News

ವಿವಿಧ ನಿಗಮಗಳ ಫಲಾನುಭವಿಗಳಿಗೆ 900 ಕೋಟಿ ರೂ ಬಿಡುಗಡೆಗೊಳಿಸಿದ ಸಿಎಂ ಬೊಮ್ಮಾಯಿ

12 March, 2023 9:52 AM IST By: Maltesh
CM Bommai released Rs 900 crore to the beneficiaries of various corporations

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಿಂದುಳಿದ ವರ್ಗಗಳ ವಿವಿಧ ನಿಗಮಗಳ ವತಿಯಿಂದ ಒಂದು ಲಕ್ಷದ ೧೪ ಸಾವಿರ ಫಲಾನುಭವಿಗಳಿಗೆ ೯೦೦ ಕೋಟಿ ರೂಪಾಯಿಗಳನ್ನು ಇಂದು ಬಿಡುಗಡೆ ಮಾಡಿದರು.    ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಿವಿಧ ಅಭಿವೃದ್ಧಿ ನಿಗಮದಿಂದ ಸವಲತ್ತು ವಿತರಿಸಿ ಅವರು ಮಾತನಾಡಿದರು.

ಗಂಗಾ ಕಲ್ಯಾಣ ಯೋಜನೆ ತ್ವರಿತ ಅನುಷ್ಠಾನಕ್ಕಾಗಿ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗುವುದು ಎಂದರು. ಯೋಜನೆಯ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಿ, ಫಲಾನುಭವಿಗಳು ಸೌಲಭ್ಯವನ್ನು ತ್ವರಿತವಾಗಿ ಪಡೆಯಲು ಅನುಕೂಲವಾಗುವಂತೆ ಮೊದಲನೇ ಕಂತಿನ ೭೫ ಸಾವಿರ ರೂಪಾಯಿಗಳನ್ನು ಇಂದೇ ನೇರ ನಗದು ವರ್ಗಾವಣೆ ಮೂಲಕ ಅವರ ಬ್ಯಾಂಕ್ ಖಾತೆಗೆ ತುಂಬಲಾಗುವುದು ಎಂದು ಅವರು ತಿಳಿಸಿದರು.

ಹಾವೇರಿ ಜಿಲ್ಲೆಯ ರೈತರ ಕನಸು ನನಸಾಗಿದೆ -ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಶೋಷಿತರು, ದಮನಿತರ ಭಾವನೆ ಅರ್ಥ ಮಾಡಿಕೊಂಡು ಕೆಲಸ ಮಾಡಿದಾಗ ಜನಪರ ಮತ್ತು ಸ್ಪಂದನಾಶೀಲಾ ಹಾಗೂ ಸಾರ್ಥಕ ಸರ್ಕಾರ ನೀಡಿದಂತಾಗುತ್ತದೆ ಎಂಬ ಗುರಿ ಅಧಿಕಾರ ನಡೆಸುವವರಿಗೆ ಇರಬೇಕು ಎಂದು ಮುಖ್ಯಮಂತ್ರಿ ಹೇಳಿದರು. ಕಾರ್ಯಕ್ರಮದಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.   

ಸರ್ಕಾರ ಜನರಿಂದ ಸ್ಥಾಪಿತವಾಗಿದ್ದು, ಇದರ ಅರಿವಿನಿಂದ ಈ ಸೌಧದಲ್ಲಿ ಕೆಲಸ ಮಾಡಬೇಕು.  ನ್ಯಾಯ ಕೊಡುವ ಭ್ರಮೆ ಹುಟ್ಟಿಸುವುದರಿಂದ ಬದುಕು ಬಂಗಾರವಾಗೋಲ್ಲ. ಹುಸಿ  ಭರವಸೆಯನ್ನ ಕೊಟ್ಟು  ನ್ಯಾಯವನ್ನು ನೀಡಲಾಗದು. ವಸ್ತುನಿಷ್ಠವಾಗಿ ಬದುಕಿನಲ್ಲಿ

ಸ್ವಾಭಿಮಾನ ಬದುಕನ್ನ ಬದಕಲು ಸಾಧ್ಯವೆಂದು ಮನಗಂಡು ಸರ್ಕಾರ   ಕಾರ್ಯಕ್ರಮ ರೂಪಿಸಿದಾಗ ಮಾತ್ರ ಬದಲಾವಣೆ  ಸಾಧ್ಯ ಎಂದರು.

ಹಿಂದುಳಿದವರ  ಬದುಕು ಹಸನಾದಾಗ ಪ್ರಜಾಪ್ರಭುತ್ವದ ಗೆಲುವು ಆಗುತ್ತದೆ.

ಸಮಯ ಬಂದಾಗ ನಿಮ್ಮ ಪರವಾದ ನಿರ್ಣಯ ತೆಗೆದುಕೊಳ್ಳುವವರೇ ನಿಜವಾದ ಹಿಂದುಳಿದ ವರ್ಗಗಳ  ನಾಯಕರು ಎಂದರು.

ಹಳ್ಳಿಯ ಎಲ್ಲ ಮನೆಗಳು ಆರ್.ಸಿ.ಸಿ ಆಗಬೇಕು- ಸಿಎಂ ಬೊಮ್ಮಾಯಿ

ಒಂದು ಲಕ್ಷ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ

ಗಂಗಕಲ್ಯಾಣ, 50  ಕನಕದಾಸ ಹಾಸ್ಟೆಲ್, ಸ್ವಯಂ ಉದ್ಯೋಗ,  ಹೊಲಿಗೆ ತರಬೇತಿ ಸೇರಿದಂತೆ ಹಲವು ವಿತರಣೆ

ವಿದ್ಯಾಸಿರಿ ಯೋಜನೆ ಹಾಗೂ ಹಾಸ್ಟೆಲ್ ಮೂಲಕ ಸುಮಾರು ಒಂದು  ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಹಿಂದುಳಿದ ವರ್ಗದ ಮಕ್ಕಳು ವಿದ್ಯಾವಂತರು ಆಗಬೇಕು,ಅವರು ಇತರರಂತೆ ಮುಂದೆ ಬರಬೇಕು. ,ಹಳ್ಳಿಗಳಲ್ಲಿ ಹಿಂದುಳಿದ ವರ್ಗದವರಿಗೆ,  ಕಾಯಕ  ಕಾರ್ಯಕ್ರಮದ ಮೂಲಕ 50 ಸಾವಿರದವರೆಗೂ ನೀಡಲಾಗುತ್ತಿದೆ. ಅವಶ್ಯಕತೆಗೆ ಅನುಸಾರವಾಗಿ 33 ಸಾವಿರ ಮಕ್ಕಳಿಗೆ ವಿದ್ಯಾರ್ಥಿನಿಲಯದ ಸೌಕರ್ಯ ಕಲ್ಪಿಸಲಾಗಿದೆ.  ಈ ವರ್ಷ ಹೆಚ್ಚುವರಿಯಾಗಿ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಮನೆ ಪೂರ್ತಿಗೊಳಿಸದ ಗುತ್ತಿಗೆದಾರನಿಗೆ ಬಿತ್ತು ಬರೋಬ್ಬರಿ 7 ಲಕ್ಷ ರೂ ದಂಡ!

ದೇವರಾಜ ಅರಸು ಹಿಂದುಳಿದ ಆಯೋಗ ರಚಿಸಿ  ಹಿಂದುಳಿದವರಿಗೆ  ಮೀಸಲಾತಿ ನೀಡಿದ  ನಾಯಕ ಡಿ.ದೇವರಾಜ ಅರಸು ಅವರು.

ರೈತ ಕಾರ್ಮಿಕರಿಗೆ  ವಿದ್ಯಾ ನಿಧಿ ವಿಸ್ತರಿಸಲಾಗಿದೆ. ಸಫಾಯಿ ಕರ್ಮಚಾರಿಗಳಿಗೆ 11, 141 ಜನರೊಗೆ ಖಾಯಂ ಗೊಳಿಸಿ ಒಟ್ಟು 24 ಸಾವಿರ  ಪೌರ ಕಾರ್ಮಿಕರಿಗೆ ಖಾಯಂ ಮಾಡಿದಲಾಗಿದೆ.  ಸ್ಮಶಾನ ಕಾರ್ಮಿಕರ ಜೀವನಕ್ಕೆ  ಭದ್ರತೆ ನೀಡಿದೆ. ಕುರಿಗಾಹಿಗಳಿಗೆ ೩೫೦ ಕೋಟಿ ವೆಚ್ಚದಲ್ಲಿ ಸಹಾಯ  ಮಾಡಲಾಗಿದೆ ಎಂದರು.