ರದಲ್ಲಿ ಪ್ರಕ್ಷುಬದ್ಧ ವಾತಾವರಣ ಇರುವುದರಿಂದ ಮೀನುಗಾರರು
ಸಮುದ್ರಕ್ಕೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇನ್ನು
ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ
ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.
-------------------------------
ಶೀತಗಾಳಿ ಪರಿಸ್ಥಿತಿಯನ್ನು ಗಮನದಲ್ಲಿ ಇರಿಸಿಕೊಂಡು ಉತ್ತರ ಪ್ರದೇಶದ ಲಕ್ನೋ ಜಿಲ್ಲಾಡಳಿತವು 8ನೇ ತರಗತಿಯವರೆಗಿನ ಎಲ್ಲಾ
ತರಗತಿಗಳನ್ನು ಜನವರಿ 10 ರವರೆಗೆ ಬದಲಾವಣೆ ಮಾಡಲು ಮುಂದಾಗಿದೆ. ಶೀತ ಹವಾಮಾನದ ಹಿನ್ನೆಲೆಯಲ್ಲಿ
9ರಿಂದ12ನೇ ತರಗತಿಯ ಶಾಲೆಗಳು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ತೆರೆದಿರುತ್ತವೆ ಎಂದು ಜಿಲ್ಲಾಡಳಿತ ತಿಳಿಸಿದೆ
-------------------------------
ನಬಾರ್ಡ್ ಯೋಜನೆಯಡಿ ಕೃಷಿ ಮಾರುಕಟ್ಟೆ ಇಲಾಖೆಯಿಂದ ಮೂರು ವಿವಿಧ ಎಪಿಎಂಸಿ ಸಮಿತಿಗಳಲ್ಲಿ
ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಮುಂದಾಗಿದೆ. ಅಲ್ಲದೇ ಇಲ್ಲಿ ವಿವಿಧ ಹಂತದ ಅಭಿವೃದ್ಧಿ
ಕಾಮಗಾರಿಗಳನ್ನು ಸಹ ಮಾಡಲು ನಿರ್ಧರಿಸಲಾಗಿದ್ದು, ಇದಕ್ಕಾಗಿ 33 ಕೋಟಿ ಅನುದಾನ ಮೀಸಲಿಡಲು ಸಚಿವ
ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿದೆ.
-------------------------------
ಜಾಗತಿಕ ಬಂಡವಾಳ ಹೂಡಿಕೆದಾರರ ಎರಡು ದಿನಗಳ ಸಮಾವೇಶವನ್ನು ಸೋಮವಾರದಿಂದ ಚೆನ್ನೈನಲ್ಲಿ ಆಯೋಜಿಸಲಾಗಿದೆ.
ಈ ಸಮಾವೇಶದಲ್ಲಿ ಜರ್ಮನಿ, ಡೆನ್ಮಾರ್ಕ್, ಸಿಂಗಾಪುರ್, ದಕ್ಷಿಣ ಕೊರಿಯಾ, ಜಪಾನ್, ಫ್ರಾನ್ಸ್, ಆಸ್ಟ್ರೇಲಿಯಾ
ಹಾಗೂ ಯುನೈಟೆಡ್ ಕಿಂಗ್‌ಡಮ್ ದೇಶಗಳು ಸೇರಿದಂತೆ 30 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
-------------------------------
ರಾಜ್ಯದಲ್ಲಿ ನಡೆಯುತ್ತಿದ್ದ ಅತಿಥಿ ಉಪನ್ಯಾಸಕರ ಮುಷ್ಕಾರ ನಿಲ್ಲುವ ಸಾಧ್ಯತೆ ಇದೆ.
ಗೌರವಧನದಲ್ಲಿ ಹೆಚ್ಚುವರಿಯಾಗಿ 3 ಸಾವಿರ ರೂಪಾಯಿ ಹಾಗೂ ಮಹಿಳೆಯರಿಗೆ ಮಾತೃತ್ವ ರಜೆ ನೀಡಲು ಮುಖ್ಯಮಂತ್ರಿ
ಸಿದ್ದರಾಮಯ್ಯ ಅವರು ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ, ಮುಷ್ಕರ ಕೈಬಿಟ್ಟು ಸೋಮ
ವಾರದಿಂದ ಕರ್ತವ್ಯಕ್ಕೆ ಹಾಜರಾಗಲು ಅತಿಥಿ ಉಪನ್ಯಾಸಕರು ಒಪ್ಪಿದ್ದಾರೆ ಎನ್ನಲಾಗಿದೆ.
-------------------------------