News

PM Kisan ಹಣ ಪಡೆಯಲು ರೈತರು ಜುಲೈ 31ರೊಳಗೆ e-KYC ಮಾಡಿಸುವಂತೆ ಸಿಎಂ ಬೊಮ್ಮಾಯಿ ಸೂಚನೆ..

26 July, 2022 5:04 PM IST By: Kalmesh T
CM Bommai instructed to do e-KYC by July 31 to get PM Kisan financial assistance.

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ಆರ್ಥಿಕ ನೆರವು ಪಡೆಯಲು ಬಯಸುವ ರೈತರು ಇದೆ ತಿಂಗಳ ಅಂದರೆ ಜುಲೈ 31ರೊಳಗೆ ಇಕೆವೈಸಿ ಮಾಡಿಸಿಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ರೈತರಿಗೆ ಸೂಚಿಸಿದ್ದಾರೆ.

ಇದನ್ನೂ ಓದಿರಿ: PLI scheme: ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿದೆ ಬರೋಬ್ಬರಿ 120 ಕೋಟಿ ಪ್ರೋತ್ಸಾಹಧನ! ಯಾರು ಅರ್ಹರು? ಏನು ಪ್ರಯೋಜನ? ಇಲ್ಲಿದೆ ಡಿಟೇಲ್ಸ್

ಅಗಸ್ಟ್-ನವಂಬರ್ ಅವಧಿಯ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ( PMKisan ) ಆರ್ಥಿಕ ನೆರವು ವರ್ಗಾವಣೆಗಾಗಿ 31 ಜುಲೈ 2022 ರೊಳಗಾಗಿ e-KYC ಮಾಡಿಕೊಳ್ಳಲು ರಾಜ್ಯದ ರೈತ ಬಾಂಧವರಲ್ಲಿ ಸಿಎಂ ಬೊಮ್ಮಾಯಿಯವರು ಮನವಿ ಮಾಡಿಕೊಂಡಿದ್ದಾರೆ.

PM-KISAN ಯೋಜನೆಯಡಿ ಆರ್ಥಿಕ ನೆರವು

ನಾಗರಿಕ ಸೇವಾ ಕೇಂದ್ರಗಳಲ್ಲಿ Biometric e-KYC ಯನ್ನು ಹಾಗೂ OTP ಆಧಾರಿತ e-KYC ಯನ್ನು ಕೇಂದ್ರ ಸರ್ಕಾರದ PM-KISAN Farmers Corner ಮಾಡಿಸಿಕೊಳ್ಳಲು ಕೋರಿದೆ.

ಈ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ಆರ್ಥಿಕ ನೆರವು ಪಡೆಯಲು ಬಯಸುವ ರೈತರು ಒಂದು ವೇಳೆ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಸಮಸ್ಯೆ ಅನುಭವಿಸುತ್ತಿದ್ದರೆ ಅಥವಾ ಆರ್ಥಿಕ ನೆರವು ವರ್ಗಾವಣೆಯಾಗದಿರುವ ರೈತರು ತಮ್ಮ ಬ್ಯಾಂಕ್‌ ಶಾಖೆಗಳನ್ನು ಸಂಪರ್ಕಿಸಿ 'ಆಧಾರ್ ಜೋಡಣೆ' ಮಾಡಿಸಿಕೊಳ್ಳಲು ಕೋರಿದೆ.

Dragon fruit: ಡ್ರ್ಯಾಗನ್‌ ಫ್ರೂಟ್‌ ಬೆಳೆದು 1.5 ಕೋಟಿ ಗಳಿಸುತ್ತಿರುವ ಡಾಕ್ಟರ್‌; ಇಲ್ಲಿದೆ ವೈದ್ಯರೊಬ್ಬರ ಕೃಷಿ ಕತೆ!

ಈ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ಆರ್ಥಿಕ ನೆರವು ಪಡೆಯಲು ಬಯಸುವ ರೈತರು ಯಾವುದೇ ರೀತಿಯ ಹೆಚ್ಚಿನ ಮಾಹಿತಿಯನ್ನು ಪಡೆಯಲು ಬಯಸಿದರೆ ನಿಮ್ಮ ಸಮೀಪದ ಕೃಷಿ ಇಲಾಖೆಗಳನ್ನು ಸಂಪರ್ಕಿಸಿ ಅವರಿಂದ ಮಾಹಿತಿ ಪಡೆಯುವಂತೆಯೂ ಸಿಎಂ ಬೊಮ್ಮಾಯಿಯವರು ತಿಳಿಸಿದ್ದಾರೆ.

Pm Kisan 12 Installment-ekyc:

ಈ ಯೋಜನೆಯ ಪ್ರಯೋಜನವನ್ನು ಪಡೆಯಲು ರೈತರು ಇ-ಕೆವೈಸಿ ಪಡೆಯುವುದು ಕಡ್ಡಾಯವಾಗಿದೆ. ರೈತರು ಇ-ಕೆವೈಸಿ ಮಾಡದಿದ್ದರೆ ಮುಂದಿನ ಕಂತಿನ ಹಣ ಅವರ ಖಾತೆಗೆ ಬರುವುದಿಲ್ಲ.

ಇ-ಕೆವೈಸಿಯನ್ನು ಪಡೆಯಲು ಸರ್ಕಾರವು ಜುಲೈ 31 ರವರೆಗೆ ಕೊನೆಯ ದಿನಾಂಕವನ್ನು ಇರಿಸಿದೆ. ಹಾಗಾದರೆ ಇ-ಕೆವೈಸಿ ಮಾಡಲು ಸುಲಭವಾದ ಮಾರ್ಗ ಇಲ್ಲಿದೆ.

PM ಫಸಲ್ ಬಿಮಾ ಯೋಜನೆ: 5 ವರ್ಷದಲ್ಲಿ ಬರೋಬ್ಬರಿ ₹40,000 ಕೋಟಿ ಗಳಿಸಿದ ವಿಮಾ ಕಂಪನಿಗಳು! ಆದರೆ ರೈತರಿಗೆಷ್ಟು?

PM Kisan ಇ-ಕೆವೈಸಿ ಮಾಡಲು ಸುಲಭವಾದ ಮಾರ್ಗ ಹೀಗಿದೆ:

ಇದಕ್ಕಾಗಿ ರೈತರು ಮೊದಲು PM Kisan ನ ಅಧಿಕೃತ ವೆಬ್‌ಸೈಟ್ pmkisan.gov.in ಗೆ ಹೋಗಬೇಕು.

ಮುಖಪುಟವನ್ನು ತೆರೆದ ನಂತರ ನೀವು Farmers Corner ಅನ್ನು ನೋಡುತ್ತೀರಿ, ಇಲ್ಲಿ ನೀಡಲಾದ e-KYC ಟ್ಯಾಬ್ ಅನ್ನು ಕ್ಲಿಕ್ ಮಾಡಿ.

ಇದರ ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ. ಆಧಾರ್ ಸಂಖ್ಯೆಯನ್ನು ನಮೂದಿಸುವ ಮೂಲಕ ಇಲ್ಲಿ ಕ್ಲಿಕ್ ಮಾಡಿ.

ಇದರ ನಂತರ, ನೀವು ಆಧಾರ್ ಸಂಖ್ಯೆಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ OTP ಅನ್ನು ಪಡೆಯುತ್ತೀರಿ, ಅದನ್ನು ಸಲ್ಲಿಸಿದ ನಂತರ, ನಿಮ್ಮ ಇ-ಕೆವೈಸಿ ಪೂರ್ಣಗೊಳ್ಳುತ್ತದೆ.

ಗಮನಿಸಿ- ರೈತ ಸಹೋದರರು ತಾವಾಗಿಯೇ ಇ-ಕೆವೈಸಿ ಮಾಡಲು ಸಾಧ್ಯವಾಗದಿದ್ದರೆ , ಅವರು ತಮ್ಮ ಹತ್ತಿರದ ಸಾರ್ವಜನಿಕ ಸೌಲಭ್ಯ ಕೇಂದ್ರ ಅಥವಾ ಸಾರ್ವಜನಿಕ ಸೇವಾ ಕೇಂದ್ರ ಅಥವಾ ಯಾವುದೇ ಸೈಬರ್‌ ಸೆಂಟರ್‌ಗೆ ಭೇಟಿ ನೀಡುವ ಮೂಲಕ ತಮ್ಮ ಇ-ಕೆವೈಸಿಯನ್ನು ಪಡೆಯಬಹುದು.

ಇದಕ್ಕಾಗಿ ನೀವು ನಿಮ್ಮ ಆಧಾರ್ ಮತ್ತು ಮೊಬೈಲ್ ಸಂಖ್ಯೆಯನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಬೇಕಾಗಿದೆ.