News

7ನೇ ವೇತನ ಆಯೋಗ ರಚಿಸುವುದಾಗಿ CM ಬೊಮ್ಮಾಯಿ ಘೋಷಣೆ!

07 April, 2022 5:15 PM IST By: Kalmesh T
CM Bommai announces formation of 7th pay commission

ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್‌ ಸುದ್ದಿ. ಈಗಾಗಲೇ ಕೇಂದ್ರ ಸರಕಾರಿ ನೌಕರರಿಗೆ 7ನೇ ವೇತನ ಆಯೋಗದ ಪ್ರಕಾರ ನೀಡಲಾಗುತ್ತಿದ್ದ ವೇತನದಂತೆ ರಾಜ್ಯ ಸರಕಾರಿ ನೌಕರರಿಗೂ 7ನೇ ವೇತನ ಆಯೋಗದ ಪ್ರಕಾರ ವೇತನ ನIಡಲು ಚಿಂತನೆ ನಡೆಸಿದೆ. ಈ ಕುರಿತು ಶೀಘ್ರದಲ್ಲೇ 7ನೇ ವೇತನ ಆಯೋಗ (7th pay commission) ರಚಿಸುವುದಾಗಿ 7ನೇ ವೇತನ ಆಯೋಗ (7th pay commission) ರಚಿಸುವುದಾಗಿ ಘೋಷಣೆ ಮಾಡಿದ್ದಾರೆ.

ಕೇಂದ್ರ ಸರ್ಕಾರಿ ನೌಕರರು ಪಡೆಯುತ್ತಿರುವ ವೇತನಕ್ಕೆ ಸಮನಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವೇತನವನ್ನೂ ಪರಿಷ್ಕಸಬೇಕೆಂಬ ಬಹುಕಾಲದ ಬೇಡಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಇದೀಗ ಸ್ಪಂದಿಸಿದ್ದಾರೆ.

ಇದನ್ನು ಓದಿರಿ: 

EPFO Big Update! ಯಾವ ದಿನ ಬರಲಿದೆ! Balance ಹಣ?

7th Pay commission! Indian Railways Employees! ಒಳ್ಳೆಯ ಸುದ್ದಿ!

ಹೌದು...ಆಯೋಗ ರಚಿಸುವ ವಿಚಾರವನ್ನ ಇತ್ತೀಚೆಗೆ ವಿಧಾನಸಭೆಯಲ್ಲಿ ಸಿಎಂ ತಿಳಿಸಿದ್ದು, ಆದಷ್ಟು ಬೇಗ ಆಯೋಗ ರಚಿಸುತ್ತೇನೆ. ಅದು ನೀಡುವ ವರದಿ ಆಧರಿಸಿ ನೌಕರರ ವೇತನ ಪರಿಷ್ಕರಣೆ ಮಾಡುಲಾಗುವುದು ಎಂದು ಭರವಸೆ ನೀಡಿದ್ದಾರೆ.

ನಾನು ಬಜೆಟ್‌ನಲ್ಲಿ ಯಾವುದೇ ಘೋಷಣೆ ಮಾಡದ ಕಾರಣ, ಸಂಘದ ಪದಾಧಿಕಾರಿಗಳು ನನ್ನನ್ನು ಭೇಟಿ ಮಾಡಿ ಬೇಡಿಕೆಯನ್ನು ಮುಂದಿಟ್ಟಿದ್ದರು. ಹಾಗಾಗಿ, ಆದಷ್ಟು ಬೇಗ ಆಯೋಗವನ್ನು ರಚಿಸಲು ನಿರ್ಧರಿಸಲಾಗಿದೆ. ಆಯೋಗ ಇತರ ರಾಜ್ಯಗಳ ನೌಕರರ ವೇತನವನ್ನು ಅಧ್ಯಯನ ಮಾಡಿ ಶಿಫಾರಸುಗಳನ್ನು ಮಾಡಲಿದೆ ಎಂದು ವಿಧಾನಸಭೆಯಲ್ಲಿ ಬಜೆಟ್ ಚರ್ಚೆ ವೇಳೆ ಬೊಮ್ಮಾಯಿಯವರು ತಿಳಿಸಿದರು.

3.5 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದು, 4.5 ಲಕ್ಷ ಉದ್ಯೋಗಗಳನ್ನು ಹೊರಗುತ್ತಿಗೆಗೆ ನೀಡಲಾಗಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಎಚ್‌ಕೆ ಪಾಟೀಲ್‌ ಅವರು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸಿಎಂ, 77,000 ಕೌಶಲ್ಯರಹಿತ ಗ್ರೂಪ್-ಡಿ ಸಿಬ್ಬಂದಿ ಸೇರಿದಂತೆ ಸುಮಾರು 91,000 ಮಂದಿಯನ್ನು ಮಾತ್ರ ಹೊರಗುತ್ತಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Money Tips! Rs. 5 ನೋಟ್ ನಿಂದ ನೀವು ಲಕ್ಷ ಗಳಿಸಬಹುದು!

ರೈತರಿಗೆ ಗುಡ್ ನ್ಯೂಸ್: ಸರ್ಕಾರಿ ಭೂಮಿಯಲ್ಲಿ ಕೃಷಿ: ಕೃಷಿ ಆಕಾಂಕ್ಷಿಗಳಿಗೆ ವರದಾನ ಈ ಯೋಜನೆ

ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಹೊರಗುತ್ತಿಗೆ ಸಿಬ್ಬಂದಿಯನ್ನೇ ಮುಂದುವರಿಸಿದರೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಮೀಸಲಾತಿ ನಿರಾಕರಣೆ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ತತ್ವಕ್ಕೆ ವಿರುದ್ಧವಾಗಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಸಲಹೆ ನೀಡಿದರು.

ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ನೌಕರರ ಪರವಾಗಿ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಆಯೋಗ ರಚಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಪಿಎಂ ಕಿಸಾನ್‌ : 46 ಲಕ್ಷಕ್ಕೂ ಹೆಚ್ಚು ರೈತರಿಗೆ 2,616 ಕೋಟಿ!

PM ಕಿಸಾನ್‌  ರೈತರಿಗೆ  ಬಿಗ್‌ ನ್ಯೂಸ್‌: OTP ಮೂಲಕ ಆಧಾರ್‌ ಕಾರ್ಡ್‌ e-KYC ರದ್ದು..

ಸರ್ಕಾರದ ಈ ಕ್ರಮದಿಂದ ಪ್ರಭಾವಿತರಾದ ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರ ನೇತೃತ್ವದ ತಂಡ ಬುಧವಾರ ಸಂಜೆ ಸಿಎಂ ಅವರನ್ನು ಭೇಟಿ ಮಾಡಿ. ಅಭಿನಂದನೆ ಸಲ್ಲಿಸಿತ್ತು.

ಕೇಂದ್ರ ಸರ್ಕಾರಿ ನೌಕರರಿಗೆ ಸರಿ ಸಮಾನವಾದ ವೇತನ ಶ್ರೇಣಿ, ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೆ ನೀಡಿದರೆ ವಾರ್ಷಿಕ 10,656 ಕೋಟಿ ಹೆಚ್ಚುವರಿಯಾಗಿ ಬೇಕಾಗುತ್ತದೆ. ಈಗ ಖಾಲಿ ಇರುವ 2.58 ಲಕ್ಷ ಹುದ್ದೆಗಳಿಂದಾಗಿ ಸರ್ಕಾರಕ್ಕೆ ವರ್ಷಕ್ಕೆ ಸುಮಾರು 8,531 ಕೋಟಿ ಉಳಿತಾಯವಾಗುತ್ತಿದೆ. ಆದ್ದರಿಂದ ಸರ್ಕಾರಕ್ಕೆ ಹೆಚ್ಚುವರಿಯಾಗಿ 2,125 ಕೋಟಿ ಬೇಕಾಗುತ್ತದೆ. ಇದನ್ನಾಧರಿಸಿ ಪರಿಷ್ಕರಣೆ ಮಾಡಬೇಕೆಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಸಿಎಂಗೆ ಮನವಿ ಮಾಡಿಕೊಂಡಿದ್ದರು.

ಕೋಳಿ ಸಾಕಣೆಗೆ ಮುನ್ನ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಯಾವವು..?

Indoor Fish Farming: ಒಳಾಂಗಣ ಮೀನು ಸಾಕಾಣಿಕೆ ಮಾಡಿ 3 ಪಟ್ಟು ಲಾಭ ಗಳಿಸಿ